ರಥದ ಮೇಲೆ ಹೆಲಿಕ್ಯಾಪರನಿಂದಾ ಮೈಸೂರಿನಲ್ಲಿ ಪುಷ್ಪವೃಷ್ಟಿ

0
16
loading...

ಅಥಣಿ, 25- ಅಖಿಲ ಕರ್ನಾಟಕ ವಿಶ್ವಕರ್ಮ ಮಹಾಸಭೆ ಬೆಂಗಳೂರು ವತಿಯಿಂದ 3ನೇ ರಾಜ್ಯ ಮಟ್ಟದ  ವಿಶ್ವಕರ್ಮ  ಜಯಂತ್ಯೌತ್ಸವ  20-11 ,ಐಸೂರಿನಲ್ಲಿ ಏಪಧಡಿಸಲಾಗಿತ್ತು. ಅದಕ್ಕೂ ಪೂರ್ವ 15 ದಿನ ಮುಂಚಿತವಾಗಿ  ಸಮ್ಮೇಳನಕ್ಕಾಗಿ  ಕುಲಬಾಂಧವರನ್ನು ಒಂದೆಡೆ ಸೇರಿಸಲು, ಜನಜಾಗೃತಿ ರಥವನ್ನು ಪ್ರತಿ ಜಿಲ್ಲೆಯಿಂದ  ಆ ಜಿಲ್ಲೆಯಲ್ಲಿ ಸಂಚರಿಸಿ  ಪ್ರತಿ ತಾಲೂಕಿನಲ್ಲಿ ಸುತ್ತಾಡಿ ಕೊನೆಗೆ ಮಥಸೂರ ಸೇರಲು  ಯೋಜನೆ ರೂಪಿಸಲಾಗಿತ್ತು.

ರಾಜ್ಯಾಧ್ಯಕ್ಷ ಕೆ.ಪಿ. ನಂಜುಂಡಿಯವರ ಆಶಯದಂತೆ ಬೆಳಗಾವಿ ಜಲ್ಲಾ ಅಧ್ಯಕ್ಷ ಭೀಮರಾವ ಬಡಿಗೇರವರ ನೇತೃತ್ವದಲ್ಲಿ ಅಥಣಿ ರಾಯಬಾಗ, ಚಿಕ್ಕೌಡಿ ಹುಕ್ಕೇರಿ ಗೋಕಾಕ ರಾಮದುರ್ಗ  ಬೈಲಹೊಂಗಲ  ಸವದತ್ತಿ  ಬೆಳಗಾವಿ  ಹಾಗೂ ಖನಾಪೂರ  ಸುತ್ತಾಡಿ  ಚೆನ್ನಮ್ಮನ ಕಿತ್ತೂರ ಮಾರ್ಗವಾಗಿ  ಮೈಸೂರು ಸೇರಿಕೊಂಡಿತು.

ದಿ. 17 ರಂದು ಮೈಸೂರಿನಲ್ಲಿ  ಏರ್ಪಡಿಸಿದ್ದ  ರಾಜ್ಯ  ರಾಜ್ಯ ಮಟ್ಟದ  ಭವ್ಯ ಮೆರವಣಿಗೆಯಲ್ಲಿ ಶಿಸ್ತು ಸರಳತೆ ಸಂಘಟಣೆಯ ಮೂಲಕ ರಥಸಾಗಿದಾಗ ಎಲ್ಲ ಜಿಲ್ಲೆಗಳಲ್ಲಿ ಬೆಳಗಾವಿ ಜಿಲ್ಲೆಯ  ರಥ ಪ್ರಥಮ ಸ್ಥಾನದಲ್ಲಿತ್ತು.  ಹೀಗಾಗಿ ಹೆಲಿಕ್ಯಾಪ್ಟರ ಮೂಲಕ  ಅಥಣಿಯ ಪ್ರತಿನಿಧಿಗಳು ರಥದೊಂದಿಗೆ  ಇದ್ದ ಸ್ಥಳದಲ್ಲಿ  ಮೂರು ಬಾರಿ ಪುಷ್ಪವೃಷ್ಟಿ  ಮಾಡಿಕೊಂಡು ಮೆಚ್ಚುಗೆ ಪಡೆಯಿತು.

ದೂರವಾಣಿ  ಇಲಾಖೆಯ ನಿವೃತ್ತ ಅಧಿಕಾರಿ  ಬಳವಂತರಾವ  ಪತ್ತಾರ ದಂಪತಿಗಳು  ಹಳ್ಳಿಗಾಡಿನ  ಧೋತರ ನೆಹರು ಅಂಗಿ ರುಮಾಲು  ಸುತ್ತಿಕೊಂಡರೆ ಅರ್ಧಾಂಗಿದೆ ಕಲಾವತಿ ಇಲಕಲ್ ಸೀರೆಯನ್ನುಟ್ಟು ಮೂಗಿನಲ್ಲಿ  ನತ್ತ ಧರಿಸಿ ಈರ್ವರು  ಕೈಯಲ್ಲಿ  ವಿಶ್ವ ಕರ್ಮ ಧ್ವಜ  ಹಿಡಿದು ನೂರಾರು  ಜನರ ಸ್ತ್ತ್ರೀ ಪುರುಷರು ಇಬ್ಬಿಬ್ಬರಂತೆ ಸಾಲಾಗಿ  ರಥದ ಮುಂದೆ ಹೊರಟಾಗ ಬೇರೆ ಜಿಲ್ಲೆಯವರು  ಹಾಗೂ ಸ್ಥಾನಿಕ  ಮೈಸೂರಿನವರು ಅಥಣಿಯವರ  ಸಾಲಿನಲ್ಲಿ ಸೇರಿಕೊಂಡಾಗ ಮೆರವಣಿಗೆಯ ಮುಖ್ಯಸ್ಥಾನ  ಪಡೆಯಿತು. ಎರಡು ಆನೆಗಳು ಸ್ವಾಗತಿಸಿದ ದೃಶ್ಯ ರಮಣೀಯವಾಗಿತ್ತು.

ಈ ಶಿಸ್ತು  ಸಂಘಟನೆ  ಅಲಂಕೃತರಥವನ್ನು ಕಂಡು ಮೈಸೂರಿನ ಕುಂಭ ಹೊತ್ತ ಸುಮಂಗಲೆಯರು ವಾದ್ಯವೃಂದದವರು  ಸೇವಾ ಕಾರ್ಯ ಕರ್ತರೂ  ಸಹ ಸೇರಿಕೊಂಡು  ಇನ್ನಷ್ಟು  ಮೆರಗು ಕೊಟ್ಟಿತ್ತು. ಎಲ್ಲ ದೂರದೃಶ್ಯ  ಮಾದ್ಯಮದವರೂ  ಸಹ ಮುಖ್ಯ ಮುಂದಿನ ಮೆರವಣಿಗೆ ಬಿಟ್ಟು ಈ ಅಥಣಿಯ ರಥದ ಮುಂದಿನ ದೃಶ್ಯಾವಳಿ  ಸೆರೆ ಹಿಡಿಯುತ್ತಿದ್ದರು.

ವಿಶ್ವಕರ್ಮದ ಈ ಜಯಂತ್ಯೌತ್ಸ ವದಲ್ಲಿ ಜಾತಿ ಮತ ಪಂಥ ಬೇಧ ಮರೆತು  ಇವರಿಗೆ ಸಹಕಾರ ನೀಡಿ ಪ್ರೌತ್ಸಾಹಿಸು ತ್ತಿರುವರಲ್ಲಿ ಅಥಣಿಯ  ಸೀನೀಲ ಬುಲಬುಲೆ ಶಿವಪ್ಪ ಕೋರಿ, ಸಿದ್ದು ಸಂಕ ಮುರಿಗೆಪ್ಪಾ ಮೋಟಗಿ  ಯಮುನಾ ಬಾಯಿ ವಡೆಯರ  ಶಿವಪುತ್ರ ಯಾದ ವಾಡ, ಗೋಪಾಲರಾವ  ಪಾಟೀಲ  ಸುಭಾಷ ಕಾಗತಿ ರಾಜು ಮಮದಾ ಪೂರ, ಅಧ್ಯಕ್ಷ ಭೀಮರಾವ  ಬಡಿಗೇರ ಪ್ರಭಾಕರ ಪೋತದಾರ, ರಾಜು ಬಡಿಗೇರ , ಸುರೇಶ ಬಡಿಗೇರ  ಈರನ್ಣ ಬಡಿಗೇರ  ಈರಣ್ಣ ಬಡಿಗೇರ, ಎಸ್.ಆರ್. ಕಮ್ಮಾರ,  ಸುರೇಶ ಬಡಿಗೇರ,  ಈರಣ್ಣ ಬಡಿಗೇರ  ಎಸ್. ಆರ್. ಕಮ್ಮಾರ  ಬಳವಂತರಾವ  ಪತ್ತಾರ, ಬಾಳಕೃಷ್ಣ ಪೋತದಾರ. ವಿಶ್ವನಾಥ ಬಡಿಗೇರ, ಗಂಗಾಧರ ಕಂಬಾರ, ರಾಮ ಪಳಾನಕರ, ಜಿ.ಬಿ. ಕಮ್ಮಾರ, ಶೇಖರ, ಸಂತೋಷ ಚನ್ನಪ್ಪಣ್ಣಾ  ಸಿದರಾಯ ಬಡಿಗೇರ ಹಾಗೂ ಸಮಸ್ತ  ಅಥಣಿ ಕುಲಬಾಂಧವರಲ್ಲದೆ ಪರಿಸರದ  ಶಿರಹಟ್ಟಿ ದೇಸಾರಹಟ್ಟಿ ಮೋಳೆ ಕೋಕಟನೂರ ನಂದಗಾಂವ ಬಿಳ್ಳೂರು  ಯಲಹಡಲಗಿ, ಬಳವಾಡ, ಹಾಗೂ ವಿವಿಧ ಗ್ರಾಮದ ಕುಲಬಾಂಧವರು  ಮೆರವಣಿಗೆಯಲ್ಲಿ ಪಾಲುಗೊಂಡಿದ್ದರು.

ಸುಮಾರು 7 ಕಿ.ಮಿ. ದೂರ ಲಕ್ಷಾವಧಿ ವಿಶ್ವಕರ್ಮಿಗಳು ಮೈಸೂರು ನಗರದ ಪ್ರಮುಖ ಬೀದಿಗಳಲ್ಲಿ ಭವ್ಯ  ಮೆರವಣಿಗೆಯಲ್ಲಿ ಸುತ್ತಾಡಿ ಕೊನೆಗೆ ಮೈಸೂರಿನ ಮಹಾರಾಜ ಕಾಲೇಜ ಮೈದಾನದ ಆವರಣದಲ್ಲಿ 1.5 ಲಕ್ಷ ವಿಶ್ವಕರ್ಮಿಗಳು ಸೇರಿದಲ್ಲಿ ಜಯಂತ್ಯೌತ್ಸವ ಅದ್ದೂರಿಯಿಂದ ಆಚರಿಸಲಾಯಿತು.

loading...

LEAVE A REPLY

Please enter your comment!
Please enter your name here