ಆರ್. ಡಿ. ಕುಲಕರ್ಣಿ ಪುಣ್ಯತಿಥಿ ಆಚರಣೆ

0
28
loading...

ಚಿಕ್ಕೌಡಿ, 15- ಇಲ್ಲಿನ ಸಿಟಿಇ ಸಂಸ್ಥೆ ಸಂಸ್ಥಾಪಕರಾದ ಆರ್.ಡಿ. ಕುಲಕರ್ಣಿಯವರ 77ನೇ ಪುಣ್ಯ ತಿಥಿಯನ್ನು ಸಂಸ್ಥೆಯಲ್ಲಿ ಆಚರಿಸ ಲಾಯಿತು.

ಸಂಸ್ಥೆಯ ಅಧ್ಯಕ್ಷ ಸಿ.ಬಿ. ಕುಲಕರ್ಣಿ ದಂಪತಿಗಳು, ಸಂಸ್ಥಾಪಕ ಆರ್.ಡಿ.ಕುಲಕರ್ಣಿಯವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.

ನಂತರ ನಡೆದ ಸಭೆಯಲ್ಲಿ ಉಪನ್ಯಾಸಕ ಎನ್.ಎಸ್.ಚೌಗಲಾ ಮಾತನಾಡಿ, ಸನ್ 1919ರಲ್ಲಿ ಪ್ರಾರಂಭ ಗೊಂಡ ಸಿಟಿಇ ಸಂಸ್ಥೆಯು ಈಗ ಹೆಮ್ಮರವಾಗಿ ಬೆಳೆದಿದ್ದು, ಆರ್.ಡಿ. ಕುಲಕರ್ಣಿಯವರು ಸ್ವಾಂತತ್ರ್ಯ ಪೂರ್ವದಲ್ಲಿ ಚಿಕ್ಕೌಡಿಯಂತಹ ಗ್ರಾಮೀಣ ಭಾಗದಲ್ಲಿ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿ ಒಳ್ಳೆಯ ಶಿಕ್ಷಣ ಕಲ್ಪಿಸಿಕೊಡುವುದರ ಜೊತೆಗೆ ಸಾಮಾಜಿಕ ಮತ್ತು ಸಹಕಾರ ಕ್ಷೇತ್ರದಲ್ಲಿ ಅಪಾರವಾದ ಕೊಡುಗೆಯನ್ನು ನೀಡಿದ್ದಾರೆ ಎಂದು ತಿಳಿಸಿದರು.

ಬೆಳಗಾವಿಯ ಆಕಾಶ ವಾಣಿ ಗಾಯಕರಾದ ಅರ್ಚನಾ ಬೆಳಗುಂದಿ, ಆನಂದ್ ಬೆಳಗುಂದಿ, ತಬಲಾವಾದಕ ಸಂತೋಷ್ ಪುರಿ, ಹಾರ್ಮೌನಿಯಂ ಮುಕುಂದ್ ಗೋರೆ, ಆನಂದ್ ಜೋಷಿ ಇವರು ಸಂಗೀತ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

ಸಂಸ್ಥೆಯ ಅಧ್ಯಕ್ಷ ಸಿ.ಬಿ. ಕುಲಕರ್ಣಿ, ಉಪಾಧ್ಯಕ್ಷ ವ್ಹಿ. ಎಸ್.ಮಾಂಜ್ರೇಕರ್, ನರೇಂದ್ರ ನೇರ್ಲೆಕರ್, ಸುಧೀರ್ ಕುಲಕರ್ಣಿ, ಅರುಣ್ ಕುಲಕರ್ಣಿ, ಕಿರಣ್ ಕುಲಕರ್ಣಿ, ಪ್ರಾಚಾರ್ಯ ಎಸ್.ಜಿ. ಜಹಾಂಗೀರ್ದಾರ್, ವ್ಹಿ.ಬಿ.ಧಾರವಾಡ್ ಕರ್, ಆರ್. ವೈ.ಚಿಕ್ಕೌಡಿ, ಎಲ್.ಎಸ್. ಹಳೆಪ್ಪನವರ್, ಬಿ.ಎಂ.ಪಟ್ಟೇದ್, ಜಿ.ಎಸ್.ಕುಲಕರ್ಣಿ, ಎ.ಡಿ.ಕುಲಕರ್ಣಿ ಹಾಜರಿದ್ದರು.

 

loading...

LEAVE A REPLY

Please enter your comment!
Please enter your name here