ಕೊಕಟನೂರ ಪ್ರೌಢಶಾಲೆಗೆ ಸಮಗ್ರ ಪ್ರಶಸ್ತಿ

0
28
loading...

ಕೊಕಟನೂರ (ತಾ. ಅಥಣಿ) ತಾಲೂಕಾಮಟ್ಟದ ಕ್ರೀಡಾಕೂಟದಲ್ಲಿ ಸ್ಥಳೀಯ ಸರ್ಕಾರಿ ಪ್ರೌಢ ಶಾಲೆಯ ಕ್ರೀಡಾಪಟುಗಳು ಅತಿ ಹೆಚ್ಚು ಬಹುಮಾನಗಳನ್ನು ಪಡೆದುಕೊಂಡಿದ್ದು ಈ ಸಾಲೆಯು ಸತತ 20ನೇ ಬಾರಿಗೆ ಸಮಗ್ರ ಪ್ರಶಸ್ತಿ ಪಡೆದುಕೊಂಡಿದೆ.

ಇಲ್ಲಿಯ ಸರ್ಕಾರಿ ಪದವಿಪೂರ್ವ ಕಾಲೇಜಿನ ಪ್ರೌಢ ಶಾಲೆ ಮೈದಾನದಲ್ಲಿ ನಡೆದ ಕ್ರೀಡಾಕೂಟದಲ್ಲಿ ಜಯ ಗಳಿಸಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಗುಂಪು ಆಟದಲ್ಲಿ ಖೋಖೋ ಪ್ರಥಮ, ನಡಿಗೆ ಸ್ಪರ್ಧೆಯಲ್ಲಿ ಗಣೇಶ ಭಜಂತ್ರಿ ಪ್ರಥಮ, ಸೈಕ್ಲಿಂಗ್ನಲ್ಲಿ ಸಂಜು ತೋಟಗಿ ಪ್ರಥಮ, ಕುಸ್ತಿಯಲ್ಲಿ ನಾಗಪ್ಪ ಕಳಸಣ್ಣವರ ಪ್ರಥಮ ಹಾಗೂ ಸಂಜು ತೋಟಗಿ ಪ್ರಥಮ 400 ಮೀ. ಓಟದಲ್ಲಿ ಮಂಜುನಾಥ ಮುತ್ತಾರೆ ದ್ವಿತೀಯ,, 1500 ಮೀ. ಓಟದಲ್ಲಿ ಸಂಜು ತೋಟಗಿ ದ್ವಿತೀಯ, ಭಲ್ಲೆ ಎಸೆತದಲ್ಲಿ  ನಾಗಪ್ಪ ಕಳಸಣ್ಣವರ ದ್ವಿತೀಯ,  ಹ್ಯಾಮರ ಥ್ರೌದಲ್ಲಿ  ನಾಗಪ್ಪ ಕಳಸಣ್ಣವರ ದ್ವಿತೀಯ ತ್ರಿಪಲ್ ಜಂಪನಲ್ಲಿ ಸಂತೋಷ ಜಾಧವ ದ್ವಿತೀಯ, ಕುಸ್ತಿ ಮಂಜುನಾಥ ಮುತ್ತಾರೆ ದ್ವಿತೀಯ ಹಾರ್ಡಲ್ಸ್ನಲ್ಲಿ ಸಂಜು ತೋಟಗಿ ದ್ವಿತೀಯ, ಎತ್ತರ ಜಿಗಿತದಲ್ಲಿ ಬೀರಪ್ಪ ಬಣಜ ತೃತೀಯ ಸ್ಥಾನ ಪಡೆದಿದ್ದಾರೆ.

loading...

LEAVE A REPLY

Please enter your comment!
Please enter your name here