ದೇವದಾಸಿಗಳ ಸಂಪರ್ಕ ಭಾಷೆ ಹಿಂದಿ

0
23
loading...

ಜಮಖಂಡಿ 15- ಹಿಂದಿ ಭಾಷೆಯನ್ನು ಆದಿ ಕಾಲದಲ್ಲಿ ಕಬೀರ, ಆಧುನಿಕ ಕಾಲದಲ್ಲಿ ಪ್ರೇಮಚಂದ ಸಮೃದ್ದಿಗೊಳಿಸಿದ್ದಾರೆ. ಪೂರ್ವದಂದ ಪಶ್ಚಿಮ ಹಾಗೂ ಉತ್ತರದಿಂದ ದಕ್ಷಿಣವರೆಗಿನ ದೇಶವಾಸಿಗಳ ಸಂಪರ್ಕ ಭಾಷೆಗಳ ಸಂಪರ್ಕ ಭಾಷೆ ಹಿಂದಿ ಎಂದು ಜವಾಹರ ನವೋದಯ ವಿಶ್ವವಿದ್ಯಾಲಯದ ಶಿಕ್ಷಕ ಗೋವಿಂದರಾಜು ಕುಲಕರ್ಣಿ ಹೇಳಿದರು.

ಬಿಎಲ್ಡಿ ಶಿಕ್ಷಣ ಸಂಸ್ಥೆಯ ವಾಣುಜ್ಯ, ಬಿ.ಎಚ್.ಎಸ್. ಕಲೆ ಮತ್ತು ಟಿಜಿಪಿ ವಿಜ್ಞಾನ ಕಾಲೇಜಿನ ಹಿಂದಿ ವಿಭಾಗ ಬುಧವಾರ ಏರ್ಪಡಿಸಿದ್ದ ಹಿಂದಿ ದಿನಾಚರಣೆ ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಅವರು ಮಾತ ನಾಡಿದರು.

ಭಾಷೆಯ ಬಗ್ಗೆ ಸ್ವಾಭಿಮಾನ ಇರಬೇಕು. ಆದರೆ ದುರಭಿಮಾನ ಇರಬಾರದು. ಹಿಂದಿ ಭಾಷೆಯನ್ನು ಅಂತರ್ ರಾಷ್ಟ್ತ್ರೀಯ ಭಾಷೆಯನ್ನಾಗಿ  ಗುರುತಿಸುವ ಪ್ರಕ್ರಿಯೆ ಜಾಗತಿಕ ಮಟ್ಟದಲ್ಲಿ ಆರಂಭವಾಗಿದೆ ಎಂದರು.

ಬಿಎಲ್ಡಿ ಶಿಕ್ಷಣ ಸಂಸ್ಥೆಯ ಆಡಳಿತಾಧಿಕಾರಿ ಪ್ರೊ. ಎಸ್.ಎಚ್. ಲಗಳಿ ಮುಖ್ಯ ಅತಿಥಿ ಯಾಗಿ ಮಾತನಾಡಿ, ಹಿಂದಿಯೇತರ  ಮಾತೃ ಭಾಷೆಯುಳ್ಳ ವಿದ್ಯಾರ್ಥಿಗಳಿಗಾಗಿ ಹಿಂದಿ ಭಾಷೆ ಕಲಿಸುವ ಅಲ್ಪಾವಧಿ ಕೋರ್ಸಗಳನ್ನು ತೆರೆಯುವದು ಅವಶ್ಯಕ ಎಂದರು.

ಪ್ರಾಚಾರ್ಯ ಎಸ್.ಎಸ್. ಸುವರ್ಣಖಂಡಿ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಬಿಹಾರ ರಾಜ್ಯದ ಮುಗದ ವಿಶ್ವವಿದ್ಯಾಲಯದ ಹಿಂದಿ ವಿಷಯದಲ್ಲಿ ಪಿಎಚ್ಡಿ ಪದವಿ ಪಡೆದಿರುವ ಡಾ. ಮಲ್ಲಿಕಾರ್ಜುನ ಮಠ ಅವರನ್ನು ಇದೇ ಸಂದರ್ಭದಲ್ಲಿ ಸನ್ಮಾನಿಸಲಾಯಿತು.

ಡಾ. ಎಸ್.ಜಿ. ಹಿರೇಮಠ, ಪ್ರೊ. ಎಸ್.ಬಿ. ಕಮತಿ ವೇದಿಕೆಯಲ್ಲಿದ್ದರು. ಜ್ಯೌತಿ ದಾಸರೆಡ್ಡಿ ಪ್ರಾರ್ಥನೆ ಗೀತೆ ಹಾಡಿದರು. ಹಿಂದಿ ವಿಭಾಗದ ಮುಖ್ಯಸ್ಥ ಒರೊ. ಎ.ವಿ. ಸೂರ್ಯವಂಶಿ ಸ್ವಾಗತಿಸಿದರು. ಕುಮಾರಿ ಕೋಠಾರಿ, ಶ್ರೀಕಾಂತ ಹಾದಿಮನಿ ನಿರೂಪಿಸಿದರು. ವಿನಾಯಕ ಚಿನಗುಂಡಿ ವಂದಿಸಿದರು.

 

 

loading...

LEAVE A REPLY

Please enter your comment!
Please enter your name here