ಉಳ್ಳಾಗಡ್ಡಿ ಖಾನಾಪೂರ 17- ಮತಕ್ಷೇತ್ರದ ವ್ಯಾಪ್ತಿಯಲ್ಲಿನ ಮಾಸ್ತಿಹೊಳಿ, ನರಸಿಂಗಪೂರ, ಮಣಗುತ್ತಿ ಗ್ರಾಮಗಳ ಸಾವಿರಾರು ಎಕರೆ ಫಲವತ್ತಾದ ಭೂಮಿಯನ್ನು ಸ್ವಾಧೀನಕ್ಕೆ ಗೋವಾದ ಜುವಾರಿ ಕಂಪನಿಯ ನಿಲುವಿಗೆ ಧಾರವಾಡ ಹೈಕೋರ್ಟ ಸಂಚಾರಿ ಪೀಠ ತಡೆಯಾಜ್ಞೆ ನೀಡುವ ಮೂಲಕ ನೇಗಿಲ ಯೋಗಿಗಳಿಗೆ ಮತ್ತೊಮ್ಮೆ ಯಶ ದೊರಕಿಸಿಕೊಟ್ಟಂತಾಗಿದೆ ಎಂದು ಶಾಸಕ ಜಾರಕಿಹೊಳಿ ಹೇಳಿದರು.
ಅವರು ಮಾಸ್ತಿಹೊಳಿ ಗ್ರಾಮದಲ್ಲಿ ಗ್ರಾಮಸ್ಥರ ಸನ್ಮಾನ ಸ್ವೀಕರಿಸಿ ಮಾತನಾಡುತ್ತ ಹಿಂದೆ ನಡೆದ ತಾ.ಪಂ. ಜಿ.ಪಂ. ಚುನಾವಣೆಗಳಲ್ಲಿ ಬಿಜೆಪಿಯ ಸಂಸದರು ಹಾಗೂ ಶಾಸಕರು ಈ ವಲಯದ ಭೂಮಿಯನ್ನು ಉಳಿಸಿ ಕೊಡುವುದಾಗಿ ಆಶ್ವಾಸನೆ ನೀಡಿ ಹೋದವರು ಇಂದಿಗೂ ಮರಳಿ ಇತ್ತ ನೋಡಿಲ್ಲ. ಇಂತವರನ್ನು ನಂಬದೇ ಸ್ವಯಂ ನಿರ್ಧಾರಕ್ಕೆ ರೈತರು ಮುಂದಾಗಬೇಕು. ಕೆಲ ರೈತರು ರೈತರು ಭೂಮಿಯನ್ನು ನೀಡಲು ಮುಂದಾಗುತ್ತಿದ್ದು, ರೈತರು ಒಗ್ಗಟ್ಟಿನಿಂದ ಕೂಡಿ ಒಮ್ಮತದ ನಿರ್ಧಾರಕ್ಕೆ ಬರಬೇಕೆಂದು ತಿಳಿಸಿದರು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈರಣ್ಣಾ ಬಿಸಿರೊಟ್ಟಿ, ಬಾಳೇಶ ಮಾವನೂರಿ ಮುಂತಾದವರು ಉಪಸ್ಥಿತರಿದ್ದರು.