ಪ್ರಗತಿ ಪಥದಲ್ಲಿ ಧಾರವಾಡ ಸರ್ಕಾರಿ ನೌಕರರ ಬ್ಯಾಂಕ್

0
19
loading...

 

ಗ್ರಾಹಕರ ಸೇವೆಯೇ ಮಾಧವನ ಸೇವೆ ಎನ್ನುವ ಸಹಕಾರ ಮೂಲ ಮಂತ್ರದ ಭದ್ರ ಬುನಾದಿಯ ಮೇಲೆ 1920ರಲ್ಲಿ ಪತ್ತಿನ ಸಹಕಾರಿ ಸಂಘವೆಂದು ಆರಂಭವಾಗಿ ಇಂದು ಸರ್ಕಾರಿ ನೌಕರರ ಸಹಕಾರಿ ಬ್ಯಾಂಕ್ ಎಂದು ಪರಿವರ್ತನೆಯಾಗಿ ಸಾಕಷ್ಟು ಏರಿಳಿತಗಳ ನಡುವೆಯೂ ಉತ್ತಮ ಸಾಧನೆ ಮಾಡಿ ಉತ್ತರ ಕರ್ನಾಟಕದಲ್ಲಿಯೇ ಒಂದು ಉತ್ತಮ ಬ್ಯಾಂಕ್ ಎಂದು ಹೆಸರು ಗಳಿಸಿದೆ ದಿ. ಗೌರ್ನಮೆಂಟ್ ಎಂಪ್ಲಾಯೀಸ್ ಕೋ-ಆಪ್. ಬ್ಯಾಂಕ್ ಲಿ., ಧಾರವಾಡ.

ಸಹಕಾರಿ ಬ್ಯಾಂಕಿಂಗ್ ವಲಯದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿರುವ ಈ ಬ್ಯಾಂಕ್ ಗ್ರಾಹಕರಿಗೆ ನೀಡುತ್ತಿರುವ ತೃಪ್ತಿಕರ ಸೇವೆ, ವೃತ್ತಿ ಪರತೆ ಮತ್ತು ಸಮಯಕ್ಕೆ ಸರಿಯಾಗಿ ನೀಡುವ ಆರ್ಥಿಕ ನೆರವು ಇವುಗಳಿಂದ ಪ್ರತಿ ವರ್ಷ ಬ್ಯಾಂಕು ಲಾಭ ಗಳಿಸುತ್ತಲೇ ಬಂದಿದೆ. 3 ಕೋಟಿ 4 ಲಕ್ಷ ರೂ.ಗಳ ಮೂಲ ಬಂಡವಾಳ ಹಾಗೂ ಕಾಯ್ದಿಟ್ಟ ನಿಧಿ ನಮ್ಮ ಬ್ಯಾಂಕಿನ ಅಭ್ಯುದಯಕ್ಕೆ ಸಾಕ್ಷಿಯಾಗಿವೆ. 2010-11ನೇ ಸಾಲಿಗೆ 9.26 ಕೋಟಿ ಠೇವಣಿ ಸಂಗ್ರಹಿಸಿ 6.47 ಕೋಟಿ ಬಂಡವಾಳ ಸಾಲ ನೀಡಿಕೆಯಲ್ಲಿ ವಿನಿಯೋಗಿಸಿ ವರ್ಷಾಂತ್ಯಕ್ಕೆ ಆದಾಯ ತೆರಿಗೆಗೆ 6 ಲಕ್ಷ ರೂ.ಗಳ ಅನುವು ಮಾಡಿ ನಿವ್ವಳ 13.12 ಲಕ್ಷ ರೂ.ಗಳ ಲಾಭ ಗಳಿಸಲಾಗಿದೆ. ಬ್ಯಾಂಕ್ ರಿಸರ್ವ್ ಬ್ಯಾಂಕಿನ ನಿಯಮಗಳ ಪ್ರಕಾರ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಭದ್ರತಾ ಪತ್ರಗಳಲ್ಲಿ ರೂ. 228.00 ಲಕ್ಷ ರೂ.ಗಳನ್ನು ವಿನಿಯೋಗಿಸಿದೆ.

ಕಳೆದ ಸಾಲಿಗಿಂತ ಪ್ರಸಕ್ತ ಸಾಲಿನಲ್ಲಿ ಬ್ಯಾಂಕಿನ ವಹಿವಾಟು ಸಾಲ ವಿತರಣೆ ಹಾಗೂ ಠೇವಣಿ ಸಂಗ್ರಹಣೆಯಲ್ಲಿ ಉತ್ತಮ ಪ್ರಗತಿಯನ್ನು ಸಾಧಿಸಿದೆ. ಠೇವಣಿ ಸಂಗ್ರಹಣೆಯಲ್ಲಿ ಕಳೆದ ಸಾಲಿಗಿಂತ ಸುಮಾರು 2 ಕೋಟಿ 10 ಲಕ್ಷ ರೂ.ಗಳನ್ನು ಹೆಚ್ಚಿಗೆ ಶೇಖರಿಸಿ ಶೇ. 29.34 ರಷ್ಟು ವೃದ್ದಿ ಸಾಧಿಸಿದೆ. ಅದರಂತೆ ಸಾಲ ವಸೂಲಿ ಹಾಗೂ ವಿಶೇಷವಾಗಿ ಅನುತ್ಪಾದಕ ಆಸ್ತಿಗಳ ನಿವ್ವಳ ಪ್ರಮಾಣದಲ್ಲಿ ಸರ್ವಕಾಲೀನ ಸಾಧನೆಗೈದು ಶೇ. 6.36ಗೆ ಇಳಿಸಿ ದಾಖಲೆ ಸೃಷ್ಟಿಸಲಾಗಿದೆ.

ಸದಸ್ಯತ್ವ: 2009-10ರ ಅಂತ್ಯದಲ್ಲಿ 3712 ಒಟ್ಟು ಸದಸ್ಯರಿದ್ದು, ಈ ವರ್ಷದಲ್ಲಿ 3765 ಜನ ಸದಸ್ಯರಿದ್ದಾರೆ. 91ನೇ ವಾರ್ಷಿಕ ವರದಿ ವರ್ಷದಲ್ಲಿ 230 ಹೊಸದಾಗಿ ಅಧೀಕೃತ ಸದಸ್ಯರಾಗಿದ್ದರಲ್ಲದೆ 29 ಅಸೋಸಿಯೇಟ್ಸ್ ಸದಸ್ಯರು ಇರುತ್ತಾರೆ.

ಶೇರು ಬಂಡವಾಳ: ಕಳೆದ ವರ್ಷದಲ್ಲಿ ರೂ. 90.17 ಲಕ್ಷವಿದ್ದದು, ಈ ವರ್ಷದಲ್ಲಿ 22.86ಲಕ್ಷ ರೂ.ಗಳ ಸಂಗ್ರಹವಾಗಿದೆ. ಇದರಲ್ಲಿ ರೂ. 4.48 ಲಕ್ಷ ಪರತ ಮಾಡಿ ವರ್ಷದ ಕೊನೆಗೆ 108.55 ಲಕ್ಷಗಳಿಗೆ ಶೇರು ಬಂಡವಾಳ ವೃದ್ದಿಯಾಗಿ ರೂ. 18.38 ಲಕ್ಷ ಪ್ರಗತಿಯಾಗಿದೆ.

ಠೇವಣಿಗಳು: ಬ್ಯಾಂಕಿನ ಮೇಲೆ ಗ್ರಾಹಕರು ಇರಿಸಿದ ಅಪಾರ ವಿಶ್ವಾಸ ಮತ್ತು ಬ್ಯಾಂಕ್ ತನ್ನ ಗ್ರಾಹಕರಿಗೆ ನೀಡುತ್ತಿರುವ ಅತ್ಯುತ್ತಮ ಸೇವೆಯಿಂದಾಗಿ ಕಳೆದ ವರ್ಷದ ಆರಂಭದಲ್ಲಿ ರೂ.716.13 ಲಕ್ಷವಿದ್ದು, ವರದಿ ವರ್ಷದಲ್ಲಿ ರೂ. 998.60 ಲಕ್ಷ ರೂ.ಗಳ ಸಂಗ್ರಹವಾಗಿದೆ. ವರದಿಯ ವರ್ಷದ ಕೊನೆಗೆ ಠೇವಣಿಯು ರೂ. 926.22ಲಕ್ಷಗಳಿಗೆ ವೃದ್ದಿಯಾಗಿ ನಿವ್ವಳ ರೂ. 210.09 ಲಕ್ಷ ರೂ.ಗಳ ಪ್ರಗತಿ ಸಾಧಿಸಿ ಉತ್ತಮ ಸಾಧನೆ ಮಾಡಲಾಗಿದೆ.

ಸಾಲಗಳು ಮತ್ತು ಮುಂಗಡಗಳು: ವರ್ಷದ ಆರಂಭದಲ್ಲಿ ನೀಡಿದ ಒಟ್ಟು ಸಾಲ ರೂ. 575.92 ಲಕ್ಷವಿದ್ದು, ವರದಿ ವರ್ಷದಲ್ಲಿ 449.88 ಲಕ್ಷ ಸಾಲ ನೀಡಿದ್ದು, ಇದರಲ್ಲಿ 378.49 ಲಕ್ಷ ರೂ.ಗಳು ವಸೂಲಿಯಾಗಿದೆ. ವರ್ಷದ ಕೊನೆಯಲ್ಲಿ 647.31 ಲಕ್ಷ ರೂ.ಗಳಿಗೆ ತಲುಪಿ ಉತ್ತಮ ಅಭಿವೃದ್ದಿ ಕಂಡಿದೆ. ಮುಂದಿನ ದಿನಗಳಲ್ಲಿ ಬಂಗಾರ, ಎನ್.ಎಸ್.ಸಿ. ಎಲ್.ಐ.ಸಿ. ಬಾಂಡ್ಗಳ ಮೇಲೆಯೂ ಸಾಲ ನೀಡುವ ಬಗ್ಗೆ ಬೈಲಾದಲ್ಲಿ ತಿದ್ದುಪಡಿ ತರಲು ಚಿಂತಿಸಲಾಗಿದೆ ಎಂದು ಅಧ್ಯಕ್ಷರಾದ ಶ್ರೀ ಬಿ.ಎನ್. ಕಟಗಿ ತಿಳಿಸಿದ್ದಾರೆ.

ಅನುತ್ಪಾದಕ ಆಸ್ತಿಗಳು(ಎನ್.ಪಿ.ಎ): ಯಾವುದೇ ಬ್ಯಾಂಕಿನ ಆರೋಗ್ಯ ಅರಿಯುವ ಮಾನದಂಡ ಅದರ ಅನುತ್ಪಾದಕ ಆಸ್ತಿಗಳ ಪ್ರಮಾಣದಿಂದ ಎಂಬುದ ಅಷ್ಟೇ ಸತ್ಯ. ಪ್ರಸಕ್ತ ಸಾಲಿನಲ್ಲಿ ಮುದ್ದತ್ ಮೀರಿದ ಸಾಲಗಳ ವಸೂಲಾತಿಯಲ್ಲಿ ಬ್ಯಾಂಕು ಒಂದು ಇತಿಹಾಸವನ್ನೇ ನಿರ್ಮಿಸಿದೆ ಎಂದರೆ ಅತಿಶಯೋಕ್ತಿಯಾಗಲಾರದು. 2011ರ ಅಂತ್ಯಕ್ಕೆ ಎನ್.ಪಿ.ಎ. ಪ್ರಮಾಣವು 6.36 ಇಳಿಕೆಯಾಯಿತು, ಕಳೆದ 2010ರ ಅಂತ್ಯಕ್ಕೆ ಇದರ ಪ್ರಮಾಣ 12.39 ರಷ್ಟಿತ್ತು. ಇದಕ್ಕೆ ನಮ್ಮ ಬ್ಯಾಂಕ್ ಸಿಬ್ಬಂದಿಯವರ ವಿಶೇಷ ಪರಿಶ್ರಮ ಹಾಗೂ ಸದಸ್ಯರೆಲ್ಲರ ಸಹಕಾರ ಪ್ರೌತ್ಸಾಹ ಮತ್ತು ಸಹಕಾರವೇ ಪ್ರಮುಖ ಕಾರಣವೆಂದು ಬ್ಯಾಂಕಿನ ಅಧ್ಯಕ್ಷರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ದುಡಿಯುವ ಬಂಡವಾಳ: ಬ್ಯಾಂಕಿನ ದುಡಿಯುವ ಬಂಡವಾಳವು ಕಳೆದ ವರ್ಷದಲ್ಲಿ 1061.85 ಇದ್ದದ್ದು, ಪ್ರಸಕ್ತ ಸಾಲಿನ ಅಂತ್ಯಕ್ಕೆ 1316.31 ಲಕ್ಷ ರೂ.ಗಳಾಗಿದೆ. ವರದಿಯ ವರ್ಷದಲ್ಲಿ ಒಟ್ಟಾರೆ 254.46 ಲಕ್ಷ ರೂ. ಹೆಚ್ಚಳವಾಗಿದ್ದು, ಬ್ಯಾಂಕ್ ಪ್ರಗತಿ ಪಥದಲ್ಲಿ ಸಾಗುತ್ತಿರುವುದನ್ನು ತೋರಿಸುತ್ತದೆ.

ಶೇರುಗಳ ಮೇಲೆ ಲಾಭಾಂಶ: ಪಟ್ಟಣ ಬ್ಯಾಂಕುಗಳು ಆದಾಯ ತೆರಿಗೆ ರೂಪದಲ್ಲಿ ದೇಶದ ಅಭಿವೃದ್ದಿಗೆ ಲಾಭದ ಶೇ.33 ರಷ್ಟು ಪಾವತಿಸಬೇಕಾದ ಸಂದರ್ಭ ಬಂದಿದ್ದರಿಂದ ಆದಾಯ ತೆರಿಗೆಯಾಗಿ ರೂ. 6.00 ಲಕ್ಷ ರೂ. ಪಾವತಿಸಿದ ಮೇಲೆ ನಿವ್ವಳ ರೂ. 13.12 ರೂ.ಗಳ ಲಾಭ ಗಳಿಸಿರುತ್ತದೆ. ರಿಸರ್ವ ಬ್ಯಾಂಕಿನ ಅನುಮತಿಗೊಳಪಟ್ಟು ಸದಸ್ಯರಿಗೆ ಶೇ. 6ರಷ್ಟು ಶೇರುಗಳ ಮೇಲೆ ಲಾಭಾಂಶವನ್ನು ನೀಡಲಾಗುತ್ತದೆ.

ಬ್ಯಾಂಕಿನ ನಿವ್ವಳ ಲಾಭದಲ್ಲಿ ಹಲವಾರು ಉತ್ತಮ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಸಿಬ್ಬಂದಿ ಮಕ್ಕಳ ಉನ್ನತ ವಿದ್ಯಾಭ್ಯಾಸಕ್ಕೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡುವುದು, ಸಿಬ್ಬಂದಿಗಳ ಮಕ್ಕಳು ಎಸ್.ಎಸ್.ಎಲ್.ಸಿ. ಹಾಗೂ ಪಿಯುಸಿ ಗಳಲ್ಲಿ ಹೆಚ್ಚು ಅಂಕ ಗಳಿಸಿದವರಿಗೆ ಸನ್ಮಾನ-ಬಹುಮಾನ ನೀಡುವುದು, ಸಹಕಾರಿ ಶಿಕ್ಷಣ ನಿಧಿ,ಸಿಬ್ಬಂದಿ ಕಲ್ಯಾಣ ನಿಧಿ, ಸಿಬ್ಬಂದಿಗಳ ಹಾಗೂ ಸದಸ್ಯರಿಗೆ ಮರಣ ಪರಿಹಾರ ನಿಧಿ ಹೀಗೆ ವಿವಿಧ ನಿಧಿಗಳಲ್ಲಿ ಹಣ ಹೂಡಿ ಸಂಸ್ಥೆಯು ವರ್ಷವೀಡೀ ಕಾರ್ಯ ಚುಟವಟಿಕೆಯಿಂದ ಕೂಡಿರುತ್ತದೆ.

ವರದಿಯ ವರ್ಷದಲ್ಲಿ 14 ಆಡಳಿತ ಮಂಡಳಿಯ ಸಭೆಗಳು ಹಾಗೂ 17 ಉಪಸಮಿತಿಯ ಸಭೆಗಳು ಜರುಗಿವೆ. ಆಡಳಿತ ಮಂಡಳಿಯ ಸದಸ್ಯರು ಬ್ಯಾಂಕಿನ ಕಾರ್ಯ ಕಲಾಪಗಳಲ್ಲಿ ಆಸಕ್ತಿ ಶ್ರದ್ದೆಯಿಂದ ಸಕ್ರಿಯವಾಗಿ ಪಾಲ್ಗೊಂಡು ತಮ್ಮ ಸಲಹೆ ಸೂಚನೆಗಳನ್ನು ನೀಡಿ ಬ್ಯಾಂಕಿನ ಅಭಿವೃದ್ದಿಗೆ ಬೆನ್ನೆಲುಬಾಗಿದ್ದಾರೆ. ಶಿಸಹಕಾರ ಸಂಸ್ಥೆಯಿಂದ ಸಾಲ ಪಡೆಯುವುದು ನಿಮ್ಮ ಹಕ್ಕು ಸಕಾಲದಲ್ಲಿ ಸಾಲ ಮರುಪಾವತಿ ಮಾಡುವುದು ನಿಮ್ಮ ಜವಾಬ್ದಾರಿಷಿ ಎಂಬ ವಾಕ್ಯವನ್ನು ನೆನಪಿಸುತ್ತಾ ವ್ಯವಹರಿಸುತ್ತಾರೆ.

ಸರ್ಕಾರದ ನೀತಿಯನ್ನು ಸರ್ಕಾರಿ ಅಧಿಕಾರಿಗಳು ಕಾರ್ಯಗತಗೊಳಿಸುತ್ತಾರೆ. ನೀತಿ ನಿರೂಪಕರಲ್ಲಿ ತಾವು ಒಬ್ಬರೆಂಬ ಭಾವನೆ ಇರಬಹುದು ಅಥವಾ ಇಲ್ಲದಿರಬಹುದು ನೀತಿಯನ್ನಂತೂ ಕಾರ್ಯಗತಗೊಳಿಸುತ್ತಾರೆ. ಆದರೆ ಸಹಕಾರ ಕ್ಷೇತ್ರದಲ್ಲಿ ಕಾರ್ಯ ಮಾಡುವ ಅಧಿಕಾರಿಗಳು ತಮ್ಮ ಜವಾಬ್ದಾರಿ ನಿರ್ವಹಣೆಯಲ್ಲಿ ತಾವೂ ಸಹ ಸಂಪೂರ್ಣ ಭಾಗಿಗಳು ಹಾಗೂ ತಾವು ಸಹ ಸಹಕಾರಿಗಳೇ ಎಂಬ ಭಾವನೆಯನ್ನು ಹೊಂದಬೇಕಾಗುತ್ತದೆ. ಸಂಸ್ಥೆಯ ಬಗ್ಗೆ ಅಪಾರ ಅಭಿಮಾನವನ್ನು ಹೊಂದುವುದರ ಜೊತೆಗೆ ವಿಶೇಷ ಕಾಳಜಿಯನ್ನು ಹೊಂದಿದಾಗ ಸಂಸ್ಥೆ ಯಶಸ್ಸಿನತ್ತ ಸಾಗಲು ಸಾಧ್ಯವಾಗುತ್ತದೆ.

ಪಿ. ಕೌಸಲ್ಯ

ವಾರ್ತಾ ಇಲಾಖೆ, ಧಾರವಾಡ.

loading...

LEAVE A REPLY

Please enter your comment!
Please enter your name here