ಜಿಲ್ಲೆಯಲ್ಲಿ 400.65 ಕೋಟಿ ರೂ. ಸಾಲ ವಿತರಣೆ

0
20
loading...

ಹುಬ್ಬಳ್ಳಿ 21: ಜಿಲ್ಲಾ ಸಾಲ ಯೋಜನೆಯಡಿ ಕಳೆದ ಜೂನ್ ತ್ರೈಮಾಸಿಕ ಅಂತ್ಯದವರೆಗೆ ಜಿಲ್ಲೆಯಲ್ಲಿ ವಿವಿಧ ಬ್ಯಾಂಕುಗಳು 430.70 ಕೋಟಿ ರೂ. ಸಾಲ ವಿತರಿಸುವ ಗುರಿ ಅನ್ವಯ 400.65 ಕೋಟಿ ರೂ. ಸಾಲ ವಿತ ರಿಸುವ ಮೂಲಕ ಶೇ. 93 ರಷ್ಟು ಸಾಧನೆಗೈದಿವೆ ಎಂದು ಇಂದಿಲ್ಲಿ ಜರು ಗಿದ ಧಾರವಾಡ ಜಿಲ್ಲಾ ಬ್ಯಾಂಕುಗಳ ಜಿಲ್ಲಾ ಮಟ್ಟದ ಪ್ರಗತಿ ಪರೀಶೀಲನಾ ಸಭೆಯಲ್ಲಿ ಅಗ್ರಣೀಯ ವಿಜಯಾ ಬ್ಯಾಂಕಿನ ಪ್ರಾದೇಶಿಕ ವ್ಯವಸ್ಥಾಪಕ  ಬಿ. ಎ ಟಾಟಾ ತಿಳಿಸಿದರು.

ಈ ಸಾಲ ನೀಡಿಕೆಯಲ್ಲಿ ಕೃಷಿ ಹಾಗೂ ಸಣ್ಣ ಉದ್ದಿಮೆ ಸೇರಿದಂತೆ ಇತರ ಆದ್ಯತಾ ಕ್ಷೇತ್ರಗಳಿಗೆ ಒಟ್ಟು 264.38 ಕೋಟಿ ರೂ. ಸಾಲ ವಿತರಿಸಲಾಗಿದ್ದು ಶೇ. 72 ರಷ್ಟು  ಸಾಧನೆಯಾಗಿದ್ದು , ಆದ್ಯತಾರಹಿತ ಕ್ಷೇತ್ರಗಳಿಗೆ 136.27 ಕೋಟಿ ರೂ. ಸಾಲ ವಿಸ್ತರಿಸುವ ಮೂಲಕ  ಶೇ.100 ಕ್ಕೆ ಹೆಚ್ಚು ಸಾಧನೆ ಮಾಡಲಾಗಿದೆ ಎಂದು ವಿವರಿಸಿದ ಅವರು, ಕೃಷಿ ಹಾಗೂ ಸಣ್ಣ ಉದ್ದಿಮೆ ಕ್ಷೇತ್ರಕ್ಕೆ ಹೆಚ್ಚಿನ ಆದ್ಯತೆ ನಡುವದರೊಂದಿಗೆ ಸುವರ್ಣಭೂಮಿ ಯೋಜನೆ ಮತ್ತು ಶಾಖಾ ರಹಿತ ಹಳ್ಳಿಗಳಲ್ಲಿ ಬ್ಯಾಂಕ್ ಸೌಲಭ್ಯ ವಿಸ್ತರಿಸುವ ಕುರಿತು  ಹೆಚ್ಚಿನ ಗಮನ ಹರಿಸಲು ಕರೆನೀಡಿದರು.

ಪ್ರಗತಿ ಪರೀಶೀಲನಾ ಸಭೆಯಲ್ಲಿ ಪಾಲ್ಗೊಂಡ ಭಾರತೀಯ ರಿಸರ್ವ ಬ್ಯಾಂಕ್ ಪ್ರತಿನಿಧಿ  ಅರ್. ರಾಮ ಚಂದ್ರನ್ ಮಾತನಾಡಿ ,ಜಿಲ್ಲೆಯಲ್ಲಿಯ 77 ಬ್ಯಾಂಕ್ ಶಾಖಾ ರಹಿತ ಗ್ರಾಮಗಳ ಪೈಕಿ 26 ಗ್ರಾಮಗಳಲ್ಲಿ ಬ್ಯಾಂಕ್  ಸೌಲಭ್ಯ ಕಲ್ಪಿಸಲಾಗಿದೆ.  ಆದರೆ ಇನ್ನೂ 51 ಗ್ರಾಮಗಳಲ್ಲಿ ಈ ಸೌಲಭ್ಯವಿರುವದಿಲ್ಲ.  ಸಂಬಂಧಪಟ್ಟ ಬ್ಯಾಂಕುಗಳು ಬರುವ ಮಾರ್ಚ್ ಅಂತ್ಯದೊಳಗಾಗಿ ತಮ್ಮ ವ್ಯಾಪ್ತಿಯಲ್ಲಿ ಬರುವ ಈ ಹಳ್ಳಿಗಳಲ್ಲಿ ಬ್ಯಾಂಕ್ ವ್ಯವಹಾರ ಪ್ರತಿನಿಧಿಗಳನ್ನು ಒದಗಿಸುವ ಮೂಲಕ ಅಲ್ಲಿ ಬ್ಯಾಂಕ್ ಸೌಲಭ್ಯ ಒದಗಿಸುವಂತೆ ಸೂಚಿಸಿದರು.  ಬ್ಯಾಂಕ್ ಸೌಲಭ್ಯದ ಮಾಹಿತಿ ಹಾಗೂ ಸಲಹೆ ಡುವದಕ್ಕಾಗಿ ಅಗ್ರಣೀಯ ವಿಜಯಾ ಬ್ಯಾಂಕ್ ಇದೇ ಸೆಪ್ಟೆಂಬರ್ 30 ರಂದು ಧಾರವಾಡ ಜಿಲ್ಲಾ ಕೇಂದ್ರದಲ್ಲಿ ಮಾಹಿತಿ ಹಾಗೂ ಸಲಹಾ ಕೇಂದ್ರ ( ಇನ್ಫ್ರ್ಮೇಷನ್ ಆಂಡ್ ಕೌನ್ಸೆಲಿಂಗ್  ಸೆಂಟರ್ ) ಪ್ರಾರಂಭಿಸ ಲಿದೆಯೆಂದು  ಅವರು ಪ್ರಕಟಿಸಿದರು.

ಕೇಂದ್ರ ಸರ್ಕಾರದ ಹಣಕಾಸು ಇಲಾಖೆ  ನಿರ್ದೇಶನದಂತೆ  ಜಿಲ್ಲೆಯಲ್ಲಿ ಕೃಷಿ ಸಾಲ ತಲುಪದ  ಹಾಗೂ ಸಾಲ ಬಯಸುವ ಎಲ್ಲಾ ಅರ್ಹ ರೈತರಿಗೆ ಕ್ಷಿಪ್ರ ಕ್ರಿಯಾ ಯೋಜನೆ ಳಿಳಿ (ರ್ಯಾಪಿಡ್ ಆ್ಯಕ್ಷನ್ ಪ್ಲಾನ್ ) ಯನ್ನು  ಬ್ಯಾಂಕ್ ಸಲಹಾ ಸಮಿತಿ ಸಭೆಯಲ್ಲಿ ತಯಾರಿಸಿ ಸೆಪ್ಟೆಂಬರ್ 30 ರ ಅಂತ್ಯದೊಳಗಾಗಿ ಎಲ್ಲ ಅರ್ಹ ರೈತರಿಗೆ ಸಾಲ ವಿತರಿಸಲು ಬ್ಯಾಂಕಗಳಿಗೆ ತಿಳಿಸಲಾಗಿದೆಯೆಂದು ನಬಾರ್ಡ್ ಎ.ಜಿ.ಎಂ  ವೈ .ಎನ್. ಮಹದೇವಯ್ಯ ಸಭೆಗೆ ತಿಳಿಸಿ,

ಸಭೆಯಲ್ಲಿ ವಿಶೇಷ ಆಹ್ವಾನಿತರಾಗಿ ಮಾತನಾಡಿದ ತಹಶೀಲ್ದಾರ್ ಶ್ರೀ ಎಸ್. ಎಸ್. ಬಿರಾದಾರ ಅವರು  ಶಿಭೂಮಿ ಬ್ಯಾಂಕ್ ಸಂಯೋಜನೆ ಳಿಳಿ  ( ಭೂಮಿ ಬ್ಯಾಂಕ್ ಇಂಟಿಗ್ರೆಟ್ ) ಕಾರ್ಯಕ್ರಮ ಈಗಾಗಲೇ ಜಿಲ್ಲೆಯಲ್ಲಿ ಅನುಷ್ಟಾನಗೊಡಿದೆ.  ಈ ಯೋಜನೆ ಯಂತೆ ರೈತರು ಸಾಲಕ್ಕಾಗಿ ಭೂಮಿ  ಅಡವು ಇಡುವದನ್ನು ಅಥವಾ ಸಾಲ ತೀರುವಳಿ ಮಾಡಿದಾಗ ಅಡವು ವಿಮೋಚನೆ ಮಾಡುವ ದಾಖಲೆ ಪ್ರಕ್ರಿಯೆಗಳನ್ನು ಅಂತರ್ಜಾಲದ ಮೂಲಕ ಬ್ಯಾಂಕುಗಳೇ ನಿರ್ವಹಿಸ ಬೇಕಾಗಿದ್ದು , ಬರುವ ಅಕ್ಟೌಬರ್ 30 ರ ಹೊತ್ತಿಗೆ  ಬ್ಯಾಂಕುಗಳಲ್ಲಿ ಈ ಕಾರ್ಯಾನುಷ್ಠಾನ ಸಿದ್ಧವಾಗಬೇಕೆಂದು  ಅವರು ವಿವರಿಸಿದರು. ಅದಕ್ಕಾಗಿ ಬ್ಯಾಂಕುಗಳ ಹೊಂದಬೇಕಾದ ತಂತ್ರಜ್ಞಾನ ಹಾಗೂ ಪರಿಕರಗಳ ಬಗ್ಗೆ ತಿಳಿಸಿದರು.  ಇದರಿಂದ ರೈತರು ಜಮೀನು ಅಡವು ಅಥವಾ  ಅದರ ವಿಮೋಚನೆಗಾಗಿ ಅಲೆದಾಡುವದು ತಪ್ಪುವದಲ್ಲದೇ ಸಮಯದ ಉಳಿತಾಯ ಹಾಗೂ ತ್ವರಿತ ಕಾರ್ಯ ನಿರ್ವಹಣೆ ಸಾಧ್ಯವಾಗುವದೆಂದರು.

ಜಿಲ್ಲಾ ಪಂಚಾಯತ್  ಡಿ. ಅರ್. ಡಿ. ಎ ಯೋಜನಾ ನಿರ್ದೇಶಕ  ಎಸ್. ವಿ. ದಿಂಡಲಕೊಪ್ಪ  ಸಭೆಯ ಅಧ್ಯಕ್ಷತೆ ವಹಿಸಿದ್ದರು.  ಜಿಲ್ಲಾ ಅಗ್ರಣೀಯ ಬ್ಯಾಂಕ್ ವ್ಯವಸ್ಥಾಪಕ ಶ್ರೀ ಜಿ. ಎಸ್. ಬಸವರಾಜಪ್ಪ ಸಾಲ ಯೋಜನೆಯ ಪ್ರಗತಿ ವಿವರಗಳನ್ನು  ಸಭೆಗೆ ಮಂಡಿಸಿದರು. ಬ್ಯಾಂಕುಗಳ ಹಿರಿಯ ಅಧಿಕಾರಿಗಳು  ಹಾಗೂ ವಿವಿಧ ಇಲಾಖಾ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿ ಚರ್ಚೆಯಲ್ಲಿ ಪಾಲ್ಗೊಂ ಡಿದ್ದರು.

loading...

LEAVE A REPLY

Please enter your comment!
Please enter your name here