ರಾಜಕಾರಣಿಗಳು ರಾಜಕೀಯ ಸಿದ್ದಾಂತವನ್ನು ಅಳವಡಿಸಿಕೊಳ್ಳುವುದು ಮುಖ್ಯ

0
116
loading...

ಧಾರವಾಡ 27-ಶಿವಿಷಯ ಪರಿಣಿತರು ಹಾಗೂ ನತಿ ನರೂಪಣಕಾರರ ಮಧ್ಯೆ ಅಂತರ ಕಂಡು ಬರುತ್ತಿದೆ ಇವರ ಮಧ್ಯೆ ವಿಷಯ ವಿನಮಯ ಅಗತ್ಯ. ಪ್ರಜಾಪ್ರಭುತ್ವವು ಜನರನ್ನು ನಸ್ವಾರ್ಥಿಗಳನ್ನಾಗಿಸಬೇಕು ಹಾಗೂ ತ್ಯಾಗ ಮನೋಭಾವ ಬೆಳೆಸಬೇಕು. ರಾಜ ಕಾರಣಿಗಳು ಕೇವಲ ಉದ್ಘಾಟನೆಗಳಿಗೆ ಹೋಗದೆ ಜನರೊಂದಿಗೆ ತಮ್ಮ ರಾಜಕೀಯ ಸಿದ್ದಾಂತವನ್ನು ಮುಕ್ತವಾಗಿ ಚರ್ಚಿಸಬೇಕುಳಿಳಿ ಎಂದು ರಾಣಿಚೆನ್ನಮ್ಮ ವಿಶ್ವವಿದ್ಯಾಲಯದ ಕುಲಸಚಿವರಾದ ಡಾ. ಎಸ್. ಎಸ್. ಪಟಗುಂದಿ ಅಬಿ ಪ್ರಾಯಪಟ್ಟರು.

ಕರ್ನಾಟಕ ವಿದ್ಯಾವರ್ಧಕ  ಸಂಘದ ಯುವಜನ ಮಂಟಪದ ಆಶ್ರಯದಲ್ಲಿ ಏರ್ಪಡಿಸಿದ್ದ  ಶಿರಾಜಕೀಯ ಸಿದ್ದಾಂತದ ಸಮಕಾಲೀನ ರಾಜಕೀಯ ಪ್ರತಿಸ್ಪಂದನೆಳಿಳಿ ವಿಚಾರಗೋಷ್ಠಿ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಭಾಗವಹಿಸಿ ಮಾತನಾಡುತ್ತಿದ್ದರು.

ವಿಚಾರಗೋಷ್ಠಿ ಉದ್ಘಾಟಿಸಿ ಮಾತನಾಡಿದ ರಾಘವೇಂದ್ರ ಸೊಂಡೂರ ಶಿಪ್ರಸ್ತುತ ರಾಜಕೀಯ ಹಾಗೂ  ರಾಜಕೀಯ ಸಿದ್ದಾಂತಗಳಿಗೂ ಅಂತರವಿದೆ, ರಾಜಕೀಯವೇ ಬೇರೆ, ಸಿದ್ದಾಂತವೇ ಬೇರೆ. ರಾಜಕಾರಣದಲ್ಲಿ ರಾಜಕೀಯ ಸಿದ್ದಾಂತ ಗೊಂದಲಮಯವಾಗುತ್ತಿದೆಳಿಳಿ ಎಂದು ವಿಷಾದ ವ್ಯಕ್ತಪಡಿಸಿದರು.

ಅತಿಥಿಗಳಾಗಿ ಆಗಮಿಸಿದ ಪ್ರೊ. ಕೆ. ಎಸ್. ಶರ್ಮಾ ಮಾತನಾಡಿ, ಗುಲಾಮಗಿರಿ-ಉಳಿಗಮಾನ್ಯ- ಬಂಡವಾಳಶಾಹಿ ವ್ಯವಸ್ಥೆ ಇಂದು ಶೋಷಣೆ ಮಾಡುವ ವ್ಯವಸ್ಥೆ ಯಾಗಿಯೇ ಉಳಿದಿವೆ. ಶ್ರೀಸಾಮಾನ್ಯ ನೆಮ್ಮದಿ ಯಿಂದಿರ ಬೇಕಾದರೆ ರಾಜಕೀಯ ಸಿದ್ದಾಂತ ಬೇಕಾಗುತ್ತದೆ. ಶೋಷಿತರನ್ನು ವಿಮುಕ್ತಿಗೊಳಿಸುವ ರಾಜಕೀಯ ಸಿದ್ದಾಂತ ಅವಶ್ಯವಿದೆ. ಜಾಗತೀಕರಣ, ಆಧುನಕರಣ, ಉದಾರೀಕರಣ ನತಿಗಳು ದೇಶವನ್ನು ಮಾರಟಕ್ಕೆ ಇಟ್ಟಿವೆ ಎಂಬ ಅಭಿಪ್ರಾಯ ಪಟ್ಟರು.

ಇನ್ನೊರ್ವ ಅತಿಥಿಗಳಾಗಿ ಆಗಮಿಸಿದ ಮಲ್ಲಿಕಾರ್ಜುನ ಗುಮ್ಮಗೋಳ ಮಾತನಾಡಿ, ಶಿಪ್ರಜಾಪ್ರಭುತ್ವ ಪ್ರಬಲವಾಗಿ ಮುನ್ನಡೆಯುತ್ತಿದೆ. ಆದರೆ ಭಾರತೀಯ ಪ್ರಜಾಪ್ರಭುತ್ವ ಅಮೇರಿಕ ಪ್ರಸ್ತುತಪಡಿಸಿದ ಬಂಡವಾಳಶಾಹಿಗಳ ಹಿಡಿತದಲ್ಲಿದೆ. ನಮ್ಮ ಸಮಾಜವಾದಿ ತತ್ವಗಳು ಎಲ್ಲಿಗೆ ಹೋದವು ? ಈ ದೇಶದಲ್ಲಿ ಸಾವು ಮತ್ತು ಕರ ಅನವಾರ್ಯ ಎಂಬ ಪರಿಸ್ಥಿತಿ ಬಂದೊದಗಿದೆಳಿಳಿ ಎಂದು ಹೇಳಿದರು.

ಅಧ್ಯಕ್ಷತೆ ವಹಿಸಿ ಮಾತನಾಡಿ, ಡಾ. ರಾಘವೇಂದ್ರರಾವ್ ಶಿರಾಜಕಾರಣದಲ್ಲಿ ಸ್ವಾರ್ಥ ಮತ್ತು ನಸ್ವಾರ್ಥ ಎರಡೂ ಇದೆ. ಲೋಕನತಿ ಮತ್ತು ರಾಜನತಿ ಎಂಬ ಎರಡು ಹೆಸರಿನಲ್ಲಿ ರಾಜಕೀಯ ನಡೆಯುತ್ತಿದೆ ಆದರೆ ಆದರ್ಶಯುತ ರಾಜಕೀಯ ದೇಶವನ್ನು  ಮುನ್ನಡೆಸಬಹುದುಳಿಳಿ ಎಂದು ಅಭಪ್ರಾಯಪಟ್ಟರು.

ಯುವಜನ ಮಂಟಪದ ಸಂಚಾಲಕ ಗುರು ಹಿರೇಮಠ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಂಘದ ಪ್ರಧಾನ ಕಾರ್ಯದರ್ಶಿ ಶಂಕರ ಹಲಗತ್ತಿ, ಮೋಹನ ನಾಗಮ್ಮನವರ, ಸಿದ್ದಲಿಂಗ ದೇಸಾಯಿ, ಡಾ. ಮಹಾದೇವಪ್ಪ ದಳಪತಿ, ಡಾ. ಎಸ್. ಎಸ್. ಹುಲ್ಲನ್ನವರ ಮುಂತಾದವರು ಉಪಸ್ಥಿತರಿದ್ದರು.

ಲಿಂಗರಾಜ ರಾಮಾಪೂರ ಕಾರ್ಯಕ್ರಮ ನರೂಪಿಸಿದರು. ಹುಬ್ಬಳ್ಳಿ ಎಸ್. ಎಸ್.ಕೆ. ಕಾಲೇಜಿನ ವಿದ್ಯಾರ್ಥಿನಯರು ಪ್ರಾರ್ಥಿಸಿದರು. ಹನುಮಂತ ಸಂಗಟಿ ವಂದಿಸಿದರು.

loading...

LEAVE A REPLY

Please enter your comment!
Please enter your name here