ಲಿನನ್ನ ಭೂಮಿ ನನ್ನ ಕರ್ತವ್ಯಳಿ

0
17
loading...

ಜಮಖಂಡಿ 15- ಸುಧಾರಣೆಯ ಸೋಗಿನಲ್ಲಿ ನೈಸರ್ಗಿಕ ಸಂಪನ್ಮೂಲಗಳು ಹಾಳಾಗುತ್ತಿವೆ. ಕಾರಣ ಸರಳ ಜೀವನ ನಡೆಸಬೇಕು. ನೈಸರ್ಗಿಕ ವಸ್ತುಗಳನ್ನು ಹಿಮಿತವಾಗಿ ಬಳಸವುದರ ಜೊತೆಗೆ  ಪುನರ್ ಬಳಕೆ ಮಾಡಬೇಕು ಎಂದು ಪ್ರಾಚಾರ್ಯ ಡಾ.ಎಸ್. ಸುವರ್ಣಖಂಡಿ ಹೇಳಿದರು.

ಸ್ಥಳೀಯ ಬಿ.ಎಲ್.ಡಿಇ ಕಾಲೇಜಿನ ಎನ್ಎಸಿಸಿ ಹಾಗೂ ಎನ್. ಎಸ್. ಎಸ್. ಘಟಕಗಳು ಜಂಟಿಯಾಗಿ ಭಾನುವಾರ ಏರ್ಪಡಿಸಿದ್ದ ನನ್ನ ಭೂಮಿ-ನನ್ನ ಕರ್ತವ್ಯ ಎಂಬ ವಿನೂತನ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಜನಸಂಖ್ಯೆ ಹೆಚ್ಚುತ್ತಿದೆ. ಕೃಷಿ ಭೂಮಿ ಕ್ಷೇತ್ರ ಕಡಿಮೆಯಾಗುತ್ತಿದೆ. ಇದೇ ರೀತಿ ಮುಂದುವರಿದರೆ ಅಪಾಯಕಾರಿ ದುಷ್ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದರು.

ಭೌತ ಶಾಸ್ತ್ತ್ರ ವಿಭಾಗದ ಮುಖ್ಯಸ್ಥ ಡಾ. ಟಿ.ಪಿ. ಗಿರಡ್ಡಿ ಮುಖ್ಯ ಅತಿಥಿಯಾಗಿ ಮಾತನಾಡಿ, ಭೂಮಿಯ ಮೇಲಿನ ಒಟ್ಟು ನೀರಿನ ಪ್ರಮಾಣದ ಪೈಕಿ ಶೇ. 97 ರಷ್ಟಿರುವ ಸಮುದ್ರದ ನೀರು ನಿರುಪಯುಕ್ತವಾಗಿದೆ. ಶೇ. 2 ರಷ್ಟು ನೀರು ಹಿಮದ ರೂಪದಲ್ಲಿದೆ. ಶೇ. 1ಕ್ಕಿಂತ ಕಡಿಮೆ ಪ್ರಮಾಣದ ನೀರು ಮಾತ್ರ ನೀರಾವರಿಗೆ ಮತ್ತು ಕುಡಿಯಲು ಉಪಯುಕ್ತವಾಗಿದೆ. ಮುಂದೊಂದು ದುನ ಶುದ್ಧ ಕುಡಿಯುವ ನೀರು ದೊರೆಯುವದು ಅಸಾಧ್ಯವಾಗಬಹುದು ಎಂದರು.

ಎನ್ಸಿಸಿ ಅಧಿಕಾರಿ ಡಾ. ಆರ್.ಟಿ. ಪತ್ತಾರ ಪರಿಸರ ರಕ್ಷಣೆಯ ಪ್ರತಿಜ್ಞಾವಿಧಿಯನ್ನು ಎನ್ಸಿಸಿ ಕೆಡೆಟ್ಗಳಿಗೆ ಹಾಗೂ ಎನ್ಎಸ್ಎಸ್ ಸ್ವಯಂ ಸೇವಕರಿಗೆ ಬೋಧಿಸಿದರು. ವಿಜಾಪುರ ಎನ್.ಸಿಸಿ. ಬಟಾಲಿಯನ್ ಅದಿಕಾರಿ ತನ್ವೀರಸಿಂಗ್ ವೇದಿಕೆ ಮೇಲಿದ್ದರು.

ವಿದ್ಯಾ ಹೊಸಕೋಟಿ, ವೀಣಾ ಪ್ರಾರ್ಥನೆ ಹಾಡಿದರು. ರವೀಂದ್ರ ಬಿರಾದಾರ ಸ್ವಾಗತಿಸಿದರು. ಎನ್ಎಸ್ಎಸ್ ಅಧಿಕಾರಿ ಒರೊ. ಎ.ವಿ. ಸೂರ್ಯವಂಶಿ ವಂದಿಸಿದರು. ಶಿವಯ್ಯ ಹಿರೇಮಠ ನಿರೂಪಿಸಿದರು.

loading...

LEAVE A REPLY

Please enter your comment!
Please enter your name here