ಜಾಮೀನಿನ ಸುರಿಮಳೆಯ ದಿನ

0
18
ಅಮರ್ಗೂ ದೊರೆಯಿತು ಜಾಮೀನು

loading...

ನವದೆಹಲಿ, ಸೆ.15: ಓಟಿಗಾಗಿ ನೋಟು ಪ್ರಕರಣದ ಪ್ರಮುಖ ಆರೋಪಿ ರಾಜ್ಯಸಭಾ ಸದಸ್ಯ ಅಮರ್ಸಿಂಗ್ ಅವರಿಗೆ ದೆಹಲಿ ನ್ಯಾಯಾಲಯ ಇದೇ 19ರ ವರೆಗೆ ಮಧ್ಯಾಂತರ ಜಾಮೀನು ಮಂಜೂರು ಮಾಡಿದೆ.

2008ರಲ್ಲಿ ಯುಪಿಎ ಸರ್ಕಾರದ ವಿಶ್ವಾಸ ಮತ ಯಾಚನೆಯ ಸಮಯದಲ್ಲಿ ಭಾಜಪ ಸಂಸದರಿಗೆ ಯುಪಿಎ ಸರ್ಕಾರ ಬೆಂಬಲಿಸಲು ಲಂಚ ನೀಡಲಾಗಿತ್ತು ಎಂಬ ಹಗರಣದಲ್ಲಿ ಅಮರಸಿಂಗ್ ಪ್ರಮುಖ ಆರೋಪಿ ಆಗಿದ್ದಾರೆ. ಇವರನ್ನು ಸೆಪ್ಟಂಬರ್ 5 ರಂದೇ ಬಂಧಿಸಿ ದೆಹಲಿಯ ತಿಹಾರ ಜೈಲಿಗೆ ರವಾನಿಸಲಾಗಿದೆ. ಅನಾರೋಗ್ಯ ಕಾರಣದಿಂದ ಅಮರಸಿಂಗ್ ಅವರನ್ನು ತಿಹಾರ್ ಜೈಲಿನಿಂದ ಅಖಿಲ ಭಾರತೀಯ ವೈದ್ಯಕೀಯ ವಿಜ್ಞಾನ ಸಂಸ್ಥೆ ಆಸ್ಪತ್ರೆಗೆ ದಾಖಲಿಸಲಾಗಿದೆ. ಮೂತ್ರಪಿಂಡ ಕಸಿಗೆ ಒಳಗಾಗಿರುವ ಅಮರ್ಸಿಂಗ್ ಮಧುಮೇಹ ಮೂತ್ರನಾಳದ ಸೊಂಕು ನಿರ್ಜಲಿಕರಣ ಅಧಿಕ ರಕ್ತದೊತ್ತಡ ಸೇರಿದಂತೆ ವಿವಿಧ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ ಅವರಿಗೆ ಸೋಂಕು ತಾಗುವ ಸಾಧ್ಯತೆ ಇರುವುದರಿಂದ ಜಾಮೀನು ನೀಡಬೇಕೆಂದು ಹಿರಿಯ ವಕೀಲ ರಾಮಜೆಠ್ಮಲಾನಿ ವಾದಿಸಿದ್ದರು.

ವಾದ ಪ್ರತಿವಾದ ಆಲಿಸಿದ ನ್ಯಾಯಾಧೀಶರಾದ ಸಂಗೀತ್ ಡಿಂಗ್ರಾ ಸೆಹಗಾಲ್ ಅವರು ಇದೇ 19 ರವರೆಗೆ ಷರತ್ತು ಬದ್ದ ಮಧ್ಯಾಂತರ ಜಾಮೀನು ನೀಡಿದ್ದಾರೆ. ನ್ಯಾಯಾಲಯದ ಅನುಮತಿ ಇಲ್ಲದೆ ವಿದೇಶಕ್ಕೆ ತೆರಳವಾರದು ವಿಚಾರಣೆಗೆ ಸಹಕರಿಸಬೇಕು. ಸಾಕ್ಷ್ಯ ಮತ್ತು ಸಾಕ್ಷ್ಯ ನಾಶಮಾಡಲು ಪ್ರಯತ್ನ ಮಾಡಬಾರದು. ಎರಡು ಲಕ್ಷ ರೂಪಾಯಿ ವೈಯಕ್ತಿಕ ಬಾಂಡ್ ಭದ್ರತೆಯನ್ನು ನೀಡಬೇಕು ಎಂಬ ಷರತ್ತುಗಳನ್ನು ನ್ಯಾಯಾಧೀಶರು ಅಮರಸಿಂಗ್ ಅವರಿಗೆ ವಿಧಿಸಿದ್ದಾರೆ. ವಕೀಲರು ಈ ಎಲ್ಲ ಷರತ್ತುಗಳನ್ನು ಪಾಲಿಸುವುದಾಗಿ ಹೇಳಿಕೆ ನೀಡಿದ ನಂತರ ನ್ಯಾಯಾಧೀಶರು ಈ ಜಾಮೀನನ್ನು ಮಂಜೂರು ಮಾಡಿದ್ದಾರೆ

 

loading...

LEAVE A REPLY

Please enter your comment!
Please enter your name here