ಇಂದು ಉಪವಾಸ ಸತ್ಯಾಗ್ರಹ

0
17
loading...

 

ಐಗಳಿ (ತಾ. ಅಥಣಿ) 23- ರಾಜ್ಯದಲ್ಲಿ ಕೆಲವು ಜಿಲ್ಲೆಗಳಲ್ಲಿ ಮಳೆ ಆಗದೇ ಇರುವದರಿಂದ ಆಯಾ ತಾಲೂಕಿನಲ್ಲಿ ರೈತರ ಜಾನುವಾರುಗಳಿಗೆ ಮೇವು, ನೀರು ಸಿಗದೇ ಪರದಾಡುವ ಪರಿಸ್ಥಿತಿ ಬಂದಿದೆ.

ಇದನ್ನು ಗಮನಿಸಿದ ರಾಜ್ಯ ರೈತಪರ ಹೋರಾಟ ಸಮಿತಿ ಅಧ್ಯಕ್ಷ ಎ.ಆರ್. ಪಾಟೀಲ ಮಳೆ ಆಗದೇ ಇದ್ದ ತಾಲೂಕು ಅವುಗಳನ್ನು ಬರಗಾಲ ತಾಲೂಕೆಂದು ಘೋಷಿಸಿ ಅಲ್ಲಿ ಜಾನುವಾರುಗಳಿಗೆ ರೈತರ ಸ್ಥಳಗಳಲ್ಲಿ ಮೇವುಗಳನ್ನು ವಿತರಿಸುವ ಕಾರ್ಯ ಮಾಡಬೇಕೆಂದು ಅಲ್ಲದೇ ದುಡಿಯುವ ಕೈಗಳಿಗೆ ಕೆಲಸ ಒದಗಿಸಬೇಕೆಂದು ಈಗಾಗಲೇ ಮುಖ್ಯ ಮಂತ್ರಿಗಳಿಗೆ ಸಚಿವರಿಗೆ ಹಾಗೂ ಅಧಿಕಾರಿಗಳಿಗೆ ಮನವಿ ಅರ್ಪಿಸಿದರೂ ಯಾವದೇ ಕ್ರಮ ಕೈಗೊಂಡಿರುವದಿಲ್ಲ ಹೀಗಾಗಿ ಅನಿವಾರ್ಯವಾಗಿ ತಹಶೀಲ್ದಾರ ಕಾರ್ಯಾಲಯದ ಹತ್ತಿರ ಇರುವ ಡಿ. ಪವಾರ ದೇಸಾಯಿ ಸರ್ಕಲ್ದಲ್ಲಿ ದಿ. 24 ರಂದು ಅಧ್ಯಕ್ಷ ಎ.ಆರ್ ಪಾಟೀಲ ಹಾಗೂ ಅಣ್ಣಪ್ಪ ಐಗಳಿ ಉಪವಾಸ ಮಾಡಲಿದ್ದಾರೆಂದು ತಿಳಿಸಿದ್ದಾರೆ.

 

loading...

LEAVE A REPLY

Please enter your comment!
Please enter your name here