ಯಡಿಯೂರಪ್ಪ-ಈಶ್ವರಪ್ಪ ಡಿಶುಂ ಡಿಶುಂ

0
10
loading...

 

ಬೆಂಗಳೂರು, ಸೆ. 16: ಪಕ್ಷದ ನಾಯಕತ್ವದ ವಿಚಾರವಾಗಿ ಮಾಜಿಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಾಗೂ ಪಕ್ಷದ ರಾಜ್ಯಾಧ್ಯಕ್ಷ ಕೆ.ಎಸ್. ಈಶ್ವರಪ್ಪ ಅವರ ನಡುವಿನ ಕಳೆದ ಬುಧವಾರ ಮುಖ್ಯಮಂತ್ರಿಯವರ ಅಧೀಕೃತ ನಿವಾಸ ಅನುಗ್ರಹದಲ್ಲಿ ಮುಖ್ಯಮಂತ್ರಿಗಳ ಸಮ್ಮುಖದಲ್ಲಿಯೂ ಜಂಗೀ ಕುಸ್ತಿ ನಡೆದಿರುವುದ ತಡವಾಗಿ ವರದಿಯಾಗಿದೆ.

ಇವರಿಬ್ಬರನ್ನು ಮುಖ್ಯಮಂತ್ರಿ ಸದಾನಂದಗೌಡ ಅವರೇ ಕಷ್ಟಪಟ್ಟು ಸಮಾಧಾನಪಡಿಸಿದ್ದಾರೆ. ಮಂಗಳವಾರ ಭಾಜಪ ಕಛೇರಿಯಲ್ಲಿ ಕೊಪ್ಪಳ ಚುನಾವಣಗೆ ಸಂಬಂಧಪಟ್ಟಂತೆ ರಾಜ್ಯಮಟ್ಟದ ಪದಾಧಿಕಾರಿಗಳ ಸಭೆ ನಡೆದಿತ್ತು. ಮಾರನೇ ದಿನ ಮುಖ್ಯಮಂತ್ರಿಯವರ ಅನುಗೃಹ ನಿವಾಸದಲ್ಲಿ ರಾತ್ರಿ ಮುಖ್ಯಮಂತ್ರಿ ಸದಾನಂದಗೌಡ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪಕ್ಷದ ರಾಜ್ಯಾಧ್ಯಕ್ಷ ಈಶ್ವರಪ್ಪ ಮೂವರು ಒಟ್ಟಿಗೆ ಸೇರಿ ಚರ್ಚೆ ಮಾಡುತ್ತಿದ್ದಾಗ ಈ ಜಗಳ ನಡೆದಿದೆ.

ಪಕ್ಷದ ಹೈಕಮಾಂಡ್ ಕಿವಿ ಕಚ್ಚಿ ನನ್ನನ್ನು ತುಳಿಯಲು ಪ್ರಯತ್ನಿಸುತ್ತಿದ್ದೀಯಾ, ನನ್ನಿಂದ ಭಾಜಪ ಇದೆ, ನನ್ನಿಂದಲೇ ಈ ಸರ್ಕಾರ ಇದೆ ಎಂದು ಯಡಿಯೂರಪ್ಪ ಏಕ ವಚನದಲ್ಲಿ ಖಾರವಾಗಿ ಈಶ್ವರಪ್ಪನವರ ಮೇಲೆ ಮಾತಿನ ದಾಳಿಯನ್ನು ಮಾಡಿದಾಗ ಅದೇ ರೀತಿ ಏಕ ವಚನದಲ್ಲಿ ಅಷ್ಟೇ ಖಾರವಾಗಿ ಈಶ್ವರಪ್ಪ ತಿರುಗೇಟು ನೀಡಿದ್ದಾರೆ.

ನೀನು ಭಾಜಪಕ್ಕೆ ಅನಿವಾರ್ಯವೆಂದು ತಿಳಿದುಕೊಂಡಿರಬಹುದು. ಆದರೆ ಬೇಕಾದಷ್ಟು ನಾಯಕರಿದ್ದಾರೆ. ನಿನ್ನಿಂದಲೇ ಕೋಳಿ ಕೂಗುವದಿಲ್ಲ. ನಿನ್ನಿಂದಲೇ ಬೆಳಕಾಗುವದಿಲ್ಲ ಎಂದು ಹೇಳಿದ್ದಾರೆ. ಒಟ್ಟಾರೆ ಕೊಪ್ಪಳ ಚುನಾವಣೆ ಹಾಗೂ ಚುನಾವಣೆಗೆ ಬೇಕಾದ ಹಣಕಾಸು ವ್ಯವಸ್ಥೆ ನಾಯಕತ್ವದ ವಿಷಯ ಮುಖ್ಯಮಂತ್ರಿ ಮನೆಯಲ್ಲಿ ಇಬ್ಬರು ಹಿರಿಯ ನಾಯಕರ ನಡುವೆ ಭಾರಿ ಜಟಾಪಟಿಗೆ ಕಾರಣವಾಗಿದೆ. ಕಡೆಗೆ ಈಶ್ವರಪ್ಪ ಯಡಿಯೂರಪ್ಪ ಅವರ ನಡುವಿನ ಈ ಜಗಳವನ್ನು ಮುಖ್ಯಮಂತ್ರಿ ಸದಾನಂದಗೌಡರೇ ಬಿಡಿಸಬೇಕಾದ ಅನಿವಾರ್ಯತೆ ಉಂಟಾಯಿತು. ಇದ್ದ ಮೂವರಲ್ಲಿ ಇಬ್ಬರು ಜಗಳವಾಡುತ್ತಿರುವಾಗ ಉಳಿದ ವ್ಯಕ್ತಿ ಮುಖ್ಯಮಂತ್ರಿ ಇಬ್ಬರೆ ಆಗಿದ್ದರು. ಹೀಗಾಗಿ ಮೊನ್ನೆ ಈ ಘಟನೆಯಾದರೂ ಅದು ಇದುವರೆಗೆ ಬಹಿರಂಗಗೊಂಡಿರಲಿಲ್ಲ. ಈಗ ಅದು ಗುಸು ಗುಸು, ಪಿಸುಪಿಸು ಆಗಿ ಹೊರಗೆ ಬಂದಿದೆ.

loading...

LEAVE A REPLY

Please enter your comment!
Please enter your name here