ಐದು ತಿಂಗಳಲ್ಲಿ 134 ಕೋಟಿ ರೂ. ಆದಾಯ

0
19
loading...

ಹುಬ್ಬಳ್ಳಿ, 15- ನೈಋುತ್ಯ ರೈಲ್ವೆ ವಲಯ ಹುಬ್ಬಳ್ಳಿ ವಿಭಾಗ ಪ್ರಸಕ್ತ ಸಾಲಿನ ಕಳೆದ ಐದು ತಿಂಗಳಲ್ಲಿ ಸುಮಾರು 134 ಕೋಟಿ ರೂ. ಆದಾಯ ಗಳಿಸಿದೆ ಎಂದು ಹುಬ್ಬಳ್ಳಿ ವಿಭಾಗೀಯ ವ್ಯವಸ್ಥಾಪಕ ಪ್ರವೀಣ್ಕುಮಾರ್ ಮಿಶ್ರ ತಿಳಿಸಿದರು.

ಹುಬ್ಬಳ್ಳಿ ವಿಭಾಗೀಯ ರೈಲ್ವೆ ಬಳಕೆದಾರರ ಸಲಹಾ ಸಮಿತಿ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಈ ವರ್ಷದ ಆಗಸ್ಟ ಕೊನೆವರೆಗೆ ಒಟ್ಟು 1.74 ಕೋಟಿ ಜನ ಪ್ರಯಾಣಿಸಿದ್ದು, ಪ್ರಯಾಣಿಕರಲ್ಲಿ ಶೇ 6.26 ರಷ್ಟು ಹೆಚ್ಚಳವಾಗಿದೆ. ವಾಸ್ಕೊ-ವೆಲಂಕಣಿ-ವಾಸ್ಕೊ ನೂತನ ವಾರದ ವಿಶೇಷ ರೈಲು ಸಂಚಾರ ಈತ್ತೀಚೆಗೆ ಆರಂಭಗೊಂಡಿದೆ ಎಂದು ನುಡಿದರು.

ಅಮರಗೋಳ ಹಾಗೂ ಗಿಣಗೇರಾ ನಿಲ್ದಾಣಗಳಲ್ಲಿ ಸರಕು ಸಾಗಣೆ ಬುಕಿಂಗ್ಅನ್ನು ಆರು ತಿಂಗಳವರೆಗೆ ತಾತ್ಕಾಲಿಕವಾಗಿ ಆರಂಭಿಸಲಾಗಿದೆ. ವಿವಿಧ ರೈಲು ನಿಲ್ದಾಣಗಳಲ್ಲಿ ಹಲವು ರೈಲುಗಳ ನಿಲುಗಡೆಗೆ ಕ್ರಮ ಕೈಗೊಳ್ಳಲಾಗಿದೆ. ಹುಬ್ಬಳ್ಳಿ ವಿಭಾಗದಲ್ಲಿ 161 ಹೆಚ್ಚುವರಿ ಬೋಗಿಗಳನ್ನು ಬೇರೆ ಬೇರೆ ರೈಲುಗಳಿಗೆ ಅಳವಡಿಸಲಾಗಿದೆ ಎಂದು ಹೇಳಿದರು.

ಸಮಿತಿ ಸದಸ್ಯ ಎಸ್.ಬ್ರಹ್ಮಯ್ಯ ಮಾತನಾಡಿ, ಚಳ್ಳಕೆರೆ-ಹಿರಿಯೂರು-ಶಿರಾ ಮತ್ತು ತುಮಕೂರು ರೈಲ್ವೆ ಮಾರ್ಗ ಕೈಗೊಂಡರೆ ಬಳ್ಳಾರಿ-ಬೆಂಗಳೂರು ನಡುವಿನ ರೈಲು ಸಂಚಾರ ಅಂತರ ಕಡಿಮೆ ಆಗಲಿದೆ. ಕೊಟ್ಟೂರು-ಹರಿಹರ, ಹರಿಹರ-ಹರಪನಹಳ್ಳಿ ರೈಲ್ವೆ ಮಾರ್ಗ ನಿರ್ಮಾಣ ಕಾಮಗಾರಿ ಆರಂಭಿಸಬೇಕು. ಆಲಮಟ್ಟಿ-ಕೂಡಲಸಂಗಮ-ಕೊಪ್ಪಳ ರೈಲ್ವೆ ಮಾರ್ಗ ಕೈಗೊಂಡರೆ ಪ್ರವಾಸೋದ್ಯಮ ದೃಷ್ಟಯಿಂದ ಉತ್ತಮ ಸಹಕಾರಿ ಆಗಲಿದೆ ಎಂದರು.

ಅಶೋಕ್ ಜೆರೆ ಮಾತನಾಡಿ ಹುಬ್ಬಳ್ಳಿ-ಗುಂತಕಲ್, ಚನ್ನೈ-ಮುಂಬಯಿ ಹಾಗೂ ಬಳ್ಳಾರಿ ಹೊಸಪೇಟೆ ಮಾರ್ಗವಾಗಿ ಚಲಿಸುವಂತೆ ಚೆನ್ನೈ-ವಾಸ್ಕೊ ನಡುವೆ ನೂತನ ರೈಲು ಸಂಚಾರ ಆರಂಭಿಸಬೇಕೆಂದರು. ದಾಮೋದರ್ ರಾಠಿ ಮಾತನಾಡಿ, ಹುಬ್ಬಳ್ಳಿ-ಸೊಲ್ಲಾಪುರ ಪ್ಯಾಸೆಂಜುರ್ ಬೆಳಗಿನ ವೇಳೆ ಸಂಚಾರ ಕೈಗೊಳ್ಳಬೇಕು, ಅದೇ ರೀತಿ ಸೊಲ್ಲಾಪುರ-ಹುಬ್ಬಳ್ಳಿ ರೈಲು ಮಧ್ಯಾಹ್ನ ಸೊಲ್ಲಾಪುರದಿಂದ ಸಂಚರಿಸಬೇಕು. ಮೈಸೂರು-ನಿಜಾುಮುದ್ದೀನ್ ಸ್ವರ್ಣ ಜಯಂತಿ ವಾರದಲ್ಲಿ ಎರಡು ದಿನ ಸಂಚರಿಸುವ ರೈಲು ಹುಬ್ಬಳ್ಳಿ, ಗದಗ, ವಿಜಾಪುರ ಮಾರ್ಗವಾಗಿ ಸಂಚರಿಸಬೇಕೆಂದು ತಿಳಿಸಿದರು.

ದೇವಾನಂದ್ ಭಂಡಾರಿ ಮಾತನಾಡಿ, ಯಶವಂತಪುರ-ವಾಸ್ಕೊ ನಡುವ

 

loading...

LEAVE A REPLY

Please enter your comment!
Please enter your name here