ಇಂದು ಬೆಳಗಾವಿಯಲ್ಲಿ ಆಕಾಶವಾಣಿ ಸಂಗೀತ ಸಮ್ಮೇಳನ

0
10
loading...

 

ಬೆಳಗಾವಿ: ಸೆಪ್ಟೆಂಬರ್:24; ಬೆಳಗಾವಿ ಕುಮಾರ ಗಂಧರ್ವ ರಂಗಮಂದಿರದಲ್ಲಿ ರವಿವಾರ ಸೆಪ್ಟೆಂಬರ್ 25 ರಂದು ಸಂಜೆ 6-30 ಕ್ಕೆ ನಡೆಯಲಿರುವ ಆಕಾಶವಾಣಿ ಸಂಗೀತ ಸಮ್ಮೇಳನಕ್ಕೆ ಸಂಪೂರ್ಣ ಸಿದ್ಧತೆಗಳು ಪೂರ್ಣಗೊಂಡಿವೆ.

18 ವರ್ಷಗಳ ನಂತರ ಬೆಳಗಾವಿಯಲ್ಲಿ ನಡೆಯುತ್ತಿರುವ ಈ ಅಪರೂಪದ ಸಂಗೀತ ಸಮ್ಮೇಳನ ನಡೆಯಲಿರುವ ಕುಮಾರ ಗಂಧರ್ವ ರಂಗಮಂದಿರದಲ್ಲಿ ಎಲ್ಲ ತಾಂತ್ರಿಕ ವ್ಯವಸ್ಥೆಯನ್ನು ಮಾಡಲಾಗಿದೆ.

ಸೆಪ್ಟೆಂಬರ್ 25 ರಂದು ದೇಶದ 20 ನಗರಗಳಲ್ಲಿ ಆಕಾಶವಾಣಿ ಸಂಗೀತ ಸಮ್ಮೇಳನ ನಡೆಯಲಿದ್ದು, ಇದರಲ್ಲಿ ಬೆಳಗಾವಿ ಸೇರಿರುವುದು ಜಿಲ್ಲೆಯ ಹಾಗೂ ಈ ಭಾಗದ ಸಂಗೀತ ಪ್ರೇಮಿಗಳನ್ನು ಸಂತೋಷಗೊಳಿಸಿದೆ.

ರಂದು ಬೆಳಗಾವಿಯಲ್ಲಿ ನಡೆಯಲಿರುವ ಸಂಗೀತ ಸಮ್ಮೇಳನದಲ್ಲಿ ಖ್ಯಾತ ಹಿಂದೂಸ್ತಾನಿ ಶಾಸ್ತ್ತ್ರೀಯ ವಾದ್ಯ ಸಂಗೀತ ಕಾರ್ಯಕ್ರಮವನ್ನು ಖ್ಯಾತ ಸಿತಾರ ವಾದಕ ಸತೀಶ ಚಂದ್ರ ಅವರು ನಡೆಸಿಕೊಡಲಿದ್ದು, ಅವರಿಗೆ ಮುಕುಂದ ಬಾಲೆ ತಬಲಾ ಸಹವಾದ್ಯಗಾರರಾಗಿದ್ದಾರೆ. ಹಿಂದೂಸ್ತಾನಿ ಶಾಸ್ತ್ತ್ರೀಯ ಗಾಯನವನ್ನು ಪಂಡಿತ ಸಮರೇಶ್ ಚೌಧರಿ ಅವರು ನಡೆಸಿಕೊಡಲಿದ್ದು, ಅವರಿಗೆ ಸಹವಾದ್ಯಗಾರರಾಗಿ ಅಖ್ತರ ಹಸನ ತಬಲಾ, ಪ್ರಮೋದ ಮರಾಠೆ ಹಾರ್ಮೌನಿಯಮ್ ಹಾಗೂ ಫೈಯಾಜ್ ಖಾನ್ ಸಾರಂಗಿ ಸಾಥ್ ನೀಡಲಿದ್ದಾರೆ.

ಈ ಕಾರ್ಯಕ್ರಮದ ಧ್ವನಿ ಮುದ್ರಣವನ್ನು ನವೆಂಬರ್ 18 ರಂದು ಹಾಗೂ ನವೆಂಬರ್ 24 ರಂದು ಎಲ್ಲ ಆಕಾಶವಾಣಿ ನಿಲಯಗಳ ಮೂಲಕ ಪ್ರಸಾರಗೊಳ್ಳಲಿದೆ.

ಬೆಳಗಾವಿಯಲ್ಲಿ ನಡೆಯಲಿರುವ ಕಾರ್ಯಕ್ರಮವನ್ನು ಧ್ವನಿ ಮುದ್ರಣ ಮಾಡುತ್ತಿರುವುದರಿಂದ ಶ್ರೌತೃಗಳು ಸೂಚಿತ ಸಮಯಕ್ಕೂ 15 ನಿಮಿಷ ಮೊದಲೆ ಉಪಸ್ಥಿತರಿರಬೇಕು. ಕಾರ್ಯಕ್ರಮಕ್ಕೆ ಬರುವಾಗ ದಯವಿಟ್ಟು ಕೈಚೀಲ ಹಾಗೂ ಬ್ರೀಫ್ಕೇಸ್ಗಳನ್ನು ತರಬಾರದು, ಮೊಬೈಲ್ಗಳನ್ನು ಸ್ವೀಚ್ ಆಫ್ ಮಾಡಬೇಕೆಂದು ಧಾರವಾಡ ಆಕಾಶವಾಣಿ ಕೇಂದ್ರದ ಮುಖ್ಯಸ್ಥರಾದ ಸಿ.ಯು. ಬೆಳ್ಳಕ್ಕಿ ಅವರು ತಿಳಿಸಿದ್ದಾರೆ.

 

loading...

LEAVE A REPLY

Please enter your comment!
Please enter your name here