ಗಣಿ ಮರು ತನಿಖೆಗೆ ಸಿದ್ದ: ಲೋಕಾಯುಕ್ತರು

0
19
loading...

ರಾಯಚೂರು, ಸೆ. 16: ಅಕ್ರಮ ಗಣಿಗಾರಿಕೆಯ ವರದಿ ಪೂರ್ಣ ಪ್ರಮಾಣದಲ್ಲಿ ಇಲ್ಲ ಎಂಬ ಮಾತುಗಳು ಕೇಳಿ ಬರುತ್ತಿದ್ದು, ಸರ್ಕಾರ ಬಯಸಿದರೆ ಮತ್ತೊಮ್ಮೆ ತನಿಖೆ ಮಾಡಲು ಸಿದ್ದವಿರುವುದಾಗಿ ಲೋಕಾಯುಕ್ತ ನ್ಯಾಯಮೂರ್ತಿ ಶಿವರಾಜ್ ಪಾಟೀಲ್ ಇಂದಿಲ್ಲಿ ಹೇಳಿದ್ದಾರೆ.

ಸ  ು ದಿ ್ದ ಗ ಾ ರ  ರ ೆ ೂ ಂ ದಿ ಗ ೆ ಮಾತನಾಡಿದ ಅವರು ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗಡೆ ನೀಡಿರುವ ವರದಿಯ ಬಗ್ಗೆ ನಾನು ಪ್ರತಿಕ್ರಿಯೆ ನೀಡುವದಿಲ್ಲ. ಆದರೆ 10 ವರ್ಷಗಳ ಪೂರ್ಣ ವರದಿ ನೀಡುವಂತೆ ಸೂಚಿಸಿದರೆ ಅದಕ್ಕೆ ತಾವು ಸಿದ್ದವಿರುವುದಾಗಿ ಅವರು ಅಚ್ಚರಿ ಮೂಡಿಸಿದ್ದಾರೆ.

ತಮ್ಮ ತವರು ಜಿಲ್ಲೆ ರಾಯಚೂರಿಗೆ ಬಂದಿರುವ ಅವರು ಸುದ್ದಿಗಾರರೊಂದಿಗೆ ಮಾತನಾಡಿ ಅಕ್ರಮ ಗಣಿಗಾರಿಕೆ ವರದಿಯ ಬಗ್ಗೆ ಕೆಲವರು ಅಪೂರ್ಣವಾಗಿದೆ ಎಂದು ಹೇಳುತ್ತಿದ್ದಾರೆ. ಅದೇನೇ ಆದರೂ ಸದ್ಯ ಸರ್ಕಾರ ಯಾವ ನಿರ್ಧಾರ ಕೈಗೊಳ್ಳುತ್ತದೆ ಎಂಬುದನ್ನು ನೋಡಿ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇನೆ. ಮತ್ತೊಮ್ಮೆ ಗಣಿಗಾರಿಕೆಯ ತನಿಖೆ ನಡೆಸುವ ಕಾಲ ಬಂದರೆ ಅದಕ್ಕೆ ಸಿದ್ದನಿದ್ದೇನೆ ಎಂದರು.

ಅಕ್ರಮ ಗ್ರೇನೆಟ್ ಕಲ್ಲು ಗಣಿಗಾರಿಕೆಯ ಜೊತೆಗೆ ಮರಳು ದಂಧೆಗೆ ಕಡಿವಾಣ ಹಾಕಲು ಪ್ರಯತ್ನಿಸುತ್ತಿದ್ದೇನೆ. ನಾನು ಅಧಿಕಾರ ವಹಿಸಿಕೊಂಡು ಒಂದೂವರೆ ತಿಂಗಳು ಆಗಿದೆ. ಈಗ ರಾಜ್ಯದ ಎಲ್ಲ ಕಡೆಗೆ ಪ್ರವಾಸ ಮಾಡಿ ಮಾಹಿತಿ ಪಡೆಯುವೆ ಎಂದರು.

ಲೋಕಾಯುಕ್ತಕ್ಕೆ ಪರಮಾಧಿಕಾರ ಬೇಕಾಗಿಲ್ಲ ಆದರೆ ಸೂಕ್ತ ಕಾರ್ಯನಿರ್ವಹಣೆಗೆ ಈ ಕಾಯಿಲೆಗೆ ತಿದ್ದುಪಡಿ ಮಾಡುವುದು ಅಗತ್ಯವಿದೆ. ಈ ಕುರಿತು ಉಪಲೋಕಾಯುಕ್ತ ಗುರುರಾಜ ಅವರಿಗೆ ವರದಿ ನೀಡುವಂತೆ ತಿಳಿಸಿದ್ದೇನೆ. ಹೆಚ್ಚುತ್ತಿರುವ ಭ್ರಷ್ಟಾಚಾರವನ್ನು ನಿಯಂತ್ರಿಸಲು ಲೋಕಾಯುಕ್ತ ಸಂಸ್ಥೆ ಹೊಸ ಯೋಜನೆ ಹಾಕಿಕೊಳ್ಳಲು ತೀರ್ಮಾನಿಸಿದೆ ಎಂದರು.

ನಾವು ಭ್ರಷ್ಠ ಅಧಿಕಾರಿಗಳ ಜಾತಕವನ್ನು ಬಯಲು ಮಾಡುತ್ತೇನೆ. ಆದರೆ ಆ ಅಧಿಕಾರಿಗಳು ರಾಜಕೀಯ ಪ್ರಭಾವವನ್ನು ಬಳಿಸಿ ಅದೇ ಹುದ್ದೆಗಳಿಗೆ ಮತ್ತೆ ನೇಮಕಗೊಳ್ಳುತ್ತಾರೆ. ಆದ್ದರಿಂದ ಆ ರೀತಿ ಮರು ನೇಮಕ ಮಾಡುವಾಗ ಲೋಕಾಯುಕ್ತರ ಅನುಮತಿ ಪಡೆಯಬೇಕು ಎಂಬ ನಿಯಮವನ್ನು ರೂಪಿಸಲಿ ಮುಂದಾಗಿದ್ದೇನೆ. ಈ ಕುರಿತು ಸರ್ಕಾರದೊಂದಿಗೆ ಚರ್ಚೆ ನಡೆಸುತ್ತೇನೆ ಎಂದರು.

ನಿವೇಶನ ಮರಳಿಸಿದ್ದೇನೆ

ಬೆಂಗಳೂರಿನ ವಯಾಲಿ ಕಾವಲ್ ಬಡಾವಣೆಯ ಹೌಸಿಂಗ್ ಸೊಸೈಟಿಯಲ್ಲಿ ನಾನು ಪಡೆದಿದ್ದ ನಿವೇಶನವನ್ನು ಕಳೆದ ಎರಡು ದಿನಗಳ ಹಿಂದೆ ಮರಳಿ ನೀಡಿದ್ದೇನೆ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಗಳು ಸ್ಪಷ್ಟಪಡಿಸಿದ್ದಾರೆ.

ನಷ್ಟದಲ್ಲಿದ್ದ ಆ ಸೋಸೈಟಿ ನಿವೇಶನಗಳನ್ನು ಮಾರಾಟ ಮಾಡ ತೊಡಗಿತ್ತು. ನಾನು ಹಣ ನೀಡಿ ಖರೀದಿ ಮಾಡಿದ್ದೆ. ಆದರೆ ಕೆಲವರು ಅಪಸ್ವರ ವ್ಯಕ್ತಪಡಿಸಿದ್ದರಿಂದ ಅದನ್ನು ಮರಳಿಸಿದ್ದೇನೆ. ಇದರಲ್ಲಿ ಕಾನೂನು ಉಲ್ಲಂಘನೆಯ ಪ್ರಶ್ನೆಯೇ ಇಲ್ಲ ಎಂದರು.

 

 

 

loading...

LEAVE A REPLY

Please enter your comment!
Please enter your name here