ಭಕ್ತರ ಭಾಗ್ಯನಿಧಿ ಲಿಂ. ನಾಗಭೂಷಣ ಶಿವಯೋಗಿಗಳು

0
25
loading...

ಭಾರತದೇಶ ಋುಷಿ ಸಂಸ್ಕ್ಕತಿಯ ನೆಲೆಬೀಡು, ಪವಾಡ ಪುರುಷರು ಸಿದ್ದಿಪುರುಷರು  ಶಿವಯೋಗಿಗಳು ಕಾಲ ಘಟ್ಟಕ್ಕೆ ಅನುಗುಣವಾಗಿ ಬಾಳಿ ಬೆಳೆದ ಇಂಥಹ ಪುಣ್ಯ ನೆಲದಲ್ಲಿ ಮಹಾತ್ಮರಾಗಿ  ಬೆಳಗಿದವರು ಜಮಖಂಡಿ ತಾಲೂಕಿನ ಮರೆಗುದ್ದಿ  ಶ್ರೀಗುರು  ದಿಗಂಬರೇಶ್ವರ ಸಂಸ್ಥಾನ ಮಠದ ಲಿಂ.ಮ.ನಿ.ಪ್ರ. ನಾಗಭೂಷಣ ಶಿವಯೋಗಿಗಳು.ತಾಯಿ ಅಲ್ಲಮ್ಮ ತಂದೆ ಕಾಂತಯ್ಯ  ಎಂಬ ಶರಣ ದಂಪತಿಗಳ ಪವಿತ್ರ ಯದರದಲ್ಲಿ ಜನಿಸಿ ಪ್ರಾಥಮಿಕ ಶಿಕ್ಷಣ ಮರೆಗುದ್ದಿ, ಹಲಗಲಿ, ಮುಧೋಳ, ಹಾಗೂ ಪ್ರೌಢ ಶಿಕ್ಷಣವನ್ನು ಧಾರವಾಡದ ಮುರುಘಾಮಠದಲ್ಲಿ ಮುಗಿಸಿ ಸ್ನಾತಕೋತ್ತರ  ಪದವಿಗೆ  ಕಾಶಿಗೆ ತೆರಳಿ  ಸಂಸ್ಕ್ಕತ  ವಿಷಯವನ್ನು ಆಯ್ಕೆ ಮಾಡಿಕೊಂಡು ಪ್ರಥಮ ವರ್ಗದಲ್ಲಿ ಪಾಸಾಗಿ  ಸುವರ್ಣಪದಕ ಪಡೆಯುವದರೊಂದಿಗೆ ಸ್ವಗ್ರಾಮಕ್ಕೆ  ಮರಳಿದರು.

ಬೆಳೆಯುವ  ಸಿರಿ  ಮೊಳಕೆಯಲ್ಲಿ  ಎಂಬ ಮಾತಿನಂತೆ ಬಾಲಕರಿರುವಾಗ ಹತ್ತು ಹಲವು  ಪವಾಡಗಳನ್ನು  ಮಾಡಿದರು.  ಶ್ರೀ ಮಠದ  ಭಕ್ತರೆಲ್ಲರೂ ಪ್ರೀತಿಯಿಂದ 1978 ರಲ್ಲಿ ಶ್ರೀಗುರು ದಿಗಂಬರೇಶ್ವರ ಮಠದ  ಚರಪಟ್ಟಾಧಿಕಾರಿಯಾಗಿ ಬಂದರು. ಪ್ರಾರಂಭದಲ್ಲಿ  ಹಲವಾರು  ಅಡೆತಡೆಗಳು  ಬಂದರು. ಗಟ್ಟಿಯಾದಾಗ ಮೆಟ್ಟು  ಎಂಬ  ತತ್ವದ ಮೇಲೆ  ಸಾಧನಡೆ ನುಡಿಯಿಂದ ಭಕ್ತ ಸಮೂಹದ ಮನಸ್ಸುಗಳನ್ನು ಗೆದ್ದರು. ವಿಶ್ವಗುರು ಬಸವಣ್ಣನವರ ಕಾಯಕವೇ  ಕೈಲಾಸ  ಎಂಬ  ಸಿದ್ದಾಂತವನ್ನು  ಒಪ್ಪಿಕೊಂಡು  ಅದೇ ಮಾರ್ಗದಲ್ಲಿ ತಾವು ನಡೆದು ಭಕ್ತರಿಗೆ ಕಾಯಕ ಸಿದ್ದಾಂತವನ್ನು  ಮನವರಿಕೆ  ಮಾಡಿದರು.  ತ್ರಿಕಾಲ ಪೂಜಾ ನಿಷ್ಠೆಯಿಂದ ಭಗವಂತನ  ಕರುಣೆಯ ಕಂದರಾದರು. ಪೂಜ್ಯರು ಆಡಿದ್ದೇ ವೇದ ಪ್ರ್ರೀತಿಯಿಂದ  ನೋಡಿದ ಭಕ್ತರಿಂದು ಉದ್ದಾರವಾಗಿದ್ದಾರೆ.  ಭಕ್ತರ  ಉದ್ದಾರಕ್ಕಾಗಿ ಮನು ಕುಲದ ಉದ್ದಾರಕ್ಕಾಗಿ ಮೌನ ಅನುಷ್ಠಾನ ನಿರಾಹಾರ ಅನುಷ್ಠಾನಗಳನ್ನು  ಮಾಡಿ ಲೋಕ ಕಲ್ಯಾಣದ ಬಗ್ಗೆ ಚಿಂತಿಸುತ್ತಿದ್ದರು. ಯಾವ ಆಡಂಬರ ಪ್ರಚಾರಗಳನ್ನು ಬಯಸದೇ ಭಕ್ತ ವರ್ಗದ ಇಷ್ಟಾರ್ಥಗಳನ್ನು ಪೂರೈಸಿ ಅವರ ಯೋಗಕ್ಷೇಮ  ನೋಡಿಕೊಂಡು ಹೋಗುತ್ತಿದ್ದರು.  ಇಂತಹ ಭಕ್ತರ ಭಾಗ್ಯ ನಿಧಿ ದಿನಾಂಕ: 4-10-1993 ರಲ್ಲಿ ಲಿಂಗೈಕ್ಯರಾದರು.

ಶರಣರ ಜೀವನ ಮರಣದಲ್ಲಿ ನೋಡು ಎಂಬ  ಮಾತಿನಂತೆ ಇಂದಿಗೂ ಲಿಂಗೈಕ್ಯ ಅಪ್ಪಗಳವರ  ಕರ್ತೃ ಗದ್ದುಗೆಗೆ  ಆಗಮಿಸಿ ತ್ರಿಕರ್ಣ ಪೂರಕವಾಗಿ  ಭಯ ಭಕ್ತಿಯಿಂದ ನಡೆದುಕೊಂಡಿದ್ದೆ  ಆದರೆ ಇಷ್ಟಾರ್ಥಗಳು ಸಿದ್ದಿಯಾಗುವದರಲ್ಲಿ  ಯಾವ ಸಂದೇಹವಿಲ್ಲ.

ಲಿಂ.  ಶ್ರೀ . ಮ.ನಿ.ಪ್ರ.  ನಾಗಭೂಷಣ ಶಿವಯೋಗಿಗಳ ವರ 18 ನೇಯ ಪುಣ್ಯಾರಾಧನೆಯು ದಿನಾಂಕ>  14-9-2011  ರಂದು ಶ್ರೀ ,. ನಿ. ಪ್ರ. ಶಿವಲಿಂಗ  ಮಹಾಸ್ವಾಮಿಗಳು  ಬಿದರಿ ಕಲ್ಮಠ ಸವದತ್ತಿ ಇವರ ಸಾನಿಧ್ಯದಲ್ಲಿ  ಶ್ರೀ ಮ.ನಿ.ಪ್ರ.ಸ್ವ. ಗುರುಪಾದ ಮಹಾಸ್ವಾಮಿಗಳು ಅಡವಿಮಠ ಪೂಜ್ಯರ ಅಧ್ಯಕ್ಷತೆಯಲ್ಲಿ ಶ್ರೀ ಷ. ಬ್ರ. ಶಿವಲಿಂಗ ಶಿವಾಚಾರ್ಯ ಮಹಾಸ್ವಾಮಿಗಳು ಮುತ್ತಿನ ಕಂತಿಮಠ  ಪೂಜ್ಯರ  ನೇತೃತ್ವದಲ್ಲಿ  ಕೃಷ್ಣಾ ಶಾಸ್ತ್ತ್ರಿಗಳು ಪ್ರವಚನ ನೀಡಲಿದ್ದಾರೆ. ದಿನಾಂಕ 14-9-2011 ರಂದು ಶ್ರೀ ಮಠದ  ವತಿಯಿಂದ  ಸಾಮೂಹಿಕ  ಲಿಂಗದಿಕ್ಷಾ  ಕಾರ್ಯಕ್ರಮ ಇದ್ದು  ದಿನಾಂಕ: 15-9-2011 ರಂದು  ಬೆಳಿಗ್ಗೆ ಶ್ರೀ ಗುರು  ದಿಗಂಬರೇಶ್ವರ  ಹಾಗೂ ಲಿಂ. ಅಪ್ಪಗಳವರ ಶ್ರೀ ಗದ್ದುಗೆಗಳಿಗೆ  ರುದ್ರಾಭಿಷೇಕ ಸಹಸ್ರ  ಬಿಲ್ವಾರ್ಚನೆ  ಪಾದ ಪೂಜಾ ಸಮಾರಂಭ ನೆರವೇರುವದು  ನಂತರ  ಹಗಲು ನಾಲ್ಕು ಜಾವ ಆಶನಕ್ಕೆ ಕುದಿವರು  ಎಂಬ  ವಿಷಾದದ ಮೇಲೆ ಪ್ರವಚನ ನೆರವೇರಲಿದ್ದು, ನಂತರ  ಮಹಾ ಪ್ರಸಾದಗಳೊಂದಿಗೆ  ಕಾರ್ಯಕ್ರಮ ಮಂಗಲಗೊಳ್ಳುವದು  ಕಾರ್ಯದಲ್ಲಿ  ಸಕಲ ಸದ್ಭಕ್ತರು ಭಾಗವಹಿಸಿ  ಶ್ರೀ ಗುರುಗಳ ಪ್ರೀತಿಗೆ  ಪಾತ್ರರಾಗಲು  ಬಿನ್ನಹ .

–        ಶಿವಾನಂದ  ಶೆಲ್ಲಿಕೇರಿ

loading...

LEAVE A REPLY

Please enter your comment!
Please enter your name here