ವಿಭಾಗ ಮಟ್ಟದ ಯುವ ಸಾಂಸ್ಕ್ಕತಿಕ ಕಲಾ ಮೇಳ: ಯಶಸ್ಸು

0
28
loading...

ಚಿಂಚಲಿ (ರಾಯಬಾಗ):-16 ರಾಜ್ಯದ ಗಡಿ ಭಾಗದ ರಾಯಬಾಗ ತಾಲೂಕಿನ ಹಾಲಶಿರಗೂರ ಗ್ರಾಮದಲ್ಲಿ ವಿಭಾಗ ಮಟ್ಟದ ಯುವ ಸಾಂಸ್ಕ್ಕತಿಕ ಕಲಾ ಮೇಳನಡೆದಿದ್ದು, ಈ ಬಾಗದ ಜನತೆಗೆ ಒಂದು ಹಬ್ಬದ ವಾತಾವರಣವೇ ನಿರ್ಮಾಣವಾಗಿತ್ತು.

ನೆಹರು ಯುವ ಕೇಂದ್ರ, ಬೆಳಗಾವಿ ಶ್ರೀ ಲಕ್ಷ್ಮೀದೇವಿ ಡೋಳ್ಳಿನ ಗಾಯನ ಸಂಘ, ಹಾಲಶಿರಗೂರ ಇವರ ಆಶ್ರಯದಲ್ಲಿ ರಾಯಬಾಗ ಹಾಗೂ ಅಥಣಿ ತಾಲೂಕುಗಳ ಜೊತೆ ನಡೆದ ವಿಭಾಗ ಮಟ್ಟದ ಯುವ ಸಾಂಸ್ಕ್ಕತಿಕ ಕಲಾ ಮೇಳ ಯಶಸ್ವಿಯಾಗಲು ಇಡಿ ಗ್ರಾಮವೇ ಕಂಕಣಬದ್ದವಾಗಿತ್ತು.

ಶ್ರೀ ಲಕ್ಷ್ಮೀ ದೇವಸ್ಥಾನದಿಂದ ಹೊರಟ ತಾು ಭುವನೇಶ್ವರಿ ದೇವಿಯ ಮೆರವಣೆಗೆಯು ಗ್ರಾಮದ ಪ್ರಮುಖ ಬೀದಿಗಳಲ್ಲಿ ರಾರಾಜಿಸಿತು. ಇಡಿ ಗ್ರಾಮವೇ ಸ್ವಯಂ ಪ್ರೇರಣೆುಂದ ಮೆರವಣೆಗೆಗೆ ಸಕಲ ಸಿದ್ದತೆ ಮಾಡಿಕೋಂಡು, ಮನೆಗಳ ಮುಂದೆ ರಂಗೋಲಿ ಹಾಕಿ ಸ್ವಾಗತ ಕೋರಿದ್ದವು.

ಕಲಾ ತಂಡದವರಿಂದ ಲೆಜಿಮ ಮೇಳ, ಕರಡಿ ಮಜಲು , ಖಣಿ ವಾದನ, ಕದುರೆ ಕುಣಿತ, ಕೈಪಟ್ಟ, ಚರ್ಮ ವಾದ್ಯ, ತಾಸೇ ವಾದನ, ಇತ್ಯಾದಿ ಹಲವು ತಂಡಗಳು ಮೆರವಣೆಗೆಗೆ ಮೆರಗು ತಂದು, ಜನತೆಗೆ ಮನರಂಜನೆ ನೀಡಿದವು. ಕರಬಲ್ ಮೇಳದವರು ಹಾಕಿದ ಹೆಜ್ಜೆ ಜನರನ್ನು ಆರ್ಕಸಿತ್ತು. ಜನರು ಸಾವಿರಾರು ಸಂಖ್ಯೆಯಲ್ಲಿ ನೆರದಿದ್ದರು.

ಕಾರ್ಯಕ್ರಮವನ್ನು ಶ್ರೌ.ಬ್ರ.ನಿ.ಶ್ರೀ ವಿರುಪಾಕ್ಷ ದೇವರು ಕಲ್ಮೇಶ್ವರ ಮಠ ಶಿರಗೂರ ಹಾಗೂ ಹಾಲಪ್ಪಾ ಘಾಳಿಯವರು ಜ್ಯೌತಿ ಬೆಳಗಿಸುದರ ಮೂಲಕ ವಿಭಾಗ ಮಟ್ಟದ ಯುವ ಸಾಂಸ್ಕ್ಕತಿಕ ಕಲಾ ಮೇಳಕ್ಕೆ ಚಾಲನೆ ನೀಡಿದರು.

ಯುವ ಜನಾಂಗವು ಕಲೆಯನ್ನು ಕೊಲೆ ಯಾಗದಂತೆ ನೋಡಿಕೋಳಬೇಕು, ನಮ್ಮ ಸಂಪ್ರದಾುಕವಾಗಿ ಬಂದ ಕಲೆಗಳು ನಶಿಸಿ ಹೊಗದಂತೆ, ಸರಕಾರ ಮತ್ತು ಸಂಘ, ಸಂಸ್ಥೆಗಳ ಹಾಗೂ ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ. ಹಾಗೂ ಗ್ರಾಮೀಣ ಜಾನಪದಗಳು, ಗರತಿ ಹಾಡುಗಳನ್ನು ನಮ್ಮ ಯುವ ಜನತೆ ಉಳಸಿ, ಬೆಳಸಬೇಕು.

ಜೊತೆಗೆ ಗ್ರಾಮೀಣ ಕಲೆಗಳ ಉಳಿವಿಗಾಗಿ ನೆಹರು ಯುವ ಕೇಂದ್ರದಿಂದ ಹಮ್ಮಿಕೋಳ್ಳುವ ಕಾರ್ಯಕ್ರಮಗಳ ಕುರಿತು ನೆಹರು ಯುವ ಕೇಂದ್ರದ ಜಿಲ್ಲಾ ಯುವ ಸಮನ್ವಯಾಧಿಕಾರಿಯಾದ ಎಸ್.ಯು ಜಮಾದಾರ ಮಾತನಾಡಿದರು.

ಸಮಾರಂಭದ ಅಧ್ಯಕ್ಷತೆಯನ್ನು ಬಾಳಾಸಾಬ ಪಾಟೀಲ ವಗಿಸಿದ್ದರು. ಮುಖ್ಯ ಅಥಿತಿಯಾಗಿ ಮಲ್ಲಪ್ಪಾ ಸವದತ್ತಿ, ಶರದರಾವ ಶಿಗೂರಕರ, ಎ.ಎಲ್ ಸಂಕೇಶ್ವರ, ಶ್ರೀಶೈಲ ಕಾಂಬಳೆ, ಭೀಮಪ್ಪಾ ಕೋಣೆ, ನಾಗಪ್ಪಾ ಶಿರಗಾಂವೆ, ಸದಾಶಿವ ಪೂಜೆರಿ, ಕಲ್ಲಪ್ಪಾ ದಳವಾು, ಲಕ್ಷ್ಮಣ ದಳವಾು, ಶ್ರೀಮತಿ ಲಕ್ಷ್ಮೀಬಾು ಲಂಗೋಟಿ, ರಾಮಚಂದ್ರ ಕಾಂಬಳೆ, ಆರ್.ಎನ್ ಮೂರಾರಿ, ಎಲ್. ಕೆ ಖೋತವಹಿಸಿದ್ದರು

ಕಾರ್ಯಕ್ರಮದಲ್ಲಿ ಶಿವಸಿದ್ದ ಲಾಳಿ, ಸದಾಶಿವ ಬೇಕ್ಕೇರಿ, ಅಕ್ಕಮಹಾದೇವಿ ಮಾದರ, ಮಾರುತಿ ಯಲ್ಲಟ್ಟಿ, ಯಲ್ಲಪ್ಪಾ ಯಲ್ಲಟ್ಟಿ, ದೇವರಾಜ ವಾಘರೆ, ಗಜಾನನ ಶಿಂಗಾಡಿ ಸೇರಿದಂತೆ ನೂರಾರು ಕಲಾ ಅಭಿಮಾನಿಗಳು ಉಪಸ್ಥಿತರಿದ್ದರು. ಪರಶುರಾಮ ಸಂಘನ್ನವರ ನಿರೂಪಿಸಿದರು. ಹಣಮೋತ ಯಲ್ಲಟ್ಟಿ ಸ್ವಾಗತಿಸಿ ವಂದಿಸಿದರು.

loading...

LEAVE A REPLY

Please enter your comment!
Please enter your name here