ಕೋಟಿ ಜಪಯಜ್ಞ ಹಾಗೂ ಸತ್ಸಂಗ ಸಮ್ಮೇಳನ

0
9
loading...

 

ರಾಮದುರ್ಗ: ಸಮಾಜದಲ್ಲಿ ಇನ್ನೂ ಆಧ್ಯಾತ್ಮ ಜೀವಂತವಾಗಿರುವದರ ಫಲವೇ ಹಳ್ಳಿಗಳಲ್ಲಿ ಇನ್ನೂ ನ್ಯಾಯ, ನೀತಿ, ಧರ್ಮ ಮತ್ತು ತತ್ವಗಳು ಉಳಿದುಕೊಂಡಿವೆ ಎಂದು ಸೋಮನಕೊಪ್ಪದ ಪೂಜ್ಯರಾದ ಶೃದ್ದಾನಂದ ಮಹಾಸ್ವಾಮಿಗಳು ಹೇಳಿದರು.

ತಾಲೂಕಿನ ಹಲಗತ್ತಿ ಗ್ರಾಮದಲ್ಲಿ ನಡೆದ ಕೋಟಿ ಜಪಯಜ್ಞ ಹಾಗೂ ಸತ್ಸಂಗ ಸಮ್ಮೇಳನದಲ್ಲಿ ಆಶಿರ್ವಚನ ನೀಡುತ್ತ ಮಾತನಾಡಿದ ಪೂಜ್ಯರು ಮನುಕುಲದ ಜ್ಯೌತಿ ಬೆಳಗಲು ಮತ್ತು ಅಜ್ಞಾನದ ಕತ್ತಲೆ ಹೊಡೆದೊಡಿಸಲು ಭಗವಂತನು ನಾನಾ ರೂಪದಲ್ಲಿ ಭೂಮಿಯ ಮೇಲೆ ಜನಿಸಿದ್ದಾನೆಂದು ಹೇಳಿದಲ್ಲದೆ ಭೂಮಿಯ ಮೇಲಿನ ಜೀವಿಗಳ ರಕ್ಷಣೆ ಇಂದು ಆಧ್ಯಾತ್ಮದಿಂದ ಮಾತ್ರ ಸಾಧ್ಯ ಎಂದು ಹೇಳಿದರು.

ನ್ಯಾಯ, ನೀತಿ ಮತ್ತು ಧರ್ಮದ ಹಾದಿಯಲ್ಲಿ ನಡೆಯುವವರನ್ನು ದೇವರು ಎಂದು ಕೈ ಬಿಡುವದಿಲ್ಲ ಅವರಿಗೆ ತಾತ್ಪೂರ್ತಿವಾಗಿ ತೊಂದರೆ ಬರಬಹುದು ಆದರೆ ಅವರು ಸದಾ ಜಯಶಾಲಿಗಳಾಗಿರುತ್ತಾರೆಂದು ಹೇಳಿದರು.

ಸತ್ಸಂಗದಲ್ಲಿ ಹಳಕಟ್ಟಿಯ ನಿಜಗುಣ ಸ್ವಾಮಿಗಳು, ತಿಮ್ಮಾಪೂರದ ಬಸವರಾಜ ಸ್ವಾಮಿಗಳು, ಕಟಕೋಳದ ಸಿದ್ಧರಾಯ ಅಜ್ಜನವರ, ಮಳೆರಾಜ ಮಠದ ಅಪ್ಪಯ್ಯ ಸ್ವಾಮಿಗಳು, ಮುತ್ತಲಗೇರಿಯ ಕಾಶಿನಾಥ ಸ್ವಾಮಿಗಳು, ಗದ್ದನಕೇರಿಯ ಮಳೆಯಪ್ಪಯ್ಯ ಸ್ವಾಮಿಗಳು, ಚಿರ್ಲಕೊಪ್ಪದ ಶಾಂತಮ್ಮ ತಾಯಿ, ರನ್ನ ತಿಮ್ಮಾಪೂರದ ಮೈತ್ರಾ ತಾಯಿ, ಸೀಮಿಕೇರಿಯ ಗೀತಾ ತಾಯಿ, ಬಂಕನೇರಿಯ ಯಲ್ಲಮ್ಮ ತಾಯಿ, ಅನಗವಾಡಿಯ ಅನಸಮ್ಮ ತಾಯಿ ಮುಂತಾದವರು ಭಾಗವಹಿಸಿದ್ದರು

loading...

LEAVE A REPLY

Please enter your comment!
Please enter your name here