ನಿಖಿತಾ ಮೇಲಿನ ನಿಷೇದ ತೆರವು

0
20
loading...

ಬೆಂಗಳೂರು, ಸೆ. 15: ನಟ ದರ್ಶನ್ ಹಗರಣದಲ್ಲಿ ನಟಿ ನಿಖಿತಾ ಹೆಸರನ್ನು ಅನಗತ್ಯವಾಗಿ ಎಳೆದು ಆಕೆಗೆ ಕನ್ನಡ ಚಿತ್ರಗಳಿಂದ ಮೂರು ವರ್ಷ ಕಾಲ ಬಹಿಷ್ಕಾರ ಹಾಕಲಾಗಿತ್ತು. ಅದು ಈಗ ತಾರ್ಕಿತ ಅಂತ್ಯವನ್ನು ಕಂಡಿದೆ.

ಕನ್ನಡ ಚಿತ್ರರಂಗದಲ್ಲಿ ದೊಡ್ಡಣ್ಣ ಫ್ಯಾಮಿಲಿ ಎಂದು ಗುರುತಿಸಿಕೊಂಡಿರುವ ಡಾ. ರಾಜ್ಕುಮಾರ್ ವರ್ಗದವರು ಅದರಲ್ಲಿಯೂ ಮುಖ್ಯವಾಗಿ ಪಾರ್ವತಮ್ಮ ರಾಜಕುಮಾರ್ ಅವರು ನಿಖಿತಾಗೆ ಬಹಿಷ್ಕಾರ ಹಾಕಿದ ಕ್ರಮವನ್ನು ಖಂಡಿಸಿ ಈ ನಿರ್ಧಾರ ಸರಿಯಲ್ಲ ಇದನ್ನು ಮರಳಿ ಪಡೆಯಬೇಕು ಎಂದು ಎಚ್ಚರಿಕೆ ನೀಡಿದ ನಂತರ ಅದನ್ನು ಗಂಭೀರವಾಗಿ ಪರಿಗಣಿಸಿದ ನಿರ್ಮಾಪಕರ ಸಂಘ ಇಂದು ವಿಶೇಷ ಸಭೆ ನಡೆಸಿ ನಾವು ವಿನಿತಾ ಮೇಲೆ ಹೇರಿದ್ದ ನಿರ್ಧಾರವನ್ನು ಬೇಷರತ್ತಾಗಿ ಹಿಂದೆಪಡೆದಿದ್ದೇವೆ ಎಂದು ಹೇಳಿಕೆ ನೀಡಿದ್ದಾರೆ. ಸಂಘದ ಅಧ್ಯಕ್ಷ ಮುನಿರತ್ನಂ ನಾಯ್ಡು ಅವರು ಸುದ್ದಿಗಾರರೊಂದಿಗೆ ಮಾತನಾಡಿ ಪಾರ್ವತಮ್ಮ ರಾಜಕುಮಾರ್ ಕಿವಿಮಾತಿಗೆ ಓಗುಟ್ಟು ನಾವು ನಿಷೇದದ ನಿರ್ಧಾರವನ್ನು ಮರಳಿ ಪಡೆದಿದ್ದೇವೆ. ಇದರಿಂದ ನಮ್ಮ ಸಂಘದ ಘನತೆಗೆ ಕುಂದಿಲ್ಲ ಚಿತ್ರರಂಗಕ್ಕೆ ಸೇರಿದ ನಾವೆಲ್ಲ ಒಂದೇ ಕುಟುಂಬದ ಸದಸ್ಯರಿದ್ದ ಹಾಗೆ ಎಂದು ಹೇಳಿದ್ದಾರೆ.

ನಿಖಿತಾಳನ್ನು ನಿಷೇದ ಮಾಡಿರುವದಕ್ಕೆ ವಿರೋಧ ವ್ಯಕ್ತಪಡಿಸಿ ಶಿವರಾಜ್ಕುಮಾರ್ ರಾಘವೇಂದ್ರ ರಾಜಕುಮಾರ್, ಪುನಿತರಾಜಕುಮಾರ್, ರಮ್ಯಾ, ತಾರಾ ಮೊದಲಾದವರು ಹೇಳಿಕೆ ನೀಡಿದ್ದರು.

ನಿಷೇದ ಹಿಂದೆ ಪಡೆದಿರುವುದು ನಮಗೆಲ್ಲ ಸಂತಸ ತಂದಿದೆ ಎಂದು ಅವರು ಹೇಳಿದ್ದಾರೆ. ತಮ್ಮನ್ನು ವಿನಾಕಾರಣವಾಗಿ ಬಲಿಪಶು ಮಾಡಲಾಗಿದೆ ಎಂದು ಹೇಳುತ್ತಾ ಬಂದಿದ್ದ ನಿಖಿತಾ ಸುದ್ದಿಗಾರರೊಂದಿಗೆ ಮಾತನಾಡಿ ಬಹಿಷ್ಕಾರ ಹಾಕುವಂತ ಅಪರಾಧವನ್ನು ನಾನು ಮಾಡಿರಲಿಲ್ಲ. ಸುಮ್ಮನೇ ನನಗೆ ಮತ್ತು ನನ್ನ ಮನೆಯವರಿಗೆ ಮಾನಸೀಕ ಹಿಂಸೆ ನೀಡಲಾಗಿದೆ. ಈಗ ನಿಷೇದ ಹಿಂದೆ ಪಡೆದಿರುವದನ್ನು ನನಗೆ ಸಂತೋಷವಾಗಿದೆ. ನಾನು ನಿರಪರಾಧಿ ಎಂದು ಸಾಬೀತಾಗಿದೆ ಎಂದು ಇದೇ ವಿಷಯಕ್ಕೆ ಸಂಬಂಧಪಟ್ಟಂತೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ವಿಶೇಷ ಸಭೆ ನಡೆಯಲಿದೆ. ಅದರಲ್ಲಿ ದರ್ಶನ್ ವಿಜಯಲಕ್ಷ್ಮೀ ನಿಖಿತಾ ಸೇರಿದಂತೆ ಈ ಪ್ರಕರಣದ ಎಲ್ಲ ವಿಷಯಗಳನ್ನು ಚರ್ಚಿಸಿ ನಿರ್ಧಾರ ತೆಗೆದುಕೊಳ್ಳುವ ಸಾಧ್ಯತೆ ಇದೆ.

loading...

LEAVE A REPLY

Please enter your comment!
Please enter your name here