ಆಶಾ ಕಾರ್ಯಕರ್ತೆಯರಿಗೆ ಒಂದು ದಿನದ ಕಾರ್ಯಾಗಾರ

0
22
loading...

ಚಿಂಚಲಿ (ರಾಯಬಾಗ): ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಬೆಳಗಾವಿ. ಜಿಲ್ಲಾ ಮಲೇರಿಯಾ ಕಛೇರಿ, ಬೆಳಗಾವಿ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಚಿಂಚಲಿ ಇವರುಗಳ ಸಹಯೋಗದಲ್ಲಿ ವಿವಿಧ ರೋಗಗಳ ಕುರಿತು, ಆಶಾ ಕಾರ್ಯಕರ್ತೆಯರಿಗೆ ಒಂದು ದಿನದ ಕಾರ್ಯಾಗಾರವನ್ನು ಚಿಂಚಲಿ ಗ್ರಾಮದ ಮಾಯಕ್ಕಾ ದೇವಸ್ಥಾನದ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಚಿಂಚಲಿ ಆರೋಗ್ಯ ಕೇಂದ್ರದ ವ್ಯಾಪ್ತಿಯಲ್ಲಿ ಬರುವ ಚಿಂಚಲಿ, ಬಿರಡಿ, ಬೇಕ್ಕೇರಿ, ಶಿರಗೂರ, ಕುಡಚಿ, ಪರಮಾನಂದವಾಡಿ, ಮೊರಬ ಗ್ರಾಮಗಳ ಆಶಾ ಕಾರ್ಯಕರ್ತರಿಗೆ, ರಾಷ್ಟ್ತ್ರೀಯ ಕೀಟಜನ್ಯ ರೋಗಗಳ ಅಡಿಯಲ್ಲಿ ಮಲೇರಿಯಾ, ಡೆಂಗ್ಯೂ, ಚಿಕನ ಗುನ್ಯಾ ರೋಗಗಳ ಕರಿತು, ಒಂದು ದಿನದ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.

ಜಿಲ್ಲಾ ಮಲೇರಿಯಾ ಹಿರಿಯ ಪ್ರಯೋಗ ಶಾಲಾ ತಂತ್ರಜ್ಞರಾದ ಪಿ.ಬಿ ಹೀರೆಮಠ ರವರು, ರಾಷ್ಟ್ತ್ರೀಯ ಕೀಟಜನ್ಯ ರೋಗಗಳಾದ ಮಲೇರಿಯಾ, ಚಿಕನ ಗುನ್ಯಾ, ಡೆಂಗ್ಯೂ, ಆನೆಕಾಲು, ಮೇದಳು ಜ್ವರ, ರೋಗಗಳು ಯಾವ ರೀತಿ ಹರಡುತ್ತವೆ. ಅವುಗಳ ಲಕ್ಷಣಗಳಾವವು, ಅವನ್ನು ಹೆಗೆ ಪತ್ತೆ ಹಚ್ಚಬೆಕು ಮತ್ತು ಅವುಗಳನ್ನು ಹೊಗಲಾಡಿಸಲು ಯಾವ ಯಾವ ಕ್ರಮ ಕೈಗೊಳ್ಳಬೇಕೆಂದು ಸವಿಸ್ತಾರವಾಗಿ ತಿಳಿಸಿದರು.

ಇನ್ನೊರ್ವ ಮಲೇರಿಯಾ ಕಿರಿಯ ಪ್ರಯೋಗ ಶಾಲಾ ತಂತ್ರಜ್ಞರಾದ ಸಿ.ಬಿ ಕಂಕಣವಾಡಿಯವರು, ಆಶಾ ಕಾರ್ಯಕರ್ತೇಯರು ತಮ್ಮ ಕಾರ್ಯಕೇತ್ರದಲ್ಲಿ ಸ್ವಚ್ಚವಾದ ಗಾಜಿನ ಹಲಗೆ, ಡಿಸ್ಟೌಜೇಬಲ್ ಸೂಜಿ ಲ್ಯಾನ್ಸೆಟ್, ಸ್ಪೀರಿಟ, ಹತ್ತಿ ಹಾಗೂ ಪೆನ್ಸಿಲ್ ಇವುಗಳನ್ನು ಉಪಯೋಗಿಸಿ, ರೋಗಿಗಳ ರಕ್ತಲೇಪನವನ್ನು ಯಾವ ರೀತಿ ಸಂಗ್ರಹಿಸಬೇಕು ಎಂದು ಪ್ರಾಯೋಗಿಕವಾಗಿ ತೋರಿಸುವದ್ರೌಂದಿಗೆ ಆಶಾ ಕಾರ್ಯಕರ್ತೆಯರಿಗೆ ವಿವರಿಸಿದರು.

ಕಾರ್ಯಾಗಾರದಲ್ಲಿ ಎಸ.ಬಿ ಕನ್ನಗಣ್ಣಿ, ಆಯುಷ್ಯಾ ವೈದ್ಯಾಧಿಕಾರಿಯಾದ ಡಾ. ಭುವನೇಶ್ವರಿ, ಶ್ರೀಮತಿ ಶಾಂತಾ ಶಾಸ್ತ್ತ್ರೀ, ಆರ್.ಕೆ ನಿಡೊಣಿ, ಎನ್.ಟಿ ಜೈಗ್ರಾಂ, ಶಿವಕ್ಕಾ ಭಂಜಿರಾಮ್, ಡಿ.ಆರ್ ಉಪ್ಪಾರ, ಸುಮಿತ್ರಾ ಹಾಲಾನೆ, ಆಶಾ ಬಾಲೆಕರ, ವಿಜಯಮಾಂತೇಶ ಬಡಿಗೇರ, ಎಸ್.ಸಿ ಮೂರನಾಳ, ವಾಯ್.ಪಿ ವಾರಿಮನಿ ಸೇರಿದಂತೆ ಏಳು ಗ್ರಾಮದ ಆಶಾ ಕಾರ್ಯಕರ್ತೆಯರು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here