ಇಂದಿನಿಂದ ಫಲ ಪುಷ್ಪ ಪ್ರದರ್ಶನ

0
35
loading...

 

ಹುಬ್ಬಳ್ಳಿ, 30- ನಗರದಲ್ಲಿ ಎರ್ಪಡಿಸಲಾದ ಫಲ – ಪುಷ್ಪ ಪ್ರದರ್ಶನ -2011 ರಂಗವಾಗಿ ವಿವಿಧ  ಸ್ಫರ್ಧೆಗಳನ್ನು  ಅಕ್ಟೌಬರ್ 1 ಶನಿವಾರ ಬೆಳಿಗ್ಗೆ 10 ಗಂಟೆಗೆ ಇಂದಿರಾ  ಗಾಜಿನ  ಮನೆಯಲ್ಲಿ ಕುಂಡಗಳಲ್ಲಿನ ಹೂ ಗಿಡಗಳು, ಹೂ ಕುಂಡಗಳ ಅಂದವಾದ ಜೋಡಣೆ, ಅಲಂಕಾರಿಕ ಎಲೆಯುಳ್ಳ ಗಿಡಗಳ ಕುಂಡಗಳ ಜೋಡಣೆ, ವಿವಿಧ ಜಾತಿಯ ಗಿಡಗಳ ಕುಂಡಗಳ ಜೋಡಣೆ, ಹೂ  ವಿಭಾಗದಲ್ಲಿ ವಿವಿಧ ಜಾತಿಯ ಕೊಯಿಟ್ಟ ಹೂಗಳು, ತರಕಾರಿ ವಿಭಾಗದಲ್ಲಿ  ವಿವಿಧ ಜಾತಿಯ ಹಸಿರು ತರಕಾರಿಗಳು, ಗಡ್ಡೆ ತರಕಾರಿಗಳು ಇತ್ಯಾದಿ, ಹಣ್ಣಿನ ವಿಭಾಗದಲ್ಲಿ ವಿವಿಧ ಜಾತಿಯ ಹಣ್ಣುಗಳು, ತೋಟಗಾರಿಕೆಯ ಹವ್ಯಾಸಿ ಕಲೆಗಳಾದ ಇಕೆಬಾನ, ಬೊನ್ಸಾಯಿ, ಹೂಗುಚ್ಛ, ಹೂ ಮಾಲೆ ತಯಾರಿಕೆ. ಪ್ರಕೃತಿಯಿಂದ ಪಡೆದ ವಸ್ತುಗಳಿಂದ ತಯಾರಿಸಿದ ಕಲಾಕೃತಿಗಳು, ಹಣ್ಣು ಮತ್ತು ತರಕಾರಿಗಳಿಂದ ಅಲಂಕಾರಿಗಕ ಕೆತ್ತನೆ, ರಂಗೋಲಿ ಹಾಗೂ ಹೂವಿನ ರಂಗೋಲಿ ಸ್ಫರ್ಧೆಗಳು ನಡೆಯಲಿವೆ.   ದಿನಾಂಕ 2 ರಂದು  ಮಧ್ಯಾಹ್ನ 2 ಗಂಟೆಗೆ  8,9, ಹಾಗೂ 10 ನೇ ತರಗತಿಯ ಶಾಲಾ ಮಕ್ಕಳಿಗಾಗಿ ಪಿಕ್ ಆ್ಯಂಡ್ ಸ್ಪೀಕ್  ಸ್ಥಳದಲ್ಲಿಯೇ ಚಿತ್ರ ಬಿಡಿಸುವ ಸ್ಫರ್ಧೆ ಎರ್ಪಡಿಸಿದ್ದು ಭಾಗವಹಿಸಲಿಚ್ಚಿಸುವವರು ಶಾಲಾ ಮುಖ್ಯೌಪಾಧ್ಯಾಯರಿಂದ ಪರವಾನಿಗೆ ಪತ್ರ ತರುವದು.

ಹೂವಿನಿಂದ ಕೇಶಾಲಂಕಾರ ಸ್ಫರ್ಧೆಯಲ್ಲಿ ಭಾಗವಹಿಸಲಿ ಚ್ಚಿಸುವವರು ದಿನಾಂಕ 30 ರಂದು ಧಾರವಾಡ ತೋಟಗಾರಿಕೆ ಇಲಾಖೆಯ  ರಾಜ್ಯ ವಲಯದ  ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿಯಲ್ಲಿ ಹೆಸರನ್ನು  ನೋಂದಾಯಿಸುವಂತೆ (ದೂರವಾಣಿ ಸಂ: 0836-2447801) ಧಾರವಾಡ ಹಿರಿಯ ಸಹಾಯಕ ತೋಟಗಾರಿಕೆ ಮಿರ್ದೇಶಕಿ  ಹಾಗೂ ಫಲ  ಪುಷ್ಪ ಪ್ರದರ್ಶನ ಸಮಿತಿಯ ಕಾರ್ಯದರ್ಶಿ ಎ. ಎಸ್. ಕವಿತಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

loading...

LEAVE A REPLY

Please enter your comment!
Please enter your name here