ಉರ್ದು ಕಲ್ಚರಲ್ ಪೌಂಡೇಶನಿನ ಉದ್ಘಾಟನೆ

0
25
loading...

ಧಾರವಾಡ-24, ಧಾರವಾಡ ಶಹರದಲ್ಲಿ ನೂತನವಾಗಿ ಅಸ್ಥಿತ್ವಕ್ಕೆ ಬಂದ ಉರ್ದು ಕಲ್ಚರಲ್ ಪೌಂಡೇಶನಿನ ಉದ್ಘಾಟನಾ ಸಮಾರಂಭವು ವಿದ್ಯಾವರ್ಧಕ ಸಂಘದ ಪಾಟೀಲ ಪುಟ್ಟಪ್ಪ ಸಭಾಭವನದಲ್ಲಿ ನೇರವೆರಿತು.

ಉರ್ದು ಕಲ್ಚರಲ್ ಪೌಂಡೇಶನ್ನ್ನು ಉದ್ಘಾಟಿಸಿ ಮಾತನಾಡಿದ ಕರ್ನಾಟಕ ಉರ್ದು ಅಕಾಡೆಮಿ ಚೇರಮನ್ರಾದ ಶ್ರೀ. ಹಾಫೀಜ ಕರ್ನಾಟಕಿ ಇವರು ಮಾತನಾಡಿ ಉರ್ದು ಭಾಷೆಯು ಸಾಂಸ್ಕ್ಕತಿಕ, ಸಭ್ಯತೆ ಹಾಗೂ ಪ್ರೀತಿಯ ಸಂಕೇತವಾಗಿದ್ದು ಇದನ್ನು ಬಲ್ಲವರೆ ಅದರ ಸವಿಯನ್ನು ಉಣ್ಣುತ್ತಾರೆ. ಹಾಗೂ ಭಾರತ ಸ್ವಾತಂತ್ರ ಸಂಗ್ರಾಮದಲ್ಲಿ ಉರ್ದು ಭಾಷೆಯು ಪ್ರಮುಖ ಪಾತ್ರ ವಹಿಸಿದ್ದು ಎಲ್ಲ ಸಮುದಾಯಗಳಲ್ಲಿ ಸ್ವಾತಂತ್ರ ಹೋರಾಟದ ಕಿಚ್ಚನ್ನು ಹಚ್ಚಿತ್ತು ಎಂದು ಹೇಳಿ, ಇಂದಿನ ದಿನಗಳಲ್ಲಿ ಉರ್ದು ಭಾಷೆಯು ನಶಿಸಿಹೋಗುವ ಹಂತದಲ್ಲಿದ್ದು ಇದರ ಉಳಿವಿಗಾಗಿ ಎಲ್ಲರೂ ಒಗ್ಗೂಡಿ ಶ್ರಮಿಸುವ ಅಗತ್ಯವಿದೆ ಎಂದು ಕರೆನೀಡಿದರು.

ಅಂಜುಮನ್ ಇಸ್ಲಾಂ ಸಂಸ್ಥೆಯ, ಅಧ್ಯಕ್ಷರಾದ ಶ್ರೀ. ಇಸ್ಮಾಯಿಲ್ ತಮಟಗಾರ ಇವರು ಶಿಕ್ಷಣದ ಗುಣಮಟ್ಟವನ್ನು ಸುಧಾರಿಸುವ ಗುರಿ ಇಟ್ಟುಕೊಂಡು ಉರ್ದು ಕಲ್ಚರಲ್ ಪೌಂಡೇಶನ್ ಅಸ್ಥಿತ್ವ ತಾಳಿದ್ದು ತುಂಬ ಸಂತೋಷದಾಯಕವಾಗಿದೆ ಎಂದು ಅಭಿನಂದನೆ ಸಲ್ಲಿಸಿ ತನ್ನ ಗುರಿ ಮುಟ್ಟುವಲ್ಲಿ ಯಶಸ್ವಿಯಾಗಲೆಂದು ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ ಸಾಹಿತಿ ಶ್ರೀ. ಮೋಹನ ಮಾಗಮ್ಮನವರ ಇವರು ಮಾತನಾಡಿ ಉರ್ದು ಭಾಷೆಗೆ ಸರ್ ಅಲ್ಲಾಮ್ಮಾ ಇಕ್ಬಾಲ್, ಮೌಲಾನಾ ಅಬುಲ್ ಕಲಾಮ ಆಜಾದ, ಮಿರ್ಜಾ ಗಾಲಿಬ, ಮೌಲಾನಾ ಹಾಲಿ, ಸರ್ ಸೈಯದ್ ಅಹ್ಮದಖಾನ ಇಂತವರ ಕೊಡುಗೆಯಿಂದ ಉರ್ದು ಭಾಷೆಯು ಅಂತರಾಷ್ಟ್ತ್ರೀಯ ಮಟ್ಟದಲ್ಲಿ ಖ್ಯಾತಿಹೊಂದಿದೆ. ಹಾಗೂ ಉರ್ದು ಭಾಷೆಯು ಮುಸ್ಲಿಂರಿಗಷ್ಟೇ ಸಿಮಿತವಾಗಿರದೇ ಇದನ್ನು ಇತರರು ಕಲಿಯುವಂತಾಗಬೇಕು.

ಮತ್ತು ಉರ್ದು ಸಾಹಿತ್ಯದಲ್ಲಿ ಅನೇಕ ಕನ್ನಡಿಗರು ಹಾಗೂ ವಿವಿಧ ಭಾಷಾ ಸಾಹಿತಿಗಳದ್ದು ಉರ್ದು ಭಾಷೆಗೆ ಅಪಾರ ಕೊಡುಗೆ ನೀಡಿದ್ದಾರೆ ಎಂದರು.

ಇನ್ನೊಬ್ಬ ಮುಖ್ಯ ಅತಿಥಿಗಳಾದ ಡಾ. ಅಬ್ದುಲ್ ಕರೀಮ ಇವರು ಮಾತನಾಡಿ ಉರ್ದು ಭಾಷೆಯನ್ನು ಉನ್ನತ ಮಟ್ಟಕ್ಕೆ ತರುವುದು ಉರ್ದು ಶಿಕ್ಷಕರ ಕರ್ತವ್ಯವಾಗಿದ್ದು ಪ್ರಾಥಮಿಕ ಹಂತದಿಂದ ಇದರ ಉನ್ನತಿ ಆಗಬೇಕು. ಈ ನಿಟ್ಟಿನಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರು ನಿಷ್ಠೆ ಹಾಗೂ ಶ್ರಮವಹಿಸಿ ಉತ್ತಮ ಗುಣಮಟ್ಟದ ಶಿಕ್ಷಣ ನೀಡುವುದು ಅವಶ್ಯವಾಗಿದೆ ಎಂದು ಅಭಿಪ್ರಾಯಪಟ್ಟರು.

ಉರ್ದು ಕಲ್ಚರಲ್ ಪೌಂಡೇಶನಿನ ಸಂಸ್ಥಾಪಕರಾದ ಶ್ರೀ. ಖಲಂದರ ರಿಜ್ವಿ ಇವರು ಸಂಸ್ಥೆಯ ದೈಯೋದ್ದೇಶಗಳನ್ನು ವಿವರಿಸಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ ಉರ್ದು ಕಲ್ಚರಲ್ ಪೌಂಡೇಶನ್ ಅಧ್ಯಕ್ಷರಾದ ಶ್ರೀ. ಜಿ.ಎಂ. ದರೋಗಾ ತನ್ನ ಅಧ್ಯಕ್ಷೀಯ ನುಡಿಗಳಲ್ಲಿ ಸಂಸ್ಥೆಯು ಮುಂಬರುವ ದಿನಗಳಲ್ಲಿ ಪ್ರಾಥಮಿಕ ಹಾಗೂ ಮಾಧ್ಯಮಿಕ ಶಾಲೆಗಳಲ್ಲಿ ಉತ್ತಮ ಪ್ರತಿಭೆಗಳನ್ನು ಗುರುತಿಸಿ ವಿದ್ಯಾರ್ಥಿಗಳನ್ನು ಹಾಗೂ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಶ್ರಮ ಪಡುವ ವಿದ್ಯಾರ್ಥಿ ಹಾಗೂ ಶಿಕ್ಷಕರನ್ನು ಗುರುತಿಸಿ ವಿವಿಧ ರಾಷ್ಟ್ತ್ರ ನಾಯಕರ ಹೆಸರಿನಲ್ಲಿ ಪ್ರಶಸ್ತಿಗಳನ್ನು ನೀಡಲಿದೆ ಎಂದರು.

ಈ ಸಂದರ್ಭದಲ್ಲಿ ಡಿ.ಡಿ.ಪಿ.ಆಯ್.. ಕೆ. ಆನಂದ, ಕೆ.ಎಂ. ಶೇಖ, ಎಸ್.ಎಸ್.ಎ. ಧಾರವಾಡ, , ಸಮಾಜ ಕಲ್ಯಾಣ ಅಧಿಕಾರಿಗಳಾದ ಸಾಬೀರ ಅಹ್ಮದ ಮುಲ್ಲಾ ಹಾಗೂ ಉರ್ದು ಕಲ್ಚರಲ್ ಪೌಂಡೇಶನಿನ ಉಪಾಧ್ಯಕ್ಷರಾದ ಪೀರವಾಲೆ,

ಕಾರ್ಯದರ್ಶಿಯಾದ ಪೀರಜಾದೆ, ಖಜಾಂಜಿ ಇಸ್ಮಾಯಿಲ್ ಸೌದಾಗರ, ಸದಸ್ಯರಾದ ಖಡಕಲಾಟ, ಗುಳೇದಗುಡ್ಡ, ಹಂಚಿನಮನಿ, ಇರಶ್ಯಾದಅಹ್ಮದ ಬಿಸ್ತಿ, ಇನ್ನಿತರರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಇಮ್ತಿಯಾಜ ಪಠಾಣ ನಿರೂಪಿಸಿದರು. ಹಾಗೂ ಇಸ್ಮಾಯಿಲ್ ಸೌದಾಗರ ಇವರು ಸ್ವಾಗತಿಸಿದರು, ಹಾಗೂ ಖತಿಬ ಇವರು ವಂದಿಸಿದರು.

loading...

LEAVE A REPLY

Please enter your comment!
Please enter your name here