ಬಿ.ಎಸ್.ವೈ.ಗೆ ಜಾಮೀನು

0
16
loading...

ಬೆಂಗಳೂರು, ಸೆ.15: ಭದ್ರ ಮೇಲ್ದಂಡೆ ಕಾಮಗಾರಿ ಗುತ್ತಿಗೆ ಹಗರಣಕ್ಕೆ ಸಂಬಂಧಿಸಿದಂತೆ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಶ್ರೇಷ್ಟ ನ್ಯಾಯಾಲಯ ಷರತ್ತು ಬದ್ದ ನೀರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

10 ದಿನಗೊಳಗಾಗಿ ಹಗರಣದ ತನಿಖೆ ನಡೆಸುತ್ತಿರುವ ಲೋಕಾಯುಕ್ತ ತನಿಖಾಧಿಕಾರಿಯ ಮುಂದೆ ಹಾಜರಾಗಿ ವಿಚಾರಣೆಗೆ ಸಹಕರಿಸಬೇಕು. ನ್ಯಾಯಾಲಯದ ಅನುಮತಿ ಇಲ್ಲದೆ ವಿದೇಶಕ್ಕೆ ತೆರಳಬಾರದು. ದಾಖಲೆ ಮತ್ತು ಸಾಕ್ಷ್ಯದಾರ ನಾಶಕ್ಕೆ ಪ್ರಯತ್ನಿಸಬಾರದು. ಒಂದು ಲಕ್ಷ ರೂಪಾಯಿ ವೈಯಕ್ತಿಕ ಬಾಂಡ್ ನೀಡಬೇಕು ಎಂದು ನ್ಯಾಯಾಲಯ ಷರತ್ತುಗಳನ್ನು ವಿಧಿಸಿದೆ.

ಯಡಿಯೂರಪ್ಪ ವಕೀಲ ಸಂದೀಪ್ ಬಿ. ಪಾಟೀಲ್ ಮಂಡಿಸಿದ್ದ ವಾದ ಆಲಿಸಿದ ನಂತರ ನ್ಯಾಯಾಲಯದ ಏಕ ಸದಸ್ಯ ಪೀಠದ ನ್ಯಾಯಮೂರ್ತಿ ಎಸ್.ಎಚ್. ಬಿಲ್ಲಪ್ಪ ಈ ಜಾಮೀನು ಮಂಜೂರು ಮಾಡಿದ್ದಾರೆ.

ಸಾವಿರಾರು ಕೋಟಿ ರೂಪಾಯಿಗಳ ಭದ್ರಾ ಮೇಲ್ದಂಡೆ ಕಾಮಗಾರಿಯನ್ನು ಆರ್. ಎಸ್.ಎಸ್. ಇನ್ ಪ್ರಾಸ್ಟಕ್ಚರ್ ಪ್ರೈವೇಟ್ ಲಿಮಿಟೆಡ್ಗೆ ಗುತ್ತಿಗೆ ನೀಡುವ ಸಲುವಾಗಿ ಆಗ ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ 13 ಕೋಟಿ ರೂಪಾಯಿ ಲಂಚ ಪಡೆದಿದ್ದಾರೆ ಎಂದು ಜೆಡಿಎಸ್ ವಕ್ತಾರ ವೈ.ಎಸ್.ವಿ. ದತ್ತಾ ಲೋಕಾಯುಕ್ತರಿಗೆ ದೂರು ನೀಡಿದ್ದರು.

ಯಡಿಯೂರಪ್ಪ ಅವರ ಪುತ್ರರು ನಡೆಸುತ್ತಿರುವ ಢವಳಗಿರಿ ಪ್ರಾಪರ್ಟಿಸ್ ಮತ್ತು ಸಹ್ಯಾದ್ರಿ ಹೆಲ್ತ್ ಕೇರ್ ಸಂಸ್ಥೆಗಳ ಮೂಲಕ ಈ ಲಂಚದ ಹಣ ಸಂದಾಯವಾಗಿದೆ ಎಂದು ದತ್ತಾ ಆರೋಪಿಸಿದ್ದರು. ಭ್ರಷ್ಟಾಚಾರ ನಿಗ್ರಹ ಕಾಯ್ದೆ ಅಡಿ ಲೋಕಾಯುಕ್ತ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಇದರ ವಿಚಾರಣೆ ನಡೆಸಿದ ವಿಶೇಷ ನ್ಯಾಯಾಲಯ ಯಡಿಯೂರಪ್ಪ ಅವರಿಗೆ ಸಮನ್ಸ್ ಜಾರಿ ಮಾಡಿತ್ತು. ಈ ಹಿನ್ನೆಲೆಯಲ್ಲಿ ಅವರು ನೀರೀಕ್ಷಣಾ ಜಾಮೀನು ಕೋರಿ ಶ್ರೇಷ್ಟ ನ್ಯಾಯಾಲಯಕ್ಕೆ ಮೊರೆ ಹೋಗಿದ್ದರು. ವಾದ ಪ್ರವಾದಗಳನ್ನು ಆಲಿಸಿದ ನ್ಯಾಯಾಲಯ ಅಂತಿಮವಾಗಿ ನೀರೀಕ್ಷಣಾ ಜಾಮೀನು ಮಂಜೂರು ಮಾಡಿದೆ. ಇದೇ ರೀತಿ ಕುಮಾರಸ್ವಾಮಿ ದಂಪತಿಗಳಿಗೂ ನೀರೀಕ್ಷಣಾ ಜಾಮೀನು ಮಂಜೂರಾಗಿದೆ.

loading...

LEAVE A REPLY

Please enter your comment!
Please enter your name here