ಧೋನಿ ಆರಕ್ಕೆ : ದ್ರಾವಿಡ್ 118ನೇ ಸ್ಥಾನದಲ್ಲಿ ನಿವೃತ್ತಿ

0
32
loading...

ದುಬೈ: ಅಂತರಾಷ್ಟ್ರೀಂುು ಕ್ರಿಕೆಟ್ ಮಂಡಳಿ (ಐಸಿಸಿ) ಭಾನುವಾರ ನೂತನವಾಗಿ ಬಿಡುಗಡೆ ಮಾಡಿರುವ ಏಕದಿನ ಬ್ಯಾಟಿಂಗ್ ರ್ಯಾಂಕಿಂಗ್ ಪಟ್ಟಿಂುುಲ್ಲಿ ಭಾರತದ ನಾಂುುಕ ಮಹೇಂದ್ರ ಸಿಂಗ್ ಧೋನಿ ಆರನೇ ಸ್ಥಾನಕ್ಕೆ ನೆಗೆತ ಕಂಡಿದ್ದಾರೆ. ಅದೇ ಹೊತ್ತಿಗೆ ಇದೀಗಷ್ಟೇ ಅಂತರಾಷ್ಟ್ರೀಯ ಏಕದಿನ ವೃತ್ತಿ ಜೀವನಕ್ಕೆ ನಿವೃತ್ತಿ ಘೋಷಿಸಿರುವ ರಾಹುಲ್ ದ್ರಾವಿಡ್ 118ನೇ ಸ್ಥಾನದಲ್ಲಿ ವಿದಾಂುು ಹಾಡಿದ್ದಾರೆ.

ಇಂಗ್ಲೆಂಡ್ ಸರಣಿಿಂುುಲ್ಲಿ 78ರ ಸರಾಸರಿಂುುಲ್ಲಿ ಅತಿ ಹೆಚ್ಚು 236 ರನ್ ಬಾರಿಸಿರುವ ನಾಂುುಕ ಧೊನಿ ಮೂರು ಸ್ಥಾನಗಳ ಜಿಗಿತ ಕಂಡು ಆರಕ್ಕೆ ತಲುಪಿದ್ದಾರೆ. ಕೊನೆಂುು ಮೂರು ಪಂದ್ಯಗಳಲ್ಲಿ ಅರ್ಧಶತಕದ ಸಾಧನೆಂುುನ್ನು ಧೋನಿ ಮಾಡಿದ್ದರು.

ಮತ್ತೊಂದೆಡೆ ಮೂರು ಸ್ಥಾನಗಳ ನೆಗೆತ ಕಂಡಿರುವ ದ್ರಾವಿಡ್ 118ಕ್ಕೆ ತಟ್ಲುಪಿದ್ದಾರೆ. ಐದು ಪಂದ್ಯಗಳ ಏಕದಿನ ಸರಣಿಿಂುುಲ್ಲಿ ದ್ರಾವಿಡ್ ಒಟ್ಟು 128 ರನ್ ಬಾರಿಸಿದ್ದರು. ಇದಕ್ಕೂ ಮೊದಲು 2009ರ ಚಾಂಪಿಂುುನ್ಸ್ ಲೀಗ್ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಕೊನೆಂುು ಪಂದ್ಯ ಪಂದ್ಯವನ್ನಾಡಿದ್ದ ದ್ರಾವಿಡ್ ಆಮೇಲೆ ತಂಡದಿಂದ ಹೊರಗಟ್ಟಲ್ಪಟ್ಟಿದ್ದರು. ಇದರಿಂದಾಗಿ ರ್ಯಾಂಕಿಂಗ್ನಲ್ಲಿ ಬಾರಿ ಪ್ರಮಾಣದ ಕುಸಿತಕ್ಕೆ ಕಾರಣವಾಗಿತ್ತು.

ಹಾಗೆಂುೆು ಆಕರ್ಷಕ ಶತಕ ಸಾಧನೆ ಮಾಡಿದರ ಹೊರತಾಗಿಂುೂ ವಿರಾಟ್ ಕೊಹ್ಲಿ ಮೂರು ಸ್ಥಾನಗಳ ಕುಸಿತ ಅನುಭವಿಸಿ 9ಕ್ಕೆ ತಲುಪಿದ್ದಾರೆ. ಈ ದೆಹಲಿ ದಾಂಡಿಗನ ಕೈಯಿಂದ ಸರಣಿಿಂುುಲ್ಲಿ 194 ರನ್ನುಗಳನ್ನಷ್ಟೇ ಹರಿದು ಬಂದಿದ್ದವು. ಭಾರತದ ಇತರ ಆಟಗಾರರ ಪೈಕಿ ಇಂಗ್ಲೆಂಡ್ ಸರಣಿಿಂುುಲ್ಲಿ 198 ರನ್ ಪೇರಿಸಿದ್ದ ಸುರೇಶ್ ರೈನಾ ಐದು ಸ್ಥಾನಗಳ ನೆಗೆತ ಕಂಡು 30ಕ್ಕೆ ತಲುಪಿದ್ದಾರೆ.

ಬೌಲಿಂಗ್ ವಿಭಾಗದಲ್ಲಿ 34 ಸ್ಥಾನಗಳ ಭರ್ಜರಿ ನೆಗೆತ ಕಂಡಿರುವ ಆಪ್ ಸ್ಪಿನ್ನರ್ ರವಿಚಂದ್ರನ್ ಆಶ್ವಿನ್ 41ಕ್ಕೆ ತಲುಪಿದ್ದಾರೆ. ಆಂಗ್ಲರ ನಾಡಿನಲ್ಲಿ ಆರು ವಿಕೆಟ್ ಕಬಳಿಸುವಲ್ಲಿ ಆಶ್ವಿನ್ ಂುುಶಸ್ವಿಂುುಾಗಿದ್ದರು. ಬಲಗೈ ಮಧ್ಯಮ ಗತಿಂುು ವೇಗದ ಬೌಲರ್ ಪ್ರವೀಣ್ ಕುಮಾರ್ ಸಹ ನಾಲ್ಕು ಸ್ಥಾನಗಳ ಮುನ್ನಡೆ ಪಡೆದುಕೊಂಡು 21ಕ್ಕೆ ತಲುಪಿದ್ದಾರೆ.

loading...

LEAVE A REPLY

Please enter your comment!
Please enter your name here