ಡಾ. ಕಂಬಾರರಿಗೆ ಕೋರೆ ಅಭಿನಂದನೆ

0
18
loading...

 

ಬೆಳಗಾವಿ, ಸೆ.23: ನಾಡಿನ ಧೀಮಂತ ಕವಿ, ನಾಟಕಕಾರ, ವಿಮರ್ಶಕ ಡಾ.ಚಂದ್ರಶೇಖರ ಕಂಬಾರರು ಪ್ರತಿಷ್ಠಿತ ಹಾಗೂ ಗೌರವಾನ್ವಿತ ಜ್ಞಾನಪೀಠ ಪ್ರಶಸ್ತಿಗೆ ಆಯ್ಕೆ ಆಗಿರುವುದು ಕನ್ನಡಿಗರಿಗೆ ಹೆಮ್ಮೆಯನ್ನುಂಟು ಮಾಡಿದೆ ಎಂದು ಸಂಸತ್ ಸದಸ್ಯ ಡಾ.ಪ್ರಭಾಕರ ಕೋರೆ ಸಂತಸ ವ್ಯಕ್ತಪಡಿಸಿದ್ದಾರೆ.

ಕನ್ನಡ ಸಾಹಿತ್ಯ ವಲಯಕ್ಕೆ ಎಂಟನೆಯ ಬಾರಿಗೆ ಜ್ಞಾನಪೀಠ ಪ್ರಶಸ್ತಿ ಲಭಿಸುತ್ತಿರುವುದು ಅತ್ಯಂತ ಹರ್ಷ ತಂದಿದೆ. ಜ್ಞಾನಪೀಠ ಪ್ರಶಸ್ತಿಯನ್ನು ಪಡೆಯುವ ಅರ್ಹತೆ, ಯೋಗ್ಯತೆ ಡಾ.ಚಂದ್ರಶೇಖರ ಕಂಬಾರರದಾಗಿತ್ತು. ಅದು ಎಂದೋ ಬರಬೇಕಾಗಿತ್ತು. ಡಾ.ಕಂಬಾರರು ಬೆಳಗಾವಿ ಜಿಲ್ಲೆಯ ಘೋಡಗೇರಿಯಲ್ಲಿ ಜನಿಸಿ ಬೆಳಗಾವಿಯ ನಾಗನೂರು ಸ್ವಾಮೀಜಿ ಕೃಪಾಛತ್ರದಲ್ಲಿದ್ದು (1956-60) ಲಿಂಗರಾಜ ಕಾಲೇಜಿನಲ್ಲಿ ಅಧ್ಯಯನ ಮಾಡಿ ಅಲ್ಲಿಯೇ ಪ್ರಾಧ್ಯಾಪಕರಾಗಿಯೂ (1962-63) ಸೇವೆ ಸಲ್ಲಿಸಿದ ಕಂಬಾರರ ಬಗ್ಗೆ ವಿಶೇಷ ಹೆಮ್ಮೆಯಾಗಿದೆ. ಅವರನ್ನು ಡಾ.ಪ್ರಭಾಕರ ಕೋರೆ ಹಾರ್ದಿಕವಾಗಿ ಅಭಿನಂದಿಸಿದ್ದಾರೆ.

 

loading...

LEAVE A REPLY

Please enter your comment!
Please enter your name here