ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ

0
25
loading...

ಧಾರವಾಡ ಸೆ.17: ಇಂದು ಕನ್ನಡ ಮಾಧ್ಯಮದಲ್ಲಿ ಕಲಿಯುವವರ ಸಂಖ್ಯೆ ಕಡಿಮೆಯಾಗುತ್ತಿರುವುದು ಅತಂಕದ ಸಂಗತಿ. ಹೀಗೆ ಮುಂದುವರೆದರೆ ಮುಂದೊಂದು ದಿನ ಕನ್ನಡ ಭಾಷೆ ಮಾತನಾಡಲಿಕ್ಕೆ ಮಾತ್ರ ಸಿಮೀತವಾದರೆ ಆಶ್ಚರ್ಯ ಪಡಬೇಕಾಗಿಲ್ಲ ಎಂದು ಮಕ್ಕಳ ಸಾಹಿತಿ ನಿಂಗಣ್ಣ ಕುಂಟಿ ಅವರು ಕರ್ನಾಟಕ ವಿದ್ಯಾವರ್ಧಕ ಸಂಘವು ಶ್ರೀಮತಿ ಪಾರ್ವತಿದೇವಿ ಮಹಾದೇವ ಕೇಸರಿ ಮತ್ತು ಶ್ರೀಮತಿ ಲೀಲಾ ಮಹದೇವ ಕೇಸರಿ ದತ್ತಿ ಕಾರ್ಯಕ್ರಮದ ಅಂಗವಾಗಿ ಎಸ್.ಎಸ್.ಎಲ್.ಸಿ ಹಾಗೂ ಪಿ.ಯು.ಸಿ. ಯಲ್ಲಿ ಕನ್ನಡ ಮಾಧ್ಯಮದಲ್ಲಿ ಓದಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಮಾತನಾಡುತ್ತಿದ್ದರು.

ಮುಂದುವರೆದು ಮಾತನಾಡಿದ ಕುಂಟಿ ಅವರು ಇಂದು ಶಹರ ಮಕ್ಕಳಲ್ಲಿ ಕನ್ನಡ ಕಲಿಯುವಲ್ಲಿ ಅಸಡ್ಡೆ ಭಾವನೆ ತೋರುತ್ತಿರುವುದು ಖೇದಕರ. ಮಕ್ಕಳಿಗೆ ಕನ್ನಡ ಭಾಷೆಯನ್ನು ಕಲಿಸುವಲ್ಲಿ ಶಿಕ್ಷಕರು ಹೆಚ್ಚಿನ ಮುತವರ್ಜಿ ವಹಿಸುವ ಕಾರ್ಯ ತುರ್ತಾಗಿ ಆಗಬೇಕಾಗಿದೆ ಎಂದರು.

ಅತಿಥಿಗಳಾಗಿ ಆಗಮಿಸಿದ ಡಾ. ಶಿವಾನಂದ ಶೆಟ್ಟರ ಮಾತನಾಡಿದರು. ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ ಕಾರ್ಯಕ್ರಮ ನಡೆಸಿಕೊಟ್ಟರು.

ಬಹುಮಾನ ಪಡೆದ ವಿದ್ಯಾರ್ಥಿಗಳು :

ಎಸ್.ಎಸ್.ಎಲ್.ಸಿ.ಯಲ್ಲಿ: 1. ಕು. ನಾಗರತ್ನಾ ಕುಲಾಲ, ಪ್ರಜಂಟೇಶನ್ ಸ್ಕೂಲ, ಧಾರವಾಡ, 2. ಕು. ನವೀನ ಚನ್ನಬಸಪ್ಪ ಜಾಲಿಮರದ, ಮೃಜ್ಯುಂಜಯ ಪ್ರೌಢ ಶಾಲೆ, ಧಾರವಾಡ, 3. ಕು. ಹಸೀನಾಬೇಂಗಂ ಸಿಂದಗಿ,ಬಾಸೆಲ್ ಮಿಶನ್ ಬಾಲಕಿಯರ ಪ್ರೌಢಶಾಲೆ, ಧಾರವಾಡ, 4.ಕು ಪೂಜಾ ಬ. ತಳವಾರ, ಶಾರದಾ ಬಾಲಿಕೆಯರ ಪ್ರೌಢ ಶಾಲೆ, ಧಾರವಾಡ, 5. ಕು. ಮಂಜುಳಾ ನಿಕ್ಕಂ, ಪ್ರಜಂಟೇಶನ್ ಸ್ಕೂಲ, ಧಾರವಾಡ

ಪಿ. ಯು. ಸಿ. ಯಲ್ಲಿ: 1.ಕು ಅಶ್ವಿನಿ ಪೂಜಾರ, ಅಂಜುಮನ ಸಂ. ಪ. ಪೂ. ಕಾಲೇಜು ಧಾರವಾಡ, 2.ಕು ತನುಜಾ ಅಶೋಕ ರೋಖಡೆ, ವಿದ್ಯಾರಣ್ಯ ಸಂ. ಪ. ಪೂ. ಕಾಲೇಜು ಧಾರವಾಡ, 3. ಕು ಮಂಜುಳಾ ಹ್ಯಾಟಿ, ಕರ್ನಾಟಕ ಕಲಾ ಮಹಾವಿದ್ಯಾಲಯ ಧಾರವಾಡ.

 

loading...

LEAVE A REPLY

Please enter your comment!
Please enter your name here