ನಿಪ್ಪಾಣಿ-ಮಹಾಲಿಂಗಪೂರ ರಾಜ್ಯ ಹೆದ್ದಾರಿ

0
30
loading...

ಕಾಮಗಾರಿಯನ್ನು ಶೀಘ್ರವಾಗಿ ಪ್ರಾರಂಭಿಸಲು ಮನವಿ

ಚಿಕ್ಕೌಡಿ, ಸೆ.23: ಹದಗೆಟ್ಟು ಹೋಗಿರುವ ನಿಪ್ಪಾಣಿ-ಮಹಾಲಿಂಗಪೂರ ರಾಜ್ಯ ಹೆದ್ದಾರಿಯ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪ್ರಾರಂಭ ಮಾಡುವಂತೆ ಒತ್ತಾಯಿಸಿ ನ್ಯಾಯವಾದಿಗಳು ಮತ್ತು ಸಾರ್ವಜನಿಕರು ಇಂದು ಉಪವಿಭಾಗಾಧಿಕಾರಿ ಪ್ರೀಯಂಕಾ ಮೇರಿ ಪ್ರಾನ್ಸಿಸ್ ಅವರಿಗೆ ಮನವಿ ಸಲ್ಲಿಸಿದರು.

ದಿನನಿತ್ಯ ನೂರಾರು ವಾಹನ ಓಡಾಡುವ ಮಹಾಲಿಂಗಪೂರ-ನಿಪ್ಪಾಣಿ ರಾಜ್ಯ ಹೆದ್ದಾರಿಯಾಗಿ ಸುಮಾರು ವರ್ಷ ಕಳೆದರೂ ಸಹ ಕೇಂದ್ರ ಮತ್ತು ರಾಜ್ಯ ಸರಕಾರದಿಂದ ಸಾಕಷ್ಟು ಹಣ ಮಂಜೂರಾದರು ಕೂಡಾ ಈ ರಾಜ್ಯ ಹೆದ್ದಾರಿಯ ಕಾಮಗಾರಿಯು ಇನ್ನೂ ಪ್ರಾರಂಭವಾಗಿಲ್ಲ. ರಿಪೇರಿ ಸಹ ಮಾಡಿಲ್ಲ. ಇದರಿಂದ ರಸ್ತೆಯಲ್ಲಿ ತಗ್ಗು-ಗುಂಡಿಗಳೇ ಎದ್ದು ಕಾಣುತ್ತವೆ. ಸಾಮಾನ್ಯ ಜನರು ರಸ್ತೆಯ ಮೇಲೆ ನಡೆದು ಹೋಗಲಾರದಷ್ಟು ಕೆಟ್ಟು ಹೋಗಿದೆ. ಸಂಬಂಧ ಪಟ್ಟ ಇಲಾಖೆಯ ಅಧಿಕಾರಿಗಳು ರಸ್ತೆ ರಿಪೇರಿಗೆ ಪ್ರತಿ ವರ್ಷ ಐದರಿಂದ ಆರು ಬಾರಿ ಹಣ ಮಂಜೂರಾತಿ ಪಡೆದುಕೊಳ್ಳುತ್ತಾರೆ.ಆದರೆ ಈ ರಸ್ತೆ ಮಾತ್ರ ರಿಪೇರಿ ಕಂಡಿಲ್ಲ ಎಂದು ಸಾರ್ವಜನಿಕರು ಆಕ್ರೌಶ ವ್ಯಕ್ತಪಡಿಸಿದರು.

ಕಳೆದ ಬಾರಿ ಲೋಕಾಯುಕ್ತ ನ್ಯಾಯಮೂರ್ತಿ ಎನ್.ವೆಂಕಟಾಚಲ ಅವರು ಚಿಕ್ಕೌಡಿಗೆ ಆಗಮಿಸಿದ್ದ ಸಂದರ್ಭದಲ್ಲಿ ಸಾರ್ವಜನಿಕರಿಂದ ಈ ರಸ್ತೆ ಕುರಿತು ದೂರನ್ನು ಸಹ ನೀಡಲಾಗಿತ್ತು. ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳನ್ನು ಲೋಕಾಯುಕ್ತರು ವಿಚಾರಿಸಿದಾಗ ಸಂಬಂಧಪಟ್ಟ ರಸ್ತೆ ರಿಪೇರಿಯನ್ನು ಚೆನ್ನಾಗಿ ಮಾಡಿರುತ್ತೆವೆ ಎಂದು ಸುಳ್ಳು ಪ್ರಮಾಣ ಪತ್ರ ಸಲ್ಲಿಸಿದ್ದರು. ರಸ್ತೆ ಅಭಿವೃದ್ದಿಗಾಗಿ ಖರ್ಚು ಮಾಡಿದ ಹಣದ ವಿವರ ನೀಡಬೇಕೆಂದು ಮಾಹಿತಿ ಹಕ್ಕು ಅಧಿನಿಯಮದಡಿ ಅರ್ಜಿ ಸಲ್ಲಿಸಿದರು ಕೂಡಾ ಅಧಿಕಾರಿಗಳು ಉತ್ತರ ನೀಡಿಲ್ಲ. ಸರಕಾರವು ರಸ್ತೆ ಕಾಮಗಾರಿಯನ್ನು ತ್ವರಿತಗತಿಯಲ್ಲಿ ಪ್ರಾರಂಭ ಮಾಡಬೇಕು.

ಇಲ್ಲದಿದ್ದರೆ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಮನವಿಯಲ್ಲಿ ಎಚ್ಚರಿಕೆ ನೀಡಲಾಗಿದೆ.ಎಸ್.ಡಿ.ಕೊಟಬಾಗಿ, ವೈ.ವಿ.ಗೋಡಕೆ, ಎಲ್.ಕೆ.ಈಟಿ, ಎಸ್.ಆರ್.ಖೋತ, ಪಿ.ಎ.ಹೂವಣ್ಣವರ, ಸಿ.ಬಿ.ಭೀಮನ್ನವರ, ಎಸ್.ಎಸ್.ಮರ್ಯಾಯಿ, ಎಸ್.ಎಸ್.ಪಾಟೀಲ, ಎಸ್.ಡಿ.ಕಟ್ಟಿ ಮುಂತಾದವರು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here