ಇದು ಬಾಲಕೃಷ್ಣನ ಬಾಲಲೀಲೆ

0
28
loading...

ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ಈಗ  ಗಣ್ಯರೇ ಅಪರಾದಿ ಸ್ಥಾನದಲ್ಲಿ ಒಬ್ಬರ ಹಿಂದೆ ಒಬ್ಬರು ಬಂದು ನಿಲ್ಲ ತೊಡಗಿದ್ದಾರೆ. ಇದು ವರೆಗೆ ಕಟ್ಟಾ ಸುಬ್ರಮಣ್ಯ ನಾಯ್ಡು ಹಾಗೂ ಅವರ ಪುತ್ರ ಮತ್ತು  ಮಾಜಿ ಸಚಿಕೃಷ್ಣಯ್ಯ ಶೆಟ್ಟಿ ಶಾಸಕ ಹೇಮಚಂದ್ರ ಸಾಗರ  ಮಾಜಿ ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಅವರ ಇಬ್ಬರು ಪುತ್ರರು ಮತ್ತು ಅಳಿಯ ಮತ್ತೊಬ್ಬ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರ ಪತ್ನಿ ಶಾಸಕಿ ಅನಿತಾ ಕುಮಾರಸ್ವಾಮಿ ಈಗಾಗಲೇ ಕಟಕಟೆಯಲ್ಲಿ ಬಂದು ನಿಂತಿದ್ದರೆ ಈಗ ಮಾಜಿ ಪ್ರಧಾನಿ ದೇವೇಗೌಡರ ಹಿರಿಯ ಪುತ್ರ ಎಚ್.ಡಿ. ಬಾಲಕೃಷ್ಣ ಗೌಡ ಕಟಕಟೆಯಲ್ಲಿ ನಿಲ್ಲಬೇಕಾಗಿ ಬಂದಿದೆ.

ಭದ್ರಾವತಿ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರಖಾನೆಯ ನಿವೃತ್ತ ನೌಕರರು ಬಾಲಕೃಷ್ಣ ಎಂಬುವವರು ಲೋಕಾಯುಕ್ತ ವಿಶೇಷ ನ್ಯಾಯಾಲಯಕ್ಕೆ ದೂರು ನೀಡಿ ಭಾಲಕೃಷ್ಣ ಗೌಡರು ಆದಾಯ ಮೀರಿ ಅಪಾರ ಪ್ರಮಾಣದ ಅಕ್ರಮಾ ಆದ್ತಿಯನ್ನು ಸಂಪಾದಿಸಿದ್ದಾರೆ. ಎಂದು ದೂರು ನೀಡಿದ್ದಾರೆ. ಈ ದೂರನ್ನು ವಿಚಾರಣೆಗೆ ಅಂಗೀಕರಿಸಿರುವ ಲೋಕಾಯುಕ್ತ ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಸುದೀಂದ್ರ ರಾವ ಅವರು ಅಕ್ಟೌಬರ 10 ರೊಳಗಾಗಿ ಈ ಕುರಿತು ತನಿಖೆ ಮಾಡಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಲು ಬೆಂಗಳೂರಿನ ಲೋಕಾಯುಕ್ತ ಎಸ್.ಪಿ. ಅವರಿಗೆ  ಈಗ  ಆದೇಶ  ನೀಡಿದ್ದಾರೆ.

ಈ ಬಾಲಕೃಷ್ಣಗೌಡರು 1994 ರಲ್ಲಿ ಕೆ.ಎಸ್. ಅಧಿಕಾರಿಯಾಗಿ ನೇಮಕಗೊಂಡು  205 ರಲ್ಲಿ ಸ್ವಯಂ ನಿವೃತ್ತಿ ಪಡೆದಿದ್ದಾರೆ. ಅವರು ಅಧಿಕಾರಿಯಾಗಿದ್ದ ಸಂದರ್ಭದಲ್ಲಿ ಸರಕಾರದಿಂದ ಪಡೆದಿರುವ ಒಟ್ಟು ವೇತನ 34 ಲಕ್ಷ ರೂಪಾಯಿ ಆದರೆ ಅವರು ತಮ್ಮ ನಿವೃತ್ತಿಯ ನಂತರ ತಮ್ಮ ಕುಟುಂಬ ವರ್ಗದ  ವಿವಿಧ ಜನರ ಹೆಸರಿನಲ್ಲಿ 27 ಕೋಟಿ ರೂಪಾಯಿ ಮೌಲ್ಯದ  ಆಸ್ತಿಯನ್ನು ಬೆಂಗಳೂರು ಸುತ್ತಮುತ್ತಲೂ ಖರೀದಿಸಿದ್ದಾರೆ. ಅದರ ಈಗಿನ ಮಾರುಕಟ್ಟೆಯ ದರ 500 ಕೋಟಿ ರೂಪಾಯಿ ಆಗುತ್ತದೆ ಎಂದು ಹೇಳಲಾಗಿದೆ.  ಬಾಲಕೃಷ್ಣ ಗೌಡರು ತಮ್ಮ ಪತ್ನಿ ಕವಿತಾ ಅತ್ತೆ ಜಯಮ್ಮ , ನಾದಿನಿ ಸವಿತಾ ಮೈದುನರಾದ ರವೀಂದ್ರ ಮತ್ತು ಶ್ರೀಕಾಂತ ಹೆಸರಿನಲ್ಲಿ ಈ ಆಸ್ತಿಗಳನ್ನು ಖರೀದಿಸಿದ್ದಾರೆ ಎಂದು ಹೇಳಲಾಗಿದೆ.

ಈಗ ನ್ಯಾಯಾಧೀಶರು ಸಿ.ಆರ್.ಪಿ.ಸಿ. ಸೆಕ್ಷನ್ 156 (3) ಅಡಿಯಲ್ಲಿ ಈ ತನಿಖೆ ನಡೆಸುವಂತೆ ಲೋಕಾಯುಕ್ತ ಎಸ್. ಪಿ. ಅವರಿಗೆ ಆದೇಶ ನೀಡಿದ್ದಾರೆ. ಈ ಹಿಂದೆ ಮಾಜಿ ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಭದ್ರಾ ಯೋಜನೆಯ ಗುತ್ತಿಗೆಯ ವ್ಯವಹಾರದ ಪ್ರಕರಣದ ವಿಚಾರಣೆಯನ್ನು ಸಹ ಇದೇ  ಕಾನೂನಿನ ಮೇರೆಗೆ ತನಿಖೆ ಮಾಡಲು ಈ ಇದೆ ನ್ಯಾಯಾಧೀಶರು ಆದೇಶ ನೀಡಿದ್ದಾರೆ. ಆಗ ಲೋಕಾಯುಕ್ತ ಅಧಿಕಾರಿಗಳು ಯಡಿಯೂರಪ್ಪನವರ ಪುತ್ರರರು ಮತ್ತು ಅಳಿಯನ ಮನೆ ಮತ್ತು ಕಚೇರಿಗಳ ಮೇಲೆ  ದಾಳಿ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

loading...

LEAVE A REPLY

Please enter your comment!
Please enter your name here