ನಾಳೆ ಅಂತರಾಷ್ಟ್ತ್ರೀಯ ಶಾಂತಿ ದಿನಾಚರಣೆ

0
9
loading...

ಬೆಳಗಾವಿ 18- ಭಾವುರಾವ ಕಾಕತಕರ ಕಾಲೇಜು ಕ್ಲಬ್ ರಸ್ತೆ, ಬೆಳಗಾವಿಯಲ್ಲಿ ದಿ. 20 ರಂದು ಬೆಳಿಗ್ಗೆ 9 ಗಂಟೆಗೆ ಅಂತರಾಷ್ಟ್ತ್ರೀಯ ಶಾಂತಿ ದಿನಾಚರಣೆಯನ್ನು ಆಚರಿಸಲಾಗುವದು.

ಕಾರ್ಯಕ್ರಮದಲ್ಲಿ ಶ್ರೀ ತಪೋರತ್ನ ಶಿಸಿದ್ಧ ಸೋಮೇಶ್ವರ ಶಿವಾಚಾರ್ಯ ಮಹಾಸ್ವಾಮಿಗಳು ಸುಕ್ಷೇತ್ರ ಪಂಚಗ್ರಾಮ ಮುಕ್ತಿಮಠ ಬೆಳಗಾವಿ ಇವರು ದಿವ್ಯ ಸಾನಿಧ್ಯ ವಹಿಸುವರು. ಉದ್ಘಾಟಕರಾಗಿ ಮಾನ್ಯ  ನ್ಯಾಯಮೂರ್ತಿಗಳಾದ ರವಿ ಎಂ. ನಾಯ್ಕ ಪ್ರಧಾನ ಹಿರಿಯ ನ್ಯಾಯಾಧೀಶರು, ಬೆಳಗಾವಿ, ಮುಖ್ಯ ಅತಿಥಿಗಳಾಗಿ ಮಾನ್ಯ ನ್ಯಾಯಮೂರ್ತಿ ವಿಪುಲಾ ಎಮ್.ಬಿ. ಪೂಜಾರಿ ನಾಲ್ಕನೆ ತ್ವರಿತಗತಿ ನ್ಯಾಯಾಲಯ ಬೆಳಗಾವಿ ಹಾಗೂ ಗುರುನಾಥ ಬಿ. ಭೋರಿ, ರಾಜ್ಯಾಧ್ಯಕ್ಷರು ಕರ್ನಾಟಕ ರಾಜ್ಯ ಮಾನವ ಹಕ್ಕುಗಳ ಹಿತರಕ್ಷಣಾ ಮಂಡಳಿ ಬೆಂಗಳೂರು ಇವರು ಭಾಗವಹಿಸುವರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಭಾವುರಾವ ಕಾಕತಕರ ಕಾಲೇಜಿನ ಪ್ರಾಚಾರ್ಯರಾದ ಎಮ್.ಎಮ್. ಜಾಧವ ವಹಿಸುವರು. ಅತಿಥಿಗಳಾಗಿ ಸುನಂದಾ ಅ. ಪೋಟೆ, ಸಹಾಯಕ ನಿರ್ದೇಶಕಿ, ವಿಭಾಗೀಯ ನಿರ್ದೇಶಕಿ, ವಿಭಾಗೀಯ ಉದ್ಯೌಗ ವಿನಿಮಯ ಕಚೇರಿ, ಬೆಳಗಾವಿ, ಡಾ. ಆಶ್ವಿನಿ ಎಮ್. ಕೆ.ಎಸ್.ಪಿ.ಎಸ್. ಪೋಲೀಸ ಉಪಾಧೀಕ್ಷಕರು, ಗ್ರಾಮೀಣ ುಪ ವಿಭಾಗ, ಬೆಳಗಾವಿ ಪ್ರೌಫೆಸರ್ ಎಮ್.ಡಿ. ನಾಗಣ್ಣವರ, ಪ್ರಾಧ್ಯಾಪಕರು, ರಾಜ್ಯ ಶಾಸ್ತ್ತ್ರ ವಿಭಾಗ, ಭಾವುರಾವ ಕಾಕತಕರ ಕಾಲೇಜ, ಬೆಳಗಾವಿ ಅಮೀತ ಅ. ಕುಂದರಗಿ, ಜಿಲ್ಲಾ ಅಧ್ಯಕ್ಷರು, ಅನ್ನಪೂರ್ಣಾ ಅ. ನಿರ್ವಾಣಿ, ಜಿಲ್ಲಾ ಮಹಿಳಾ ಅಧ್ಯಕ್ಷರು, ಕರ್ನಾಟಕ ರಾಜ್ಯ, ಮಾನವ ಹಿತರಕ್ಷಣಾ ಮಂಡಳಿ, ಜಿಲ್ಲಾ ಘಟಕ, ಬೆಳಗಾವಿ ಇವರು ಆಗಮಿಸುವರು.

loading...

LEAVE A REPLY

Please enter your comment!
Please enter your name here