ರೆಡ್ಡಿ ಕೋಟೆಗೆ ಲಗ್ಗೆ

0
10
loading...

ಬಳ್ಳಾರಿಯ ಗಣಿ ದೊರೆ  ಜರ್ನಾಧನ ರೆಡ್ಡಿಯವರು ಕಟ್ಟಿಕೊಂಡಿದ್ದ ಗಣಿ ಕೋಟೆಗೆ ಸಿಬಿಐ ಅಧಿಕಾರಿಗಳು ಲಗ್ಗೆ ಹಾಕಿ ಅವರ ಬಾಯಿಯಿಂದ ಗಣಿಗಾರಿಕೆಗೆ ಸಂಬಂಧ ಪಟ್ಟ ವಿವರಗಳನ್ನು ಹೆಕ್ಕಿ ತೆಗೆಯುತ್ತಿದ್ದಾರೆ. ಸಿಬಿಐ ವಿಶೇಷ ನ್ಯಾಯಾಲಯದಿಂದ ಆರು ದಿನಗಳ ಕಾಲ ರೆಡ್ಡಿಗಳ ವಿಚಾರಣೆ ಮಾಡಲು ಅಧಿಕೃತ ಅನುಮತಿ ಪಡೆದ ಸಿಬಿಐ ಅಧಿಕಾರಿಗಳು ಬುಧವಾರ  ಮುಂಜಾನೆ 7-30 ರಿಂದಲೇ ಜನಾರ್ಧನ ರೆಡ್ಡಿ ಹಾಗೂ ಶ್ರೀನಿವಾಸ ರೆಡ್ಡಿ ಅವರಿಗೆ ಪ್ರಶ್ನೆಗಳ ಮೇಲೆ ಪ್ರಶ್ನೆ ಹಾಕಿ ಅವರಿಬ್ಬರನ್ನು ಸುಸ್ತು ಹೊಡೆಸಿದ್ದಾರೆ. ನೀವು ಉತ್ಪಾದನೆ ಮಾಡಿದ ಕಬ್ಬಿಣದ ಅದಿರನ್ನು ಯಾವಾ ಯಾವ  ಬಂಧರ ಮೂಲಕ ಯಾವ ಯಾವ ದೇಶಕ್ಕೆ ಕಳಿಸಿರುವಿರಿ ಎಷ್ಟು ಪ್ರಮಾಣದಲ್ಲಿ ಕಳಿಸಿರುವಿರಿ ಎಂಬ ಎಲ್ಲ ವಿವರಗಳನ್ನು ಸಿಬಿಐ ಅಧಿಕಾರಿಗಳು ಉಭಯ ರೆಡ್ಡಿಗಳ ಬಾಯಿಯಿಂದ ಕೇಳಿ ಪಡೆಯ ತೊಡಗಿದ್ದಾರೆ.  ಈ ಮೂಲಕ ಅವರ ಗಣಿಗಾರಿಕೆಯ ಬಗ್ಗೆ ಎಲ್ಲ ರೀತಿಯ ಸಮಗ್ರ ಮಾಹಿತಿಯನ್ನು ಸಂಗ್ರಹಿಸುವುದು ಅವರ ಉದ್ದೇಶವಾಗಿದೆ.  ಜೊತೆಗೆ ಜನಾರ್ಧನ ರೆಡ್ಡಿ ಸೋದರರಾದ ಕರುಣಾಕರ ರೆಡ್ಡಿ  ಹಾಗೂ ಸೋಮಶೇಖರ ರೆಡ್ಡಿ ಅವರಿಗೆ ನೋಟಿಸು ಜಾರಿ ಮಾಡಿರುವ ಸಿಬಿಐ ಅಧಿಕಾರಿಗಳು ತಮ್ಮ ಮುಂದೆ ಹಾಜರಾಗಿ ಹೇಳಿಕೆ ನೀಡುವಂತೆ ಕೇಳಿದ್ದಾರೆ. ಅಲ್ಲದೆ ಜನಾರ್ಧನ ರೆಡ್ಡಿ ತಮ್ಮ ಪತ್ನಿಯ ಹೆಸರಿನಲ್ಲಿ ಕೆಲವು ವ್ಯವಹಾರ ನಡೆಸುತ್ತಿರುವುದು ಸಿಬಿಐ ಅಧಿಕಾರಿಗಳಿಗೆ ಗೊತ್ತಾಗಿದ್ದು ಆ ಬಗ್ಗೆ ಜನಾರ್ಧನ ರೆಡ್ಡಿ ಪತ್ನಿಯನ್ನು ಸಹ ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇದೆ. ಜೊತೆಗೆ ರೆಡ್ಡಿಗಳ ಜೊತೆಗೆ ಆಪ್ತರಾಗಿರುವ ಜನರ ಮತ್ತು ಅಧಿಕಾರಿಗಳನ್ನು ಸಹ ವಿಚಾರಣೆಗೆ ಒಳಪಡಿಸುವ ಸಾಧ್ಯತೆ ಇರುವುದರಿಂದ ಅವರೆಲ್ಲ ಈಗ ಆತಂಕದಲ್ಲಿ ಸಿಲುಕಿದ್ದಾರೆ. ಈ ವಿಚಾರಣೆಯಿಂದ ತಪ್ಪಿಸಿಕೊಳ್ಳಲು ಯಾವ ಮಾರ್ಗವನ್ನು ಹಿಡಿಯಬೇಕು ಎಂಬ ಆಲೋಚನೆಯನ್ನು ಅವರು ಈಗ ತೊಡಗಿದ್ದಾರೆ, ಜೊತೆಗೆ ಓಎಳಸಿ ಕಂಪನಿಯ ನಿರ್ದೇಶಕ ಸ್ಥಾನದಲ್ಲಿ ಇರುವ ಶ್ರೀ ರಾಮಲು ಸಹ ವಿಚಾರಣಾ ಬೀತಿಯನ್ನು  ಎದುರಿಸುತ್ತಿದ್ದಾರೆ.

ಈಗಾಗಲೇ ಸಿಬಿಐ ಅಧಿಕಾರಿಗಳು ರೆಡ್ಡಿ ಗಣಿಗಾರಿಕೆಯ ವ್ಯವಹಾರಕ್ಕೆ ಸಂಬಂಧ ಪಟ್ಟಂತೆ 1530 ದಾಖಲೆಗಳನ್ನು ವಶಪಡಿಸಿಕೊಂಡು ಪರೀಶೀಲನೆ ಮಾಡತೊಡಗಿದ್ದಾರೆ ನಾಂಪಳ್ಳಿಯಲ್ಲಿರುವ  ಸಿಬಿಐ ವಿಶೇಷ ನ್ಯಾಯಾಲಯ ಈ  ಇಬ್ಬರು ರೆಡ್ಡಿಗಳನ್ನು ಸಿಬಿಐ ಅಧಿಕಾರಿಗಳ ವಿಚರಣೆಗಾಗಿ ಇದೇ 19 ರ ವರೆಗೆ  ಪ್ಪಿಸಿದ್ದು ಅಷ್ಟರೊಳಗಾಗಿ ಸಿಬಿಐ ಅಧಿಕಾರಿಗಳು ಪೂರ್ತಿ ಮಾಡಬೇಕಾಗಿ ರುವುದರಿಂದ  ಸಿಬಿಐ ಅಧಿಕಾರಿಗಳು ತ್ವರಿತವಾಗಿ ತನಿಖೆಯನ್ನು ನಡೆಸತೊಡಗಿ ದ್ದಾರೆ. 19 ರಂದು ಉಭಯ ರೆಡ್ಡಿಗಳನ್ನು ಮತ್ತೆ ನ್ಯಾಯಾಲಯಕ್ಕೆ ಒಪ್ಪಿಸಬೇಕಾಗಿದ್ದು ತನಿಖೆ ಪೂರ್ಣಗೊಳ್ಳದೆ ಹೋದರೆ ನ್ಯಾಯಾಲಯಕ್ಕೆ ಮತ್ತೆ ಸಮಯ ವಿಸ್ತರಿಸಲು ಕೇಳಿಕೊಳ್ಳಬೇಕಾಗುತ್ತದೆ.ಆದ್ದರಿಂದ  ನ್ಯಾಯಾಲಯ ಮತ್ತೆ ಸಮಯವನ್ನು  ನೀಡುವುದೇ ಅಥವಾ ಇಲ್ಲವೇ ಎಂಬುದು ಅನುಮಾನಕ್ಕೆ ಕಾರಣವಾಗಿರುವುದರಿಂದ ಸಾಧ್ಯವಾದಷ್ಟು ಮಟ್ಟಿಗೆ  ಈಗ ಇರುವ ಸಮಯದಲ್ಲಿಯೇ ಎಲ್ಲ ವಿವರಗಳನ್ನು ಸಾಧ್ಯವಾದ ಮಟ್ಟಿಗೆ ಸಂಗ್ರಹಿಸುವ  ಸಿಬಿಐ ಅಧಿಕಾರಿಗಳು ಮುಂದಾಗಿದ್ದಾರೆ.  ಹೀಗಾಗಿ ಅನೇಕ ಗಂಟೆಗಳ ಕಾಲ ಅವರನ್ನು ಸಮಗ್ರ  ವಿಚಾರಣೆಗೆ ಒಳಪಡಿಸುವ ಕಾರ್ಯ ನಡೆಯತೊಡಗಿದೆ.

ಎಷ್ಟು ಅದಿರನ್ನು ಇಲ್ಲುವರೆಗೆ ವಿದೇಶಗಳಿಗೆ ರಫ್ತು ಮಾಡಲಾಗಿದೆ.  ಯಾವ ಕಂಪನಿಗಳಿಗೆ ಅವುಗಳನ್ನು ನೀಡಲಾಗಿದೆ.  ಹಾಗೂ  ಎಷ್ಟು ಆದಾಯವನ್ನು ಪಡೆಯಲಾಗಿದೆ. ಬಂದ ಆದಾಯವನ್ನು ಯಾವ ಯಾವ  ಉದ್ಯೌಗದಲ್ಲಿ  ತೊಡಗಿಸಲಾಗಿದೆ.  ಸರಕಾರಕ್ಕೆ ಎಷ್ಟು ಕರವನ್ನು ನೀಡಲಾಗಿದೆ. ಈ ಎಲ್ಲ ವಿವರಗಳನ್ನು ಸಿಬಿಐ ಅಧಿಕಾರಿಗಳು ಉಭಯ ರೆಡ್ಡಿಗಳ ಮೂಲಕ  ಸಂಗ್ರಹಿಸತೊಡಗಿದ್ದಾರೆ. ಆದರೆ ರೆಡ್ಡಿಗಳ ಜೊತೆಗೆ ವ್ಯವಹಾರವನ್ನು ಇಟ್ಟುಕೊಂಡವರು  ಈಗ ತೀವ್ರ ಆಘಾತಕ್ಕೆ  ಒಳಗಾಗಿದ್ದು ತಮ್ಮ ಮೇಲೆ ಸಿಬಿಐ ಅಧಿಕಾರಿಗಳ ಕಾಕದೃಷ್ಟಿ ಬೀಳುವುದರಿಂದ  ತಪ್ಪಿಸಿಕೊಳ್ಳುವದು ಹೇಗೆ ಎಂಬ ಆಲೋಚನೆಯಲ್ಲಿ ನಿರತರಾಗಿದ್ದಾರೆ. ಹೀಗಾಗಿ ಅಧಿಕಾರ ಮತ್ತು ಹಣದ ಬಲದಿಂದ ಇದುವರೆಗೆ  ಮೆರೆಯುತ್ತಿದ್ದ ರೆಡ್ಡಿ ಸಾಮ್ರಾಜ್ಯದ ಮಾಂಡಲಿಕ ದೊರೆಗಳು  ಈಗ ಸಿಬಿಐ ದಾಳಿಯಿಂದ ಕಂಗೆಟ್ಟಿದ್ದು ಗಡ ಗಡನೆ ನಡುಗತೊಡಗಿದ್ದಾರೆ. ಸಿಬಿಐ ಅಧಿಕಾರಿಗಳು ಯಾವಾಗ ಏನು ಮಾಡುತ್ತಾರೆ. ಎಂಬುದು ತಿಳಿಯದಂತಾಗಿದೆ.

 

loading...

LEAVE A REPLY

Please enter your comment!
Please enter your name here