ಮಾರುಕಟ್ಟೆ ಗ್ರಾ.ಪಂ. ಉಪಾಧ್ಯಕ್ಷರಾಗಿ ಜಗದೀಶ

0
15
loading...

ಬೈಲಹೊಂಗಲ 24-ತಾಲೂಕಿನ ಮರಕಟ್ಟಿ ಗ್ರಾಮ ಪಂಚಾಯತ ಉಪಾಧ್ಯಕ್ಷ ಸ್ಥಾನಕ್ಕೆ ದಿ. 22 ರಂದು ನಡೆದ ಚುನಾವಣೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಘಟಕದ ತಾಲೂಕಾ ಅಧ್ಯಕ್ಷರಾಗಿದ್ದ ಜಗದೀಶ ನಾವಲಗಟ್ಟಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಮಾರುಕಟ್ಟೆ ಗ್ರಾ.ಪಂ. ಉಪಾಧ್ಯಕ್ಷ ಸ್ಥಾನಕ್ಕೆ ಚಂದ್ರಪ್ಪ ಗೋಡಗೇರಿ ರಾಜೀನಾಮೆ ನೀಡಿದ್ದರ ಹಿನ್ನೆಲೆಯಲ್ಲಿ ಈ ಚುನಾವಣೆ ನಡೆಯಿತು. ಮಾರುಕಟ್ಟೆ ಗ್ರಾ.ಪಂ. 19 ಸದಸ್ಯರನ್ನು ಹೊಂದಿದ್ದು, ಈ ಮೊದಲೇ ಉಪಾಧ್ಯಕ್ಷ ಸ್ಥಾನವನ್ನು ಅರ್ಧ ಅವಧಿಗೆ ಹೊಂದಾಣಿಕೆ ಮಾಡಿಕೊಂಡಿದ್ದರು. ಅದೇ ಪ್ರಕಾರ ನಡೆದು ಜಗದೀಶ ನಾವಲಗಟ್ಟಿ ಆಯ್ಕೆಯಾದರು. ಉಪಾಧ್ಯಕ್ಷ ಜಗದೀಶ ನಾವಲಗಟ್ಟಿ ಮಾತನಾಡಿ, ಮಾರುಕಟ್ಟೆ ಗ್ರಾ.ಪಂ. ವ್ಯಾಪ್ತಿಯ ಪ್ರದೇಶವನ್ನು ಅಭಿವೃದ್ದಿ ಮಾಡುವದಾಗಿ ತಿಳಿಸಿದರು. ಗ್ರಾ.ಪಂ. ಅಧ್ಯಕ್ಷ ಎಸ್.ಎಸ್. ಸಿಂಕದ, ರಾಜೂಗೌಡ ಪಾಟೀಲ, ಬಾಬುಸ್ವಾಮಿ ಗಣಿಕೊಪ್ಪ ಮುಂತಾದವರು ಮಾತನಾಡಿದರು.

loading...

LEAVE A REPLY

Please enter your comment!
Please enter your name here