ಉತ್ತಮ ನಾಗರೀಕರಾಗಲು ಗುರಿ ಅಗತ್ಯ

0
24
loading...

ಜಮಖಂಡಿ,15- ಸಮಾಜದಲ್ಲಿ ಒಂದು ಒಳ್ಳೆಯ ಸ್ಥಾನಮಾನ ಪಡೆದುಕೊಂಡು ಉತ್ತಮ ನಾಗರಿಕರಾಗಿ ಜೀವನ ಸಾಗಿಸಬೇಕಾದರೆ, ವಿದ್ಯಾರ್ಥಿ ದೆಸೆಯಲ್ಲಿಯೇ ಗುರಿ ಮತ್ತು ಛಲ ಅಗತ್ಯ ಎಂದು ನಗರ ಪೋಲೀಸ್ ಠಾಣೆಯ ಪಿಎಸ್ಐ ಸಿ.ಬಿ.ಬಾಗೇವಾಡಿ ಹೇಳಿ ದರು. ಸ್ಥಳೀಯ ಬಿಎಲ್ಡಿಇಎ ಕಾಲೇಜಿನ ಪ್ರಸಕ್ತ ಶೈಕ್ಷಣಿಕ ವರ್ಷದ ಬಿ.ಎಸ್ಸಿ ಕೋರ್ಸ್ನ ಕಿರಿಯ ವಿದ್ಯಾರ್ಥಿಗಳನ್ನು ಸ್ವಾಗತಿಸಲು ಕಾಲೇಜಿನ ಸಭಾಭವನದಲ್ಲಿ ಹಿರಿಯ ವಿದ್ಯಾರ್ಥಿಗಳು ಶನಿವಾ ಏರ್ಪಡಿಸಿದ್ದ ಸಮಾರಂಭದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು.

ಪ್ರಾಚಾರ್ಯ ಡಾ.ಎಸ್. ಎಸ್.ಸುವರ್ಣಖಂಡಿ ಅಧ್ಯಕ್ಷತೆವಹಿಸಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಅಡಗಿದ ಸುಪ್ತಶಕ್ತಿಯನ್ನು, ಪ್ರತಿಭೆಯನ್ನು ಅನಾವರಣಗೊಳಿಸಲು ಬರುವ ಮೂರು ವರ್ಷಗಳ ಅವಧಿ ವಿದ್ಯಾರ್ಥಿಗಳಿಗೆ ಸೂಕ್ತ ವೇದಿಕೆ ನೀಡಲಿ ಎಂದು ಹಾರೈಸಿದರು. ಸಹನಾ ಹೆಗಡೆ, ಲಿಂಗರಾಜ್ ಖೋತ್, ವಿಶ್ವನಾಥ್ ಬೆಕ್ಕೇರಿ, ಲಕ್ಷ್ಮೀ ಶಿಂಧೆ ತಮ್ಮ ಅನಿಸಿಕೆ ಹಂಚಿಕೊಂಡರು.

ಗುರುರಾಜ್ ತೇಲಿ, ಶಿವಯ್ಯ ಹಿರೇಮಠ್ ಹಾಜರಿದ್ದರು.

ಅರ್ಥಶಾಸ್ತ್ತ್ರ ವಿಭಾಗದ ಮುಖ್ಯಸ್ಥ ಡಾ.ಎಸ್.ಜಿ.ಹಿರೇಮಠ್, ವಿದ್ಯಾರ್ಥಿ ಪ್ರತಿನಿಧಿ ಶೋಭ ತೇಲಿ ವೇದಿಕೆಯಲ್ಲಿದ್ದರು. ಪೂಜಾ ಶೆಟಗಾರ ಪ್ರಾರ್ಥನೆ ಗೀತೆ ಹಾಡಿದರು. ಸವಿತಾ ಕೊಣ್ಣೂರ ಹಾಗೂ ಸಂಗಡಿಗರು ಸ್ವಾಗತ ಗೀತೆ ಹಾಡಿದರು. ಮಲ್ಲಿಕಾರ್ಜುನ ಚನಗೌಡರ ಸ್ವಾಗತಿಸಿದರು.ಶಿವಾನಂದ್ ಮಠಪತಿ ಅತಿಥಿಗಳನ್ನು ಪರಿಚಯಿ ಸಿದರು. ಸದಾಶಿವ್ ಜಮಖಂಡಿ, ಶಶಿಧರ್ ಒಂಟಗೋಡಿ, ಅಶ್ವಿನಿ ಸಿದರೆಡ್ಡಿ ನಿರೂಪಿಸಿದರು. ಪ್ರೀತೇಶ್ ಕರವ್ ವಂದಣಾರ್ಪಣೆ ಮಾಡಿದರು.

loading...

LEAVE A REPLY

Please enter your comment!
Please enter your name here