ಕವಟಗಿಮಠ ದೂರು ನಿರಾಧಾರ: ಈರಗೌಡ ಪಾಟೀಲ್

0
17
loading...

 

ಚಿಕ್ಕೌಡಿ, 14- ರಾಯಬಾಗ್ ತಾಲ್ಲೂಕಿನ ಬಾವಾನಸವದತ್ತಿಯ  ಲಿಆದರ್ಶ ಶಿಕ್ಷಣ ಸಂಸ್ಥೆಳಿಯಲ್ಲಿ ಕಾನೂನುಬಾಹಿರ ಚಟುವಟಿಕೆಗಳು ನಡೆಯುತ್ತಿದ್ದು, ಸದರಿ ಸಂಸ್ಥೆಗೆ ಆಡಳಿತಾಧಿಕಾರಿ ನೇಮಿಸುವಂತೆ ಶಿಕ್ಷಣ ಇಲಾಖೆಗೆ ವಿಧಾನಪರಿಷತ್ ಸದಸ್ಯ ಮಹಾಂತೇಶ್ ಕವಟಗಿಮಠ್ ಸಲ್ಲಿಸಿರುವ ದೂರು ನಿರಾಧಾರವಾಗಿದೆಯೆಂದು ಸಂಸ್ಥೆಯ ಅಧ್ಯಕ್ಷ ಈರಗೌಡಾ ಪಾಟೀಲ್ ತಿಳಿಸಿದ್ದಾರೆ.

ಅವರು ಚಿಕ್ಕೌಡಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡುತ್ತ, ಕಳೆದ 30 ವರ್ಷ ಗಳಿಂದ ಆದರ್ಶ ಶಿಕ್ಷಣ ಸಂಸ್ಥೆಯಲ್ಲಿ ಕೆ.ಜಿ.ಯಿಂದ ಪದವಿ ತರಗತಿವರೆಗೆ ಸುಮಾರು 1200ಕ್ಕೂ ಮೀರಿ ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ. ಇಂತಹ ಶಿಕ್ಷಣ ಸಂಸ್ಥೆಯಲ್ಲಿ ಕಾನೂನುಬಾಹಿರ ಚಟುವಟಿಕೆಗಳು ನಡೆಯುತ್ತಿವೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಆಯುಕ್ತರಿಗೆ ಲಿಖಿತವಾಗಿ ವಿಧಾನಪರಿಷತ್ ಸದಸ್ಯರು ಸಲ್ಲಿಸಿದ ದೂರಿನನ್ವಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಚಿಕ್ಕೌಡಿ ಶೈಕ್ಷಣಿಕ ಜಿಲ್ಲೆಯ ಉಪನಿರ್ದೇಶಕರು ವಿಷಯ ಪರೀವೀಕ್ಷಕರಾದ ವೈ.ಎಲ್.ನಡೋಣಿ ಅವರಿಗೆ ಸದರಿ ಶಿಕ್ಷಣ ಸಂಸ್ಥೆಗೆ ಭೇಟಿ ನೀಡಿ ವರದಿ ಸಲ್ಲಿಸುವಂತೆ ಆದೇಶ ನೀಡಿದ್ದರು.

ಅದರಂತೆ ಶಿಕ್ಷಣ ಸಂಸ್ಥೆಗೆ ಭೇಟಿ ನೀಡಿದ್ದ ವಿಷಯ ಪರೀವೀಕ್ಷಕರ ಮುಂದೆ ಸಂಸ್ಥೆಯ ಅಧ್ಯಕ್ಷನಾಗಿರುವ ತಾವು ಈ ಆಪಾದನೆ ರಾಜಕೀಯ ಪ್ರೇರಿತವಾಗಿದ್ದು, ಸಂಸ್ಥೆಯಲ್ಲಿ ಯಾವುದೇ ರೀತಿಯ ಕಾನೂನುಬಾಹಿರ ಚಟುವಟಿಕೆಗಳು ನಡೆಯುತ್ತಿಲ್ಲ, ವಿದ್ಯಾರ್ಥಿಗಳ ಶಿಕ್ಷಣಕ್ಕಾಗಿ ಎಲ್ಲ ಮೂಲಭೂತ ಸೌಕರ್ಯಗಳನ್ನು ಆಡಳಿತ ಮಂಡಳಿ ಪೂರೈಸಿದೆ, ಹೀಗಾಗಿ ಸಂಸ್ಥೆಗೆ ಆಡಳಿತಾಧಿಕಾರಿ ನೇಮಿಸುವ ಅಗತ್ಯವಿಲ್ಲ ಎಂದುಇ ಗಮನಕ್ಕೆ ತಂದಿರುವುದಾಗಿ ಲಿಖಿತ ರೂಪದಲ್ಲಿ ತಿಳಿಸಿರುವುದಾಗಿ ಹೇಳಿದರು.

ವಿಚಾರಣೆ ನಡೆಸಿದ ವಿಷಯ ಪರೀವೀಕ್ಷಕರು ಶಿಕ್ಷಣ ಸಂಸ್ಥೆಯಲ್ಲಿ ನಡೆದಿದೆ ಎನ್ನಲಾದ ಕಾನೂನುಬಾಹಿರ ಚಟುವಟಿಕೆಗಳು ಯಾವುವು ಎಂಬುದು ದೂರಿನಲ್ಲಿ ಸ್ಪಷ್ಟವಿಲ್ಲದ ಕಾರಣ, ವಿಚಾರಣೆಗೆ ಸೂಕ್ತ ಕಾರಣ ಸಿಗದೇ ಇರುವುದು, ಶಿಕ್ಷಣ ಸಂಸ್ಥೆಗೆ ಇಲಾಖಾ ನಿಯಮಾವಳಿಗಳಿಗೆ ವಿರುದ್ಧವಾಗಿ ಆಡಳಿತಾಧಿಕಾರಿಯನ್ನು ನೇಮಿಸುವುದು ಸೂಕ್ತವಲ್ಲ ಎಂದು ವರದಿ ನೀಡಿರುವುದರಿಂದ, ಸದರಿಯವರು ಶಿಕ್ಷಣ ಸಂಸ್ಥೆಯ ಮೇಲೆ ಮಾಡಿರುವ ಆರೋಪ ಸತ್ಯಕ್ಕೆ ದೂರವಾಗಿದೆ ಎಂದು ಈರಗೌಡ ಪಾಟೀಲ್ ಸ್ಪಷ್ಟಪಡಿಸಿದರು.

ಚಿಕ್ಕೌಡಿ ದೂಧಗಂಗ ಕೃಷ್ಣಾ ಸಹಕಾರಿ ಸಕ್ಕರೆ ಕಾರ್ಖಾನೆಯ ಚೇರ್ಮನ್ರಾಗಿರುವ ವಿಧಾನಪರಿಷತ್ ಸದಸ್ಯ ಮಹಾಂತೇಶ್ ಕವಟಗಿಮಠ್ ಅವರು ಕಾರ್ಖಾನೆಯ 250 ರೈತ ಸದಸ್ಯರ ಕಬ್ಬು ನೋಂದಣಿ ಮಾಡಿಕೊಂಡರೂ ಸರಿಯಾದ ವೇಳೆಗೆ ಕಬ್ಬು ಕಟಾವು ಮಾಡದೇ ರೈತರಿಗೆ ಅನ್ಯಾಯ ಮಾಡಿದ್ದಾರೆ, ಹಾಗೂ ರೈತ ಸದಸ್ಯರಿಗೆ ಸಕ್ಕರೆ ಕಾರ್ಡ್ ನೀಡದೇ ದ್ವೇಷದ ರಾಜಕಾರಣವನ್ನು ಕಾರ್ಖಾನೆಯಲ್ಲಿ ನಡೆಸಿದ್ದಾರೆ ಎಂದು ಈರಗೌಡ ಪಾಟೀಲ್ ಆರೋಪಿಸಿದರು.

ಪತ್ರಿಕಾಗೋಷ್ಠಿಯಲ್ಲಿ ರಾಯಬಾಗ್ ಯುವ ಕಾಂಗ್ರೆಸ್ ಅಧ್ಯಕ್ಷ ಬಿ.ಎಸ್.ಬಂಡಗಾರ್, ಅಪ್ಪಾಸಾಹೇಬ್ ಶಿರಗಣ್ಣವರ ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here