ನೀರು ಬಿಡಬೇಕೆಂದು ಒತ್ತಾಯಿಸಿ, ಸತ್ಯಾಗ್ರಹ

0
14
loading...

 ಚಿಕ್ಕೌಡಿ : ತಮ್ಮ ಗ್ರಾಮಗಳ ಜಮೀನುಗಳಿಗೆ ಕಾಲುವೆಗಳ ಮೂಲಕ ನೀರು ಬಿಡಬೇಕೆಂದು ಒತ್ತಾಯಿಸಿ, ರಾಯಬಾಗ ತಾಲೂಕಿನ ಮಂಟೂರ, ನಿಪನಾಳ, ಕಟಕಬಾವಿ ಹಾಗೂ ದೇವಾಪೂರಟ್ಟಿ ಗ್ರಾಮಗಳ ರೈತರು ಕಳೆದ ಹತ್ತು ದಿನಗಳಿಂದ ನಡೆಸುತ್ತಿದ್ದ ಉಪವಾಸ ಸತ್ಯಾಗ್ರಹ ಉಗ್ರ ಸ್ವರೂಪ ತಾಳುವದನ್ನು ಮನಗಂಡ ನೀರಾವರಿ ನಿಗಮದ ಅಧಿಕಾರಿಗಳು ಮಂಗಳವಾರ ಸಂಜೆ ಕಾಲುವೆಯ ಸಮಗ್ರ ತಪಾಸಣೆ ನಡೆಸಿ ಲಿಖಿತವಾಗಿ ಬರವಸೆ ನೀಡಿದ ನಂತರ ಇಂದು ಸತ್ಯಾಗ್ರಹವನ್ನು ಹಿಂತೆಗೆದುಕೊಳ್ಳಲಾಗಿದೆ.

ಈ ಮದ್ಯ ರೈತರು ಕಚೇರಿಯ ಸಿಬ್ಬಂದಿಯನ್ನು ಹೊರಗೆ ತೆಗೆದು ಕಚೇರಿಗೆ ಬೆಳಿಗ್ಗೆಯಿಂಗ ಸಂಜೆಯವರೆಗೆ ಬೀಗ ಜಡಿದು ಘೋಷಣೆಗಳನ್ನು ಕೊಗುತ್ತಿದ್ದರು. ನೀರಾವರಿ ನಿಗಮದ ಉತ್ತರ ವಲಯದ ಮುಖ್ಯ ಇಂಜೀನೀಯರ ಅಶೋಕ ವಾಸನದ

ಹಾಗೂ ಸುಪ್ರಿದಿಟೆಂಡೆಂಟ್ ಇಂಜೀನೀಯರ ಎ.ಎಲ್.ಜಾನವೇಕರ ಅವರು ಈ ಸಂಬಂದವಾಗಿ ಸಮಗ್ರ ತನಿಖೆ ನಡೆಸಿ ಸದರಿ ಗ್ರಾಮಗಳಲ್ಲಿನ ನಾಲೆಯ ಅಂಚಿನವರೆ ನೀರು ಬಿಡಲು ಅಗತ್ಯ ಕ್ರಮಕೈಗೊಳ್ಳಲು ತಿಳಿಸಿದ್ದಾರೆಂದು ಕಾರ್ಯ ನಿರ್ವಾಹಕ ಅಬಿಯಂತರ ಧರಣೇಂದ್ರ ಕುಮಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

loading...

LEAVE A REPLY

Please enter your comment!
Please enter your name here