ಆರೋಗ್ಯ ಕವಚ 108 : ಸಿಬ್ಬಂದಿ ಮುಷ್ಕರ – ಪರ್ಯಾಯ ವ್ಯವಸ್ಥೆ

0
14
loading...

 

ಧಾರವಾಡ : ಜಿಲ್ಲೆಯಲ್ಲಿ ಸಾರ್ವಜನಿಕರ ಆರೋಗ್ಯ ಸೇವೆಗಳ ಅನುಕೂಲಕ್ಕಾಗಿ 108 ಆರೋಗ್ಯ ಕವಚ ಯೋಜನೆಯಡಿಯ ಎರಡು ವಾಹನಗಳ ಸೇವೆ ಹೊರತು ಪಡಿಸಿ ಉಳಿದ ಹದಿನಾಲ್ಕು ವಾಹನಗಳ ಸಿಬ್ಬಂದಿ ಸೆಪ್ಟೆಂಬರ್ 28 ರಿಂದ ಮುಷ್ಕರದಲ್ಲಿ ಭಾಗವಹಿಸಿದ್ದಾರೆ.  ಈ ಹಿನ್ನಲೆಯಲ್ಲಿ ಜಿಲ್ಲಾ ಆಡಳಿತ ಹಾಗೂ ಆರೋಗ್ಯ ಇಲಾಖೆ ಒಟ್ಟು 9 ಸ್ಥಳಗಳಲ್ಲಿ ನಿರಂತರ ಆರೋಗ್ಯ ಸೇವೆಯನ್ನು ನಡಲು ವ್ಯವಸ್ಥೆ ಮಾಡುತ್ತಿದ್ದು ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲವೆಂದು ಜಿಲ್ಲಾಧಿಕಾರಿ ದರ್ಪಣ ಜೈನ್ ತಿಳಿಸಿದ್ದಾರೆ.

ಸಾರ್ವಜನಿಕರು ಎಂದಿನಂತೆ 108 ದೂರವಾಣಿ ಸಂಖ್ಯೆಗೆ ಕರೆ ಮಾಡಿ ಉಚಿತ ತುರ್ತು ಆರೋಗ್ಯ ಸೇವೆಯನ್ನು ಪಡೆಯಬಹುದಾಗಿದೆ ಎಂದು  ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ: ಎನ್.ಎಂ.ಅಂಗಡಿ ತಿಳಿಸಿದ್ದಾರೆ. ಹುಬ್ಬಳ್ಳಿಯ ರಾಣಿ ಚೆನ್ನಮ್ಮ ವೃತ್ತ, ಚಿಟಗುಪ್ಪಿ ಆಸ್ಪತ್ರೆ, ಧಾರವಾಡ ಸರ್ಕಾರಿ ಆಸ್ಪತ್ರೆ, ಧಾರವಾಡ ಹಳೆ ಬಸ್ನಿಲ್ದಾಣ ಹತ್ತಿರ, ಹೈಕೋರ್ಟ ಸಂಚಾರಿ ಪೀಠ, ನವಲಗುಂದ, ಕುಂದಗೋಳ, ಮತ್ತು ಕಲಘಟಗಿ ತಾಲೂಕಾ ಆಸ್ಪತ್ರೆಗಳ ಹತ್ತಿರ ಹಾಗೂ ಹುಬ್ಬಳ್ಳಿ ತಾಲೂಕಿನ ವರೂರ ಗ್ರಾಮದ ಹತ್ತಿರ ಈ ವಾಹನಗಳ ಸೇವೆ ಲಭ್ಯವಿದೆ.  ಇವುಗಳ ಜೊತೆಯಲ್ಲಿ ಆರೋಗ್ಯ ಇಲಾಖೆಯ 10 ಅಂಬ್ಯುಲೆನ್ಸ್ ವಾಹನಗಳ ಸೇವೆಯು ಸಹ ಲಭ್ಯವಿದೆ ಎಂದು ತಿಳಿಸಿದ್ದಾರೆ.

loading...

LEAVE A REPLY

Please enter your comment!
Please enter your name here