ನಾಳೆಯಿಂದ ಮಿಲಟರಿ ಶಾಲಾ ಪೆಂಟ್ಯಾಂಗುಲರ್ ಸಮ್ಮೇಳನ

0
31
loading...

ಬೆಳಗಾವಿ: ಸೆಪ್ಟೆಂಬರ್:24: ರಾಷ್ಟ್ತ್ರೀಯ ಮಿಲಟರಿ ಶಾಲೆ ಬೆಳಗಾವಿ ಇವರ ವತಿಯಿಂದ ವಿವಿಧ ಕ್ರೀಡೆ ಹಾಗೂ ಪಠ್ಯೇತರ ಚಟುವಟಿಕೆಗಳಿಗೆ ಪ್ರೌತ್ಸಾಹ ನೀಡುವ 17ನೇ ಅಂತರ್ ಮಿಲಟರಿ ಶಾಲಾ ಪೆಂಟ್ಯಾಂಗುಲರ್ ಸಮ್ಮೇಳನವನ್ನು ಇದೇ ಸೆಪ್ಟೆಂಬರ್ 26 ರಿಂದ 29 ರವರೆಗೆ ನಗರದ ಮಿಲಿಟರಿ ಶಾಲಾ ಕ್ರೀಡಾಂಗಣದಲ್ಲಿ ಏರ್ಪಡಿಸಲಾಗಿದೆ ಎಂದು ಶಾಲೆಯ ಪ್ರಾಂಶುಪಾಲರಾದ ದಾಸ್ ಅವರು ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿ ನಡೆಸಿದ ಅವರು ಪ್ರತಿ ವರ್ಷ ವಿವಿಧ ಕ್ರೀಡಾಕೂಟಗಳನ್ನು ಹಾಗೂ ಪಠ್ಯೇತರ ಚಟುವಟಿಕೆಗಳನ್ನು ಪ್ರೌತ್ಸಾಹಿಸುವ ಈ ಪೆಂಟ್ಯಾಂಗುಲರ್ ಸಮ್ಮೇಳನದಲ್ಲಿ ರಾಷ್ಟ್ತ್ರದ 5 ಮಿಲಿಟರಿ ಶಾಲೆಯ 150 ವಿದ್ಯಾರ್ಥಿಗಳು ಭಾಗವಹಿಸಲಿದ್ದಾರೆ. ಹಿಮಾಚಲ್ ಪ್ರದೇಶದ ಚೈಲ್, ರಾಜಸ್ಥಾನದ ಅಜಮೇರ್, ಧೋಲ್ಪುರ,  ಬೆಂಗಳೂರ ಹಾಗೂ ಬೆಳಗಾವಿ ರಾಷ್ಟ್ತ್ರೀಯ ಮಿಲಟರಿ ಶಾಲೆಯ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಲಿದ್ದಾರೆ. ವಿದ್ಯಾರ್ಥಿಗಳಲ್ಲಿ ಪರಸ್ಪರ ಬಾಂಧವ್ಯ ವೃದ್ದಿಸುವುದು, ವಿಚಾರ ವಿನಿಮಯ ಮಾಡಿಕೊಳ್ಳಲು ಹಾಗೂ ಆರೋಗ್ಯಕರ ಸ್ಪರ್ಧೆಯನ್ನು ಪ್ರೌತ್ಸಾಹಿಸುವುದು, ದೈಹಿಕ ಹಾಗೂ ಭೌದ್ದಿಕ ಸಾಮರ್ಥ್ಯ ಸೇರಿದಂತೆ ಸರ್ವಾಂಗೀಣ ವ್ಯಕ್ತಿತ್ವ ವಿಕಾಸಗೊಳಿಸುವುದು ಈ ಸಮ್ಮೇಳನದ ಮುಖ್ಯ ಉದ್ದೇಶವಾಗಿದೆ ಎಂದು ಅವರು ಹೇಳಿದರು.

ಈ ಪೆಂಟ್ಯಾಂಗುಲರ್ ಸಮ್ಮೇಳನದ ಅಂಗವಾಗಿ ಫುಟಬಾಲ್, ಬಾಸ್ಕೇಟ್ಬಾಲ್, ಬಾಕ್ಸಿಂಗ್, ಇಂಗ್ಲೀಷ ಚರ್ಚಾಕೂಟ, ಕ್ವಿಜ್ ಸ್ಪರ್ಧೆ ಹಾಗೂ ಸ್ಥಳದಲ್ಲಿಯೇ ಚಿತ್ರ ಬಿಡಿಸುವ ಸ್ಪರ್ಧೆಗಳನ್ನು ಏರ್ಪಡಿಸಲಾಗುತ್ತಿದೆ. ಸೋಮವಾರ ಸೆಪ್ಟೆಂಬರ್ 26 ರಂದು ಬೆಳಿಗ್ಗೆ 9 ಗಂಟೆಗೆ ಮರಾಠಾ ಲಘು ಪದಾತಿದಳ ಕೇಂದ್ರದ ಡೆಪ್ಯುಟಿ ಕಮಾಂಡಂಟ್ ಕರ್ನಲ್ ಭೂಪ್ಸಿಂಗ್ ಅವರು ರಾಷ್ಟ್ತ್ರೀಯ ಮಿಲಟಿರಿ ಶಾಲೆ ಬೆಳಗಾವಿ ಕ್ರೀಡಾಂಗಣದಲ್ಲಿ ಈ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಈ ಸಂದರ್ಭದಲ್ಲಿ ಇತರ ಗಣ್ಯರು ಉಪಸ್ಥಿತರಿರುವರು.

ಸೆಪ್ಟೆಂಬರ್ 29 ರಂದು ಸಂಜೆ 4 ಗಂಟೆಗೆ ಈ ಸಮ್ಮೇಳನದ ಸಮಾರೋಪ ಸಮಾರಂಭ ರಾಷ್ಟ್ತ್ರೀಯ ಮಿಲಟರಿ ಶಾಲೆಯ ಆಡಿಟೋರಿಯಮ್ದಲ್ಲಿ ನಡೆಯಲಿದ್ದು, ಹೆಚ್ಕ್ಯೂ ಜೆ.ಎಲ್. ವಿಂಗ್ ಕಮಾಂಡರ್, ಮೇಜರ್ ಜನರಲ್ ವಿಎಸ್ಎಸ್ ಗೌಡರ್  ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.

ಈ ಸಂದರ್ಭದಲ್ಲಿ ರಕ್ಷಣಾ ಸಚಿವಾಲಯದ ಹಾಗೂ ನಾಗರಿಕ ಸೇವೆಯಲ್ಲಿರುವ ಪ್ರಮುಖ ಅಧಿಕಾರಿಗಳು, ಗಣ್ಯರು ಉಪಸ್ಥಿತರಿರುವರೆಂದು ಅವರು ತಿಳಿಸಿದರು. ಇಂದು ನಡೆದ ಪತ್ರಿಕಾಗೋಷ್ಠಿಯಲ್ಲಿ ರಾಷ್ಟ್ತ್ರೀಯ ಮಿಲಟರಿ ಶಾಲೆಯ ಕರ್ನಲ್ ಜಿ.ಕನ್ನನ್ ಅವರು ಶಾಲೆಯ ಐತಿಹಾಸಿಕ ಹಿನ್ನಲೆ ಹಾಗೂ ಉದ್ದೇಶಗಳ ಬಗ್ಗೆ ವಿವರಿಸಿದರು.

loading...

LEAVE A REPLY

Please enter your comment!
Please enter your name here