ಮೆಟ್ರೌರೈಲು : ಉದ್ಘಾಟನೆಗೆ ಪ್ರಧಾನಿ ಇಲ್ಲ

0
16
loading...

ನವದೆಹಲಿ, ಸೆ.30: ಅದೇಕೋ ಏನೋ

ಬೆಂಗಳೂರು ಮೆಟ್ರೌ ರೈಲು ಉದ್ಘಾಟನೆಯ ಶುಭ

ಮುಹೂರ್ತ ಶುಭ ಗಳಿಗೆ ಕೂಡಿ ಬರುತ್ತಲೇ ಇಲ್ಲ.

ರಾಜ್ಯ ಸರ್ಕಾರ ಮೆಟ್ರೌ ರೈಲು ಯೋಜನೆಯನ್ನು

ಪ್ರಧಾನಿಯವರು ಅಮೃತ ಹಸ್ತದಿಂದ ಉದ್ಘಾಟನೆ

ಮಾಡಿಸಬೇಕೆಂಬ ಹಠಕ್ಕೆ ಬಿದ್ದಿದ್ದರೂ

ಪ್ರಯೋಜನವಾಗುತ್ತಿಲ್ಲ.

ಅದರೆ ಇದೀಗ ಪ್ರಧಾನಿಯವರು

ಉದ್ಘಾಟನೆಗೆ ಬರಲು ಸಮಯ ಇಲ್ಲ

ಎಂದು ಹೇಳಿ ಕೈ ತೊಳೆದುಕೊಂಡಿದ್ದಾರೆ.

ಹೀಗಾಗಿ ರಾಜ್ಯ ಸರ್ಕಾರ ಮೆಟ್ರೌ

ರೈಲು ಯೋಜನೆಯ ಉದ್ಘಾಟನೆಗೆ ಬೇರೆ ಮಾರ್ಗವನ್ನು ಹುಡುಕಬೇಕಾಗಿ

ಬಂದಿದೆ.

ಕೇಂದ್ರ ನಗರಾಭಿವೃದ್ದಿ ಸಚಿವ ಕಮಲ್ನಾಥ್ ಅವರಿಂದ ಉದ್ಘಾಟನೆ

ಮಾಡಿಸಲು ನಿರ್ಧಾರ ಮಾಡಲಾಗಿದೆ. ಅಕ್ಟೌಬರ್ ತಿಂಗಳಲ್ಲಿ ಮೇಟ್ರೌ ರೈಲು

ಉದ್ಘಾಟನೆ ನಡೆಯಲಿದೆ ಎಂದು ಇಂದು ಇಲ್ಲಿ ರಾಜ್ಯದ ಮುಖ್ಯಮಂತ್ರಿ

ಸದಾನಂದಗೌಡರು ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

ಸಮಯದ ಅಭಾವದಿಂದ ಬರಲು ಸಾಧ್ಯವಾಗುತ್ತಿಲ್ಲ ಎಂದು ಪ್ರಧಾನಿ

ಪತ್ರ ಬರೆದಿದ್ದಾರೆ. ಈ ಹಿನ್ನೆಲೆಯಲ್ಲಿ ಕೇಂದ್ರ ನಗರಾಭಿವೃದ್ದಿ ಸಚಿವರ ಕೈಯಲ್ಲಿ

ಉದ್ಘಾಟನೆ ಮಾಡಿಸಲು ತೀರ್ಮಾನ ಮಾಡಲಾಗಿದೆ. ಅದೇ ರೀತಿ ಮುಖ್ಯ

ಅತಿಥಿಯಾಗಿ ಕೇಂದ್ರ ರೈಲು ಸಚಿವರನ್ನು ಆಹ್ವಾನಿಸಲಾಗಿದೆ. ಅವರು ಅಕ್ಟೌಬರ್

17 ರಂದು ಬೆಂಗಳೂರಿಗೆ ಬರುವದಕ್ಕೆ ಸಮ್ಮತಿ ನೀಡಿದ್ದಾರೆ. ಹೆಚ್ಚುಕಡಿಮೆ ಅದೇ

ದಿನ ಕೇಂದ್ರ ನಗರಾಭಿವೃದ್ದಿ ಸಚಿವರನ್ನು ಬೆಂಗಳೂರಿಗೆ ಕರೆಯಿಸಿ ಉದ್ಘಾಟನೆ

ಮಾಡಬೇಕು ಎಂದು ನಿರ್ಧರಿಸಿದ್ದೇವೆ ಎಂದರು. ಇಂದು ನಾನು ಕಾನೂನು

ಸಚಿವ ಸುರೇಶ್ಕುಮಾರ್ ಅವರೊಂದಿಗೆ ಕಮಲನಾಥ ಅವರನ್ನು ಭೇಟಿ ಮಾಡಿ

ಮೆಟ್ರೌ ಯೋಜನೆ ಉದ್ಘಾಟನೆಗೆ ಬರುವಂತೆ ಆಹ್ವಾನ ನೀಡಿದ್ದೇನೆ ಎಂದು

ಅವರು ಹೇಳಿದರು.

loading...

LEAVE A REPLY

Please enter your comment!
Please enter your name here