ರೈತರ ಧರಣಿ ಹಿಂದಕ್ಕೆ

0
14
loading...

ಚಿಕ್ಕೌಡಿ, 15- ಕಾಲುವೆಗೆ ನೀರು ಪೂರೈಕೆಗೆ ಆಗ್ರಹಿಸಿ ನೀರಾವರಿ ನಿಗಮದ ಕಛೇರಿ ಎದುರು ಕಳೆದ ಒಂಭತ್ತು ದಿನಗಳಿಂದ ಧರಣಿ ನಡೆಸುತ್ತಿದ್ದ ರೈತರು ಬುಧವಾರ ತಮ್ಮ ಧರಣಿ ಸ್ಥಗಿತ ಗೊಳಿಸಿದರು.

ಕಬ್ಬೂರ ಕಾಲುವೆಯ ಕೊನೆಯ ಹಳ್ಳಿಗಳಾದ ಮಂಟೂರ, ನಿಪನಾಳ, ಕಟಕಭಾವಿ ಮತ್ತು ದೇವಾ ಪುರಹಟ್ಟಿ ಗ್ರಾಮಗಳಿಗೆ ನೀರು ಪೂರೈಕೆ ಮಾಡಲಾಗುತ್ತದೆ ಎಂದು ಕರ್ನಾಟಕ ನೀರಾವರಿ ನಿಗಮದ ಮುಖ್ಯ ಕಾರ್ಯನಿರ್ವಾಹಕಾಧಿಕಾರಿ ಎ.ಎಲ್. ಜಾನವೇಕರ್ ಭರವಸೆ ನೀಡಿದ ನಂತರ, ಕಳೆದ ಒಂಭತ್ತು ದಿನಗಳಿಂದ ನಡೆಸುತ್ತಿದ್ದ ರೈತರು ತಮ್ಮ ಉಪವಾಸ ಧರಣಿ ಸತ್ಯಾಗ್ರಹ ಹಿಂದಕ್ಕೆ ಪಡೆದುಕೊಂಡಿದ್ದಾರೆ.

ಕಾಲುವೆಯ ಕೊನೆ ಯಂಚಿನ ಹಳ್ಳಿಗಳಿಗೆ ನೀರು ಪೂರೈಕೆ ಮಾಡುವಂತೆ ಕರ್ನಾಟಕ ನೀರಾವರಿ ನಿಗಮದ ಜಿ.ಆರ್.ಬಿ.ಸಿ.ಸಿ. ವಿಭಾಗದ ನಂ. 4 ರ ಕಾರ್ಯನಿವಾಹಕ ಅಭಿ ಯಂತರರಿಗೆ ಕರ್ನಾಟಕ ನೀರಾವರಿ ನಿಗಮದ ಮುಖ್ಯ ಕಾರ್ಯ ನಿರ್ವಾ ಹಕಾಧಿಕಾರಿ ಎ.ಎಲ್. ಜಾನವೇಕರ್ ಅವರು ಸೂಚನೆ ನೀಡಿದರು.

ಧರಣಿ ನಿರತ ರೈತರು ನೀರಾವರಿ ನಿಗಮದ ಕಛೇರಿಗೆ ಬೀಗ ಹಾಕಿ ಪ್ರತಿಭಟನೆ ಆರಂಭಿಸಿದ ನಂತರ ಬೆಳಗಾವಿಯಿಂದ ನೀರಾವರಿ ನಿಗಮದ ಹಿರಿಯ ಅಧಿಕಾರಿಗಳು ಆಗಮಿಸಿ ಭರವಸೆ ನೀಡಿ ರೈತರ ಕಣ್ಣೀರೊರೆಸುವ ಕೆಲಸ ಮಾಡಿ, ಉಪವಾಸ ಧರಣಿ ಕೈಬಿಡುವಂತೆ ಮನವಿ ಮಾಡಿಕೊಂಡು ಹೋಗಿದ್ದಾರೆ. ಆದರೆ, ನಿಜವಾಗಲೂ ರೈತರ ಜಮೀನಿಗೆ ನೀರು ಕೊಡವರೇ ಕಾದು ನೋಡಬೇಕು.

ಉಪವಾಸ ಧರಣಿ ಸತ್ಯಾಗ್ರಹ ನಡೆಸುತ್ತಿರುವವರಲ್ಲಿ ಯಾರೂ ನಮ್ಮ ಅಚ್ಚುಕಟ್ಟುದಾರರಲ್ಲ. ಕಾಲುವೆಗೆ ಹೆಚ್ಚಾಗಿ ಅನಧಿಕೃತವಾಗಿ ಪಂಪ್ಸೆಟ್ ಅಳವಡಿಸಿದವರೇ ಧರಣಿ ನಡೆಸುತ್ತಿದ್ದರು. ಅಚ್ಚುಕಟ್ಟುದಾರರು ಯಾರೂ ಧರಣಿಯಲ್ಲಿ ಪಾಲ್ಗೊಂಡಿರಲಿಲ್ಲ ಎಂದು ನೀರಾವರಿ ನಿಗದಮ ಘಟಪ್ರಭಾ ಬಲದಂಡೆ ಕಾಲುವೆ ನಿರ್ಮಾಣ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರ ಎಸ್.ಜೆ. ಧರ್ಣೇಂದ್ರಕುಮಾರ್ ಹೇಳಿದ್ದಾರೆ.

loading...

LEAVE A REPLY

Please enter your comment!
Please enter your name here