ಆಧಾರ ಕೇಂದ್ರದಲ್ಲಿ ದಟ್ಟನೆ

0
9
loading...

 

ಬೆಳಗಾವಿ, ಸೆ.24; ರಾಷ್ಟ್ತ್ರೀಯ ಗುರುತಿನ ಪತ್ರ ಆಧಾರ ಕಾರ್ಡ ಪಡೆಯಲು ಬೆಳಗಾವಿಯ ಎಲ್ಲ ಕೇಂದ್ರಗಳಲ್ಲಿಯೂ ದಿನನಿತ್ಯ ಜನದಟ್ಟನೆ ಹೆಚ್ಚಾಗುತ್ತಿದೆ. ಕೆಲ ಆಧಾರ ಕೇಂದ್ರಗಳಲ್ಲಿ ವೇಗವಾಗಿ ಕಾರ್ಯ ನಡೆಯುತ್ತಿಲ್ಲ ಎನ್ನುವ ಅಸಮಾಧಾನ ಜನತೆಯದ್ದು, ಇಡಿ ದಿನ ಆಧಾರ ಕಾರ್ಡ್ಗಾಗಿ ಪರಿತಪಿಸುವ ಸಮಸ್ಯೆ ಹೆಚ್ಚುತ್ತಲೆ ಸಾಗಿದೆ. ವಾರ್ಡ್ವಾರು ಆಧಾರ ಕೇಂದ್ರಗಳನ್ನು ಆರಂಭಿಸಬೇಕೆನ್ನುವ ಆಗ್ರಹ ಜನತೆಯಿಂದ ಕೇಳಿ ಬರುತ್ತಿದೆ. ಅಲ್ಲದೆ, ಬಹಳಷ್ಟು ಜನರಿಗೆ ಆಧಾರದ ಬಗ್ಗೆ ಮಾಹಿತಿ ಲಭ್ಯವಿಲ್ಲ. ಕಾರಣ ಕೇಂದ್ರಕ್ಕೆ ಹೋಗಿ ವಾಪಸ್ಸಾಗುವ ಜನರ ಸಂಖ್ಯೆ ಹೆಚ್ಚಾಗಿದೆ. ಜಿಲ್ಲಾಡಳಿತ ನಗರ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಹೆಚ್ಚುವರಿ ಆಧಾರ ಕೇಂದ್ರಗಳನ್ನು ಆರಂಭಿಸಿ ಸಮಯದ ಉಳಿತಾಯ ಮಾಡಬೇಕೆನ್ನುವ ಆಗ್ರಹ ಸಾರ್ವಜನಿಕರದ್ದು.

loading...

LEAVE A REPLY

Please enter your comment!
Please enter your name here