ಪತ್ರಕರ್ತರು ಗೌರವವನ್ನು ಕಾಯ್ದುಕೊಳ್ಳಬೇಕು

0
19
loading...

ಗೋಕಾಕ್: ಗೋಕಾಕಿನ ನೀರೀಕ್ಷಣಾ ಮಂದರಿದಲ್ಲಿ ಇತ್ತೀಚೆಗೆ ಕರ್ನಾಟಕ ಎಡಿಟರ್ಸ್ ಪ್ರೆಸ್ ಕೌನ್ಸಿಲ್ನ ತಾಲ್ಲೂಕಾ ಘಟಕದ ಸಭೆಗೆ ಕರ್ನಾಟಕ ರಾಜ್ಯ ದಲಿತ ಸಂಘಷ ಸಮಿತಿ ರಾಜ್ಯ ಸಂಚಾಲಕರಾದ ಯಲ್ಲಪ್ಪ ಮಾದರ ಇವರು ಮುಖ್ಯ ಅತಿಥಿಯಾಗಿ ಆಗಮಿಸಿದ್ದರು.

ಎಡಿಟರ್ಸ್ ಪ್ರೆಸ್ ಕೌನ್ಸಿಲ್ನ ರಾಜ್ಯಾಧ್ಯಕ್ಷರಾದ ಜೈನುಲ್ಲಾ ಅಂಕಲಗಿ, ರಾಜ್ಯ ಕಾರ್ಯದರ್ಶಿ ಎಂ.ಎಚ್.ಸಯ್ಯದ್, ಜಿಲ್ಲಾಧ್ಯಕ್ಷ ಬಿ.ಎಸ್.ಸನದಿ, ತಾಲ್ಲೂಕಾಧ್ಯಕ್ಷರಾದ ರಾಮನಿಂಗ್ ದೊಡ್ಡಮನಿ ವೇದಿಕೆ ಮೇಲೆ ಹಾಜರಿದ್ದರು. ಸಭೆಯನ್ನುದ್ದೇಶಿಸಿ ಮಾತನಾಡಿದ ಯಲ್ಲಪ್ಪ ಮಾದರರವರು ಪತ್ರಕರ್ತರು ಸಮಾಜದ ಅಂಕುಡೊಂಕುಗಳನ್ನು ತಿದ್ದುವಲ್ಲಿ ಅತಿ ಮುಖ್ಯ ಸ್ಥಾನದಲ್ಲಿದ್ದು, ಆ ಸ್ಥಾನದ ಘನತೆ ಗೌರವವನ್ನು ಪತ್ರಕರ್ತರು ಕಾಯ್ದುಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ರಾಷ್ಟ್ತ್ರದ ಘನತೆ, ಪತ್ರಕರ್ತರ ಕೈಲಿದೆ. ರಾಷ್ಟ್ತ್ರದ ಘನತೆ ಗೌರವಕ್ಕೆ ಧಕ್ಕೆಯಾಗದಂತೆ ಸರ್ವರೂ ಒಕ್ಕಟ್ಟಿನಿಂದ ಈ ಸಂಘಟನೆ ಹೆಮ್ಮರವಾಗಿ ಬೆಳೆಯಲೆಂದು ಹಾರೈಸಿದರು. ರಾಜ್ಯಾಧ್ಯಕ್ಷರಾದ ಜೈನುಲ್ಲಾ ಅಂಕಲಗಿ ಮಾತನಾಡಿ ಹಿಡಕಲ್ ಡಾಂನ ಹೂನುರ ನೀರೀಕ್ಷಣಾ ಮಂದಿರದಲ್ಲಿ ನಡೆಸಲಾಗುವುದು. ಸರ್ವ ತಾಲ್ಲೂಕಾ ಘಟಕಗಳ ಅಧ್ಯಕ್ಷರು ನೋಂದಣಿ ಪ್ರಕ್ರಿಯೆಯನ್ನು ಬೇಗನೆ ಪ್ರಾರಂಭಿಸುವಂತೆ ಸೂಚಿಸಿದರು. ರಾಜ್ಯ ಪ್ರಧಾನ ಕಾರ್ಯದರ್ಶಿ ಎಂ.ಎಚ್.ಸಯ್ಯದ್ ಮಾತನಾಡಿ ಪತ್ರಕರ್ತರು, ಸಂಪಾದಕರು, ನೈಜಸುದ್ದಿ ಪ್ರಕಟಿಸುವಲ್ಲಿ ಪ್ರಮುಖ ಪಾತ್ರ ವಹಿಸಬೇಕಾಗಿದೆ ಅದಕ್ಕೆ ಎಲ್ಲರೂ ಪ್ರಯತ್ನಿಸೋಣ ಎಂದು ಕರೆ ನೀಡಿದರು. ರಾಜ್ಯಮಟ್ಟದಲ್ಲಿ ನಮ್ಮ ಈ ಸಂಘಟನೆಯನ್ನು ರಾಜ್ಯದ ಪ್ರತಿ ಜಿಲ್ಲೆ, ತಾಲ್ಲೂಕುಗಳಲ್ಲಿ ಪರಿಚಯಿಸಲಾಗಿದೆ. ಸರ್ವ ಜಿಲ್ಲಾಧ್ಯಕ್ಷರನ್ನು ಇದೇ ತಿಂಗಳ 3ನೇ ವಾರದಲ್ಲಿ ಮೀಟಿಂಗ್ ಕರೆದು ಸಮ್ಮೇಳನ ನಡೆಸುವ ಬಗ್ಗೆ ನಿರ್ಧರಿಸಲಾಗುವುದೆಂದು ತಿಳಿಸಿದರು. ರಾಯಬಾಗ ತಾಲ್ಲೂಕಾ ಘಟಕವನ್ನು ಜಿಲ್ಲಾಧ್ಯಕ್ಷರಾದ ಬಿ.ಎಸ್.ಸನದಿ ಘೋಷಿಸುತ್ತ, ದಿನಕರ್ ನಿಪನಾಳ್ಕರ್ರವರನ್ನು ರಾಯಬಾಗ ತಾಲ್ಲೂಕಾಧ್ಯಕ್ಷರನ್ನಾಗಿ ಹಾಗೂ ಅರುಣ್ ಮಾವರ್ಕರ್ ರಾಯಬಾಗ ತಾಲ್ಲೂಕಾ ಉಪಾಧ್ಯಕ್ಷ್ತ್ರರನ್ನಾಗಿ ಘೋಷಿಸಿದರು. ಬಿ.ಎಸ್.ಸನದಿ ಸ್ವಾಗತಿಸಿದರು. ಶಿವಲಿಂಗ ಅಂಬಲಿ ವಂದನಾರ್ಪಣೆ ಮಾಡಿದರು. ಸಭೆಯಲ್ಲಿ ಶ್ರೀಕಾಂತ್ ನಂದಿ, ಅಪ್ಪಣ್ಣ ಅಗಸರ, ಎಂ.ಆಯ್.ಅಂಕಲಗಿ, ಲಕ್ಷ್ಮಣ್ ನಂದಿ, ಅಬ್ದುಲ್ ಸತ್ತಾರ್, ರಮ್ಜಾನ್ ನದಾಫ್ು, ಅಶೋಕ್ ಸನದಿ, ಆನಂದ್ ಸೊಗಲದ, ಈರಣ್ಣ ವಾಳದ ಹಾಗೂ ಇನ್ನಿತರ ಜನ ಸಂಪಾದಕರು ಹಾಜರಿದ್ದರು. ಶ್ರೀಕಾಂತ್ ವಡರಟ್ಟಿ, ಚಂದ್ರಕಾಂತ್ ಉಪ್ಪಾರಟ್ಟಿ, ಕೆಂಚಪ್ಪ, ಚಂದರಗಿ, ಅಬ್ದುಲ್ ಅತ್ತಾರ್ ಸಹ 50 ಜನ ಸಂಪಾದಕರು ಹಾಜರಿದ್ದರು.

 

loading...

LEAVE A REPLY

Please enter your comment!
Please enter your name here