ವಿಚಾರಣೆಯಿಂದ ಹಿಂದೆ ಸರಿದ ನ್ಯಾಯಮೂರ್ತಿ

0
14
loading...

 

ಬೆಂಗಳೂರು, ಸೆ. 15: ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಮತ್ತು ಶಾಸಕಿ ಅನಿತಾ ಕುಮಾರಸ್ವಾಮಿ ಅವರಿಗೆ ಸಂಬಂಧಿಸಿದ ಪ್ರಕರಣದ ವಿಚಾರಣೆಯನ್ನು ಶ್ರೇಷ್ಟ ನ್ಯಾಯಾಲಯದ ನ್ಯಾಯಮೂರ್ತಿ ಪಿಂಟೋ ಹಿಂದೆ ಸರಿದಿದ್ದಾರೆ.

ಜಂತಕಲ್ ಮೈನಿಂಗ್ ಕಂಪನಿ ಗಣಿಗಾರಿಕೆ ಪರವಾನಿಗೆ ನೀಡಲು ಶಿಫಾರಸ್ಸು ಮಾಡಿದ ಪ್ರಕರಣದಲ್ಲಿ ಎಚ್.ಡಿ. ಕುಮಾರಸ್ವಾಮಿ ಮತ್ತು ವಿಶ್ವಭಾರತಿ ಹೌಸಿಂಗ್ ಸೊಸೈಟಿಯಿಂದ ನಿವೇಶನ ಪಡೆದ ಆರೋಪಕ್ಕೆ ಶಾಸಕಿ ಅನಿತಾಕುಮಾರಸ್ವಾಮಿ ವಿರುದ್ದ ಲೋಕಾಯುಕ್ತ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿದೆ.

ಈ ಆರೋಪಗಳು ರಾಜಕೀಯ ದ್ವೇಷದಿಂದ ಕೂಡಿರುವದರಿಂದ ಲೋಕಾಯುಕ್ತ ನ್ಯಾಯಾಲಯದ ವಿಚಾರಣೆಯ ತಡೆ ನೀಡಬೇಕೆಂದು ಲೋಕಾಯುಕ್ತ ನ್ಯಾಯಾಲಯದ ವಿಚಾರಣೆಗೆ ತಡೆ ನೀಡಬೇಕೆಂದು ಕುಮಾರಸ್ವಾಮಿ ದಂಪತಿಗಳು ಶ್ರೇಷ್ಟ ನ್ಯಾಯಾಲಯದ ಮೊರೆ ಹೋಗಿದ್ದಾರೆ. ಈ ಮೊದಲು ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿಕೇಶವ ನಾರಾಯಣ ಸಂಚಾರಿ ಪೀಠಕ್ಕೆ ವರ್ಗಾವಣೆಗೊಂಡಿದ್ದಾರೆ. ಈಗ ನ್ಯಾಯಮೂರ್ತಿ ಆಗಿರುವ ಪಿಂಟು ಅವರು ವಿನೋದ್ಕುಮಾರ್ ತಮ್ಮ ಕಡೆಗೆ ಕಿರಿಯ ವಕೀಲರಾಗಿ ಕಾರ್ಯ ಮಾಡಿರುವುದರಿಂದ ತಾವು ಈ ಪ್ರಕರಣದ ವಿಚಾರಣೆ ನಡೆಸುವದಿಲ್ಲ ಎಂದು ಹೇಳಿದ್ದಾರೆ

 

loading...

LEAVE A REPLY

Please enter your comment!
Please enter your name here