ಒಳನಾಡು ಮೀನುಗಾರಿಕೆ ತರಬೇತಿಗೆ ಅರ್ಜಿ ಆಹ್ವಾನ

0
14
loading...

ಬೆಳಗಾವಿ: ಸೆಪ್ಟೆಂಬರ್:23: ಬಿ.ಆರ್. ಪ್ರ್ರಾಜೆಕ್ಟ್ ಮೀನುಗಾರಿಕೆ ತರಬೇತಿ ಕೇಂದ್ರದಲ್ಲಿ ಎರಡು ತಿಂಗಳ ಒಳನಾಡು ಮೀನುಗಾರಿಕೆ ತರಬೇತಿ ನೀಡಲು ಅರ್ಹ ಪುರುಷ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಒಳನಾಡು ಮೀನುಗಾರಿಕೆ ತರಬೇತಿಯು ಬರುವ ನವೆಂಬರ್ 2 ರಿಂದ ಪ್ರಾರಂಭವಾಗಲಿದ್ದು, ಅಭ್ಯರ್ಥಿಯು ಎಸ್.ಎಸ್.ಎಲ್.ಸಿ. (ಉತ್ತೀರ್ಣ ಹಾಗೂ ಅನುತ್ತೀರ್ಣ) ಓದಿರಬೇಕು ಹಾಗೂ ವಯೋಮಿತಿ 18 ರಿಂದ 40 ವರ್ಷದೊಳಗೆ ಇರಬೇಕು. ಬೀದರ, ಗುಲಬರ್ಗಾ, ಯಾದಗಿರಿ, ಚಿತ್ರದುರ್ಗ, ರಾಯಚೂರು, ಧಾರವಾಡ, ಬಿಜಾಪೂರ, ಬಳ್ಳಾರಿ, ಬೆಳಗಾವಿ, ಉತ್ತರ ಕನ್ನಡ, ಹಾವೇರಿ, ಗದಗ, ಕೊಪ್ಪಳ, ದಾವಣಗೆರೆ, ಹಾವೇರಿ, ಶಿವಮೊಗ್ಗ. ಚಿಕ್ಕಮಗಳೂರು ಹಾಗೂ ಬಾಗಲಕೋಟೆಯ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಬಹುದಾಗಿದೆ.

ನಿಗದಿತ ಅರ್ಜಿ ನಮೂನೆಯನ್ನು ಮೀನುಗಾರಿಕೆ ಸಹಾಯಕ ನಿರ್ದೇಶಕರು (ಶ್ರೇಣಿ-1), ಮೀನುಗಾರಿಕೆ ತರಬೇತಿ ಕೇಂದ್ರ, ಬಿ.ಆರ್. ಪ್ರಾಜೆಕ್ಟ್, ಭದ್ರಾವತಿ ತಾಲೂಕಾ ಶಿವಮೊಗ್ಗಾ ಜಿಲ್ಲೆ ಇವರಿಂದ ಪಡೆದು ನಿಗದಿತ ದಾಖಲಾತಿಗಳೊಂದಿಗೆ ಭರ್ತಿ ಮಾಡಿ ಅಕ್ಟೌಬರ್ 18 ರೊಳಗಾಗಿ ಸಲ್ಲಿಸಬೇಕು. ಅರ್ಜಿಗಳನ್ನು ಅಂಚೆ ಮೂಲಕ ಪಡೆಯಲಿಚ್ಛಿಸುವವರು 9 ಘಿ 4 ಅಳತೆಯ ಸ್ವವಿಳಾಸವಿರುವ ಲಕೋಟೆಗೆ 5/- ರೂಪಾಯಿ ಅಂಚೆ ಚೀಟಿ ಲಗತ್ತಿಸಿ ಮೇಲಿನ ಕಚೇರಿಗೆ ಕಳುಹಿಸಿ ಅರ್ಜಿಯನ್ನು ಪಡೆಯಬೇಕು. ಹೆಚ್ಚಿನ ಮಾಹಿತಿಯನ್ನು ದೂರವಾಣಿ ಸಂ: 08282-256252 ಗೆ ಸಂಪರ್ಕಿಸಿ ಪಡೆಯಬಹುದಾಗಿದೆ.

loading...

LEAVE A REPLY

Please enter your comment!
Please enter your name here