ರಾಜ್ಯ ವಕೀಲರ ಪರಿಷತ್ ಅಧ್ಯಕ್ಷರಿಗೆ ಸನ್ಮಾನ

0
13
loading...

ಬೆಳಗಾವಿ 18- ಬೆಳಗಾವಿ ನ್ಯಾಯವಾದಿಗಳ ಸಂಘದಲ್ಲಿ ಎ.ಎಮ್. ಮಗದುಮ್ಮ ಅವರು ನೂತನವಾಗಿ ಕರ್ನಾಟಕ ರಾಜ್ಯ ವಕೀಲ ಪರಿಷತ್ತಿಗೆ ಚೇರಮನ್ರಾಗಿ ಆಯ್ಕೆಯಾದ್ದರಿಂದ ಇತ್ತೀಚೆಗೆ ಬೆಳಗಾವಿ ನ್ಯಾಯವಾದಿಗಳ ಸಂಘದಿಂದ ಮಗದುಮ್ಮ ಅವರಿಗೆ ಸನ್ಮಾನ ಸಮಾರಂಭವನ್ನು ಏರ್ಪಡಿಸಲಾಗಿತ್ತು.

ಸನ್ಮಾನ ಸ್ವೀಕರಿಸಿ ವಕೀಲರ ಪರವಾಗಿ ಮಾತನಾಡಿ ತಮ್ಮ ಕಾರ್ಯದಲ್ಲಿ ನೂತನವಾದ ಸೌಲಭ್ಯ ಗಳನ್ನು ಹಾಗೂ ವಕೀಲರ ಕಲ್ಯಾಣ ನಿಧಿಯ ಸೌಲಭ್ಯಗಳ ಬಗ್ಗೆ ಹೆಚ್ಚಿನ ಗಮನ ಹರಿಸಿ ಕಾರ್ಯ ರೂಪಕ್ಕೆ ತರುವುದಾಗಿ ಭರವಸೆ ನೀಡಿದರು.

ಸಭೆಯಲ್ಲಿ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಎಮ್.ಎಸ್. ಬಾಲಕೃಷ್ಣ, ಬೆಳಗಾವಿ ವಕೀಲರ ಸಂಘದ ಅಧ್ಯಕ್ಷ ಎಸ್.ಎಸ್. ಕಿವಡಸಣ್ಣವರ ಹಾಗೂ ಕಾರ್ಯದರ್ಶಿ ಆರ್.ಎ. ಚೌಗಲೆ, ಉಪಾಧ್ಯಕ್ಷೆ ನೀತಾ ಪೋತದಾರ ಹಾಗೂ ಹಿರಿಯ ಮತ್ತು ಕಿರಿಯ ವಕೀಲರು ಪಾಲ್ಗೊಂಡಿದ್ದರು.

loading...

LEAVE A REPLY

Please enter your comment!
Please enter your name here