ಖಿಳೇಗಾಂವ್: ಸಮರ್ಪಕ ಸಾರಿಗೆ ಸಂಪರ್ಕಕ್ಕೆ ಆಗ್ರಹ

0
22
loading...

ಮದಭಾವಿ, ತಾ.ಅಥಣಿ, 14- ಸಮೀಪದ ಖಿಳೇಗಾಂವ್ ಗ್ರಾಮಕ್ಕೆ ನಿಯಮಿತ ಸಾರಿಗೆ ಸಂಪರ್ಕ ಕಲ್ಪಿಸುವಂತೆ ಆಗ್ರಹಿಸಿ ಕರ್ನಾಟಕ ರಕ್ಷಣಾ ವೇದಿಕಯ ಕಾರ್ಯಕರ್ತರು, ಅಧ್ಯಕ್ಷ ಬಸನಗೌಡ ಪಾಟೀಲ್ (ಬಮ್ನಾಳ) ಇಲ್ಲಿನ ಬಸ್ ನಿಲ್ದಾಣದ ಎದುರು ಸಾಂಕೇತಿಕ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.

ಸುಕ್ಷೇತ್ರ ಖಿಳೇಗಾಂವ್ ಬಸವೇಶ್ವರ ದೇವಸ್ಥಾನವನ್ನು ಪ್ರತಿನಿತ್ಯ ಸಾವಿರಾರು ಯಾತ್ರಾರ್ಥಿಗಳು ಸಂದರ್ಶಿಸುತ್ತಾರೆ. ಅಲ್ಲದೇ, ಮಹಾ ರಾಷ್ಟ್ತ್ರದ ಗಡಿಭಾಗವಾದ ಈ ಗ್ರಾಮದಿಂದ ತಾಲ್ಲೂಕು ಕೇಂದ್ರಕ್ಕೆ ವಿದ್ಯಾಭ್ಯಾಸಕ್ಕೆಂದು ನೂರಾರು ವಿದ್ಯಾರ್ಥಿ ವಿದ್ಯಾರ್ಥಿನಿಯರು ಆಗಮಿಸುತ್ತಾರೆ. ಆದರೂ ಕೂಡ, ಇಲ್ಲಿನ ಘಟಕ ವ್ಯವ ಸ್ಥಾಪಕರು ಇದುವರೆಗೆ ಈ ಗ್ರಾಮಕ್ಕೆ ಸೂಕ್ತ ಬಸ್ವ್ಯವಸ್ಥೆ ತಲುಪಿಸುವಲ್ಲಿ ವಿಫಲರಾಗಿದಾರೆಂದು ಆರೋಪಿಸಿ ಕಾರ್ಯಕರ್ತರು ಪ್ರತಿಭಿಟಿಸಿ, ಆಕ್ರೌಷ ವ್ಯಕ್ತಪಡಿಸಿದರು.

ಪ್ರತಿಭಟನೆಗೆ ಸ್ಪಂದಿಸಿದ ಘಟಕ ವ್ಯವಸ್ಥಾಪಕ ಎ.ಆರ್.ಛಬ್ಬಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಹೆಚ್ಚುವರಿ ಬಸ್ ವ್ಯವಸ್ಥೆ ಮಾಡಿ ಕೊಡುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆಯನ್ನು ಹಿಂಪಡೆಯ ಲಾಯಿತು.

ಸಚಿನ್ ಪಾಟೀಲ್, ರವೀಂದ್ರ ಸನದಿ, ಸುನಿಲ್ ಶೇಡಬಾಳೆ, ದತ್ತಾ ಪವಾರ್, ಸುಶಾಂತ್ ಮಾಂಗುರೆ, ಪ್ರಶಾಂತ್ ಪೂಜಾರಿ, ಸಂಜೂ ಮಾಳಿ, ಸಿದ್ದು ಒಡೆಯರ್, ಬುರಾನ್ಸಾಬ್ ನದಾಫ್ು, ಶಿವಾನಂದ್ ಸಿಂಧೂರ್ ಸೇರಿದಂತೆ ವಿದ್ಯಾರ್ಥಿ ವಿದ್ಯಾರ್ಥಿ ನಿಯರು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here