ವಿಭಾಗ ಮಟ್ಟದ ಯುವ ಸಾಂಸ್ಕ್ಕತಿಕ ಕಲಾ ಮೇಳಕ್ಕೆ ಚಾಲನೆ

0
22
loading...

ಹಾರೂಗೇರಿ : ಅನಾದಿಕಾಲದಿಂದ ಸಾಂಪ್ರದಾಯಿಕವಾಗಿ ಕೊಡುಗೆಯಾಗಿ ಬಂದಿರುವ ಜಾನಪದ ಕಲೆಗಳು ನಶಿಸಿ ಹೋಗದಂತೆ ಅವುಗಳನ್ನು ಉಳಿಸಿ, ಬೆಳೆಸಿ, ಪೋಷಿಸಬೇಕಾದ ಜವಾಬ್ದಾರಿ ಯುವ ಜನತೆಯ ಮೇಲಿದೆ ಎಂದು ಬೆಳಗಾವಿ ನೆಹರು ಯುವಕೇಂದ್ರದ ಜಿಲ್ಲಾ ಯುವ ಸಮನ್ವಯಾಧಿಕಾರಿ ಎಸ್.ಯು. ಜಮಾದಾರ ಹೇಳಿದರು.

ರಾಯಬಾಗ ತಾಲೂಕಿನ ಹಾಲಶಿರಗೂರ ಗ್ರಾಮದಲ್ಲಿ ನೆಹರು ಯುವ ಕೇಂದ್ರ, ಬೆಳಗಾವಿ ಶ್ರೀ ಲಕ್ಷ್ಮೀದೇವಿ ಡೊಳ್ಳು ಗಾಯನ ಸಂಘ ಇವರ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ರಾಯಬಾಗ ಹಾಗೂ ಅಥಣಿ ತಾಲೂಕುಗಳ ವಿಭಾಗ ಮಟ್ಟದ ಯುವ ಸಾಂಸ್ಕ್ಕತಿಕ ಕಲಾ ಮೇಳಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಈ ದಿಸೆಯಲ್ಲಿ ಗ್ರಾಮೀಣ ಕಲೆಗಳ ಉಳಿವಿಗಾಗಿ ನೆಹರು ಯುವ ಕೇಂದ್ರದಿಂದ ಪೂರಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಕಲೆಯ ರಕ್ಷಣೆಗೆ ಮುಂದಾಗಿದೆ. ಜೊತೆಗೆ ಸರಕಾರ ಹಾಗೂ ಸಂಘ-ಸಂಸ್ಥೆಗಳು ಗ್ರಾಮೀಣ ಜಾನಪದಗಳು, ಗರತಿ ಹಾಡುಗಳು ಸೇರಿದಂತೆ ಜನಪದ ಸಾಹಿತ್ಯಕ್ಕೆ ಹೆಚ್ಚಿನ ಒತ್ತು ನೀಡಿ ಮುಂದಿನ ಪೀಳಿಗೆಗೆ ಜನಪದ ಸೊಗಡನ್ನು ಕಾಯ್ದುಕೊಳ್ಳಬೇಕಾದ ಅಗತ್ಯತೆ ಇದೆ ಎಂದು ಅಭಿಪ್ರಾಯಪಟ್ಟರು. ಬಾಳಾಸಾಬ ಪಾಟೀಲ ಅಧ್ಯಕ್ಷತೆಯಲ್ಲಿ ಜರುಗಿದ ಕಾರ್ಯಕ್ರಮವನ್ನು ಹಾಲಶಿರಗೂರ ಕಲ್ಮೇಶ್ವರ ಮಠದ ಶ್ರೀ ವಿರುಪಾಕ್ಷ ದೇವರು ಕಾರ್ಯಕ್ರಮವನ್ನು ಜ್ಯೌತಿ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ಆರಂಭದಲ್ಲಿ ಯುವಜನ ಮೇಳವನ್ನು ಬಾಲಕನಿಂದ ಡೊಳ್ಳು ಬಾರಿಸುವುದರ ಮೂಲಕ ಕಾರ್ಯಕ್ರಮ ಚಾಲನೆ ಪಡೆಯಿತು.

ಮಾಜಿ ತಾ.ಪಂ. ಅಧ್ಯಕ್ಷ ಹಾಲಪ್ಪಾ ಘಾಳಿ, ಮಲ್ಲಪ್ಪಾ ಸವದತ್ತಿ, ಶರದರಾವ ಶಿಗೂರಕರ, ಎ.ಎಲ್ ಸಂಕೇಶ್ವರ, ಶ್ರೀಶೈಲ ಕಾಂಬಳೆ, ಭೀಮಪ್ಪಾ ಕೋಣೆ, ನಾಗಪ್ಪಾ ಶಿರಗಾಂವೆ, ಸದಾಶಿವ ಪೂಜೆರಿ, ಕಲ್ಲಪ್ಪಾ ದಳವಾಯಿ, ಲಕ್ಷ್ಮಣ ದಳವಾಯಿ, ಶ್ರೀಮತಿ ಲಕ್ಷ್ಮೀಬಾಯಿ ಲಂಗೋಟಿ, ರಾಮಚಂದ್ರ ಕಾಂಬಳೆ, ಆರ್.ಎನ್ ಮೂರಾರಿ, ಎಲ್.ಕೆ ಖೋತ ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಶಿವಸಿದ್ದ ಲಾಳಿ, ಸದಾಶಿವ ಬೇಕ್ಕೇರಿ, ಅಕ್ಕಮಹಾದೇವಿ ಮಾದರ, ಮಾರುತಿ ಯಲ್ಲಟ್ಟಿ, ಯಲ್ಲಪ್ಪಾ ಯಲ್ಲಟ್ಟಿ, ದೇವರಾಜ ವಾಘರೆ, ಗಜಾನನ ಶಿಂಗಾಡಿ ಸೇರಿದಂತೆ ಹಲವಾರು ಪ್ರಮುಖರು ಉಪಸ್ಥಿತರಿದ್ದರು. ಹಣಮಂತ ಯಲ್ಲಟ್ಟಿ ಸ್ವಾಗತಿಸಿದರು. ಪರಶುರಾಮ ಸಂಗನ್ನವರ ನಿರೂಪಿಸಿದರು.

 

loading...

LEAVE A REPLY

Please enter your comment!
Please enter your name here