ಪಾಶ್ಚಾಪೂರದಲ್ಲಿ ಕಾಂಕ್ರೇಟ್ ರಸ್ತೆ ಕಾಮಗಾರಿಗೆ ಚಾಲನೆ

0
17

ಹಿಡಕಲ್ ಡ್ಯಾಮ್  : ಇಲ್ಲಿಗೆ ಸಮೀಪದ ಪಾಶ್ಚಾಪೂರ ಗ್ರಾಮದ ಹರಿಜನ ಕೇರಿಯಲ್ಲಿ ಗುರುವಾರ ದಿ : 15 ರಂದು ಮಲೆನಾಡು ಪ್ರದೇಶ ಅಭಿವೃದ್ದಿ ಯೋಜನೆಯಡಿಯಲ್ಲಿ ಮಂಜೂರಾದ 4 ಲಕ್ಷ ರೂ. ಗಳ ವೆಚ್ಚದ  ಕಾಂಕ್ರೇಟ್ ರಸ್ತೆ ನಿರ್ಮಾಣ ಕಾಮಗಾರಿಗೆ ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಅವರು ಗುದ್ದಲಿ ಪೂಜೆ ನೆರೆವೇರಿಸಿ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಪಾಶ್ಚಾಪೂರ ಗ್ರಾ.ಪಂ. ಅಧ್ಯಕ್ಷ ಲಕ್ಷ್ಮೀ ಶಂಕರ ದುಂಡಗಿ, ಉಪಾಧ್ಯಕ್ಷೆ ರತ್ನವ್ವಾ ಪಂಢಿತ ಕಾಂದ್ರೆ, ಪಾಶ್ಚಾಪೂ ಗ್ರಾ.ಪಂ. ಮಾಜಿ ಅಧ್ಯಕ್ಷ ಅಬ್ದುಲಗಣಿ ದರ್ಗಾ, ಶಂಕರ ದುಂಡಗಿ, ಮಕ್ತುಮ ದೇಸಾಯಿ, ಗುಂಡು ದೇವೆಂದ್ರ ಭಡಾಳೆ, ಶಿವಾಜಿ ಬಸನಾಯಿಕ, ಡಾ|| ಅಶೋಕ ಉಮನಾಬಾದಿಮಠ,

ಶೌಕತ್ ಮಕಾನದಾರ ಹಮೀದ ಹಂಚಿನಾಳ, ಸೈಯದ ಹಂಚಿನಾಳ, ಅಲ್ಲಾ ಅರಳಿಕಟ್ಟಿ, ಎನ್.ಎಸ್. ಮೋಮಿನ, ತಮ್ಮನ್ನಾ ಪತ್ತಾರ, ಯಲ್ಲಪ್ಪಾ ಶಿಂಧೆ, ಲಕ್ಕಪ್ಪಾ ಆಡಿಮನಿ, ಹುಕ್ಕೇರಿ ವಿದ್ಯುತ್ ಸಂಘದ ನಿಧೇರ್ಶಕ ರಾಜೇಂದ್ರ ತುಬಚಿ, ವಿನೋದ ಡೊಂಗರೆ, ಬಾನು ನದಾಪ್ ಮುಂತಾದವರು ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here