ಪ್ರಶ್ನೆಗಳ ಸುರಿಮಳೆಗೆ ತತ್ತರಿಸಿದ ರೆಡ್ಡಿ

0
11
ಹೈದರಾಬಾದ್, ಸೆ.14: ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಗಾಲಿ ಜನಾರ್ಧನರೆಡ್ಡಿ ಹಾಗೂ ಓಎಂಸಿ ಎಂ.ಡಿ. ಶ್ರೀನಿವಾಸ ರೆಡ್ಡಿಯವರನ್ನು ಇಂದು ಸಿಬಿಐ ಅಧಿಕಾರಿಗಳು ತೀವ್ರ ವಿಚಾರಣೆಗೆ ಒಳಪಡಿಸಿದರು.
loading...

ಹೈದರಾಬಾದದ ಚಂಚಲಗುಡದಿಂದ ಅಜ್ಞಾತ ಸ್ಥಳಕ್ಕೆ ಕರೆದುಕೊಂಡು ಹೋಗಿರುವ ಸಿಬಿಐ ಅಧಿಕಾರಿಗಳು ಬೆಳಿಗ್ಗೆ 11 ರಿಂದ ಸಂಜೆ 5ರ ವರೆಗೆ ನಿರಂತರವಾಗಿ ಉಭಯ ರೆಡ್ಡಿಗಳಿಗೆ ಪ್ರಶ್ನೆಗಳ ಮೇಲೆ ಪ್ರಶ್ನೆ ಹಾಕಿ ಸುಸ್ತು ಹೊಡೆಸಿದ್ದಾರೆ.

ವರ್ಕ್ರೂಮ್ವೊಂದರಲ್ಲಿ ಜನಾರ್ಧನರೆಡ್ಡಿ ಶ್ರೀನಿವಾಸರೆಡ್ಡಿ ಅವರನ್ನು ಕೂಡಿ ಹಾಕಿರುವ ಇಬ್ಬರು ಸಿಬಿಐ ಅಧಿಕಾರಿಗಳು ಗಣಿಗಾರಿಕೆಯ ಬಗ್ಗೆ ನಾನಾ ರೀತಿಯ ಪ್ರಶ್ನೆಗಳನ್ನು ಅವರಿಗೆ ಹಾಕಿ ಉತ್ತರಗಳನ್ನು ಪಡೆದಿದ್ದಾರೆ.

ಈ ಸಂದರ್ಭದಲ್ಲಿ ರೆಡ್ಡಿಯವರಿಂದ ಕೆಲವು ಮಹತ್ವದ ವಿಷಯಗಳು ಸಿಬಿಐ ಅಧಿಕಾರಿಗಳಿಗೆ ದೊರೆತಿವೆ ಎಂದು ಹೇಳಲಾಗಿದೆ. ವಿಚಾರಣೆಯ ಸಂದರ್ಭದಲ್ಲಿ ನ್ಯಾಯಾಲಯದ ಅನುಮತಿಯ ಪ್ರಕಾರ ರೆಡ್ಡಿ ಪರ ವಕೀಲ ರಾಮಚಂದ್ರ ರೆಡ್ಡಿಯವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಓಎಂಸಿ ಕಂಪನಿಯ ಸಿಇಓ ಆಗಿ ಕೋಟ್ಯಾಂತರ ರೂಪಾಯಿ ವೇತನವನ್ನು ಪಡೆದಿದ್ದೀರಿ ಅದಿರನ್ನು ಸಾಗಿಸುವಾಗ ಎಷ್ಟು ತೆರಿಗೆ ಪಾವತಿ ಮಾಡಿದ್ದೀರಿ ಅಕ್ರಮ ಗಣಿಗಾರಿಕೆಯ ಬಗ್ಗೆ ನಿಮ್ಮ ಅಭಿಪ್ರಾಯವೇನು ಎಂದೇಲ್ಲ ಸಿಬಿಐ ಅಧಿಕಾರಿಗಳು ಪ್ರಶ್ನೆ ಮಾಡಿದ್ದಾರೆ.

ಆಂಧ್ರ ಪ್ರದೇಶದ ಮಾಜಿ ಮುಖ್ಯಮಂತ್ರಿ ವೈ. ಎಸ್. ರಾಜಶೇಖರ ರೆಡ್ಡಿ ಗಣಿಗಾರಿಕೆ ನಡೆಸಲು ಅನುಮತಿ ನೀಡಿದ ದಿನದಿಂದ ಹಿಡಿದು ಸರ್ವೌಚ್ಚ ನ್ಯಾಯಾಲಯ ಆಂಧ್ರಪದಲ್ಲಿ ಗಣಿಗಾರಿಕೆ ನಿಷೇದ ಮಾಡಿದ ದಿನದವರೆಗೆ ನಡೆದಿರುವ ಎಲ್ಲ ವ್ಯವಹಾರ ವಹಿವಾಟುಗಳ ಬಗ್ಗೆ ಸುದೀರ್ಘ ವಿಚಾರಣೆ ನಡೆಸಲಾಗಿದೆ

loading...

LEAVE A REPLY

Please enter your comment!
Please enter your name here