ವೇತನ ವಿಳಂಬ ಮಾಡಿದರೆ ಸಂಬಂಧಪಟ್ಟವರ ಮೇಲೆ ಕ್ರಮ

0
28
loading...

ರಾಮದುರ್ಗ: ಮಹಾತ್ಮಾ ಗಾಂಧಿ ರಾ್ತ್ರಯ ಉದ್ಯೌಗ ಖಾತ್ರಿ ಯೋಜನೆಯಲ್ಲಿ ಕೆಲಸ ಮಾಡಿರುವ ಕೂಲಿಕಾರರ ವೇತನವನ್ನು 15 ದಿನಗಳಲ್ಲಿ ಪಾವತಿ ಮಾಡಬೇಕು ಇಲ್ಲದಿದ್ದರೆ ಕಠಿಣ ಕ್ರಮ ತೆಗೆದುಕೊಳ್ಳಬೇಕಾಗುತ್ತದೆ ಎಂದು ಗ್ರಾಮ ಪಂಚಾಯತ ಅಭಿವೃದ್ದಿ ಅಧಿಕಾರಿಗಳಿಗೆ ಹಾಗೂ ಕಾರ್ಯದರ್ಶಿಗಳಿಗೆ ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ಅಜಯ ನಾಗಭೂಷಣ ಎಚ್ಚರಿಕೆ ನೀಡಿದರು.

ತಾಲೂಕಾ ಪಂಚಾಯತ ಸಭಾ ಭವನದಲ್ಲಿ ನಡೆದ ಜಿಲ್ಲಾ ಪಂಚಾಯತ ಯೋಜನೆಗಳ ಪ್ರಗತಿ ಪರೀಶೀಲನಾ ಸಭೆಯಲ್ಲಿ ಮಾತನಾಡಿದ ಅವರು ಯಾವದೇ ಕಾರಣಕ್ಕೂ ವೇತನ ಪಾವತಿ ವಿಳಂಭವಾಗದಂತೆ ನೋಡಿಕೊಳ್ಳಲು ತಿಳಿಸಿದರಲ್ಲದೆ ವಿಳಂಭವಾದರೆ ಬಡ್ಡಿ ಸೇರಿಸಿ ವೇತನ ನೀಡಬೇಕಾಗುತ್ತದೆ ಬಡ್ಡಿ ಹಣವನ್ನು ಸಂಬಂಧಿಸಿದ ಅಧಿಕಾರಿಯ ಸಂಬಳದಿಂದ ಕಡಿತಗೊಳಿಸಲಾಗುವದು ಎಂದು ಎಚ್ಚರಿಕೆ ನೀಡಿದ ಅವರು ಬಹುತೇಕ ಗ್ರಾಮ ಪಂಚಾಯತಗಳಲ್ಲಿ ಈ ವರ್ಷದ ಅನುದಾನ ಖರ್ಚು ಮಾಡದೇ ಇರುವದಕ್ಕೆ ಅಸಮದಾನ ವ್ಯಕ್ತಪಡಿಸಿದರಲ್ಲದೆ ಒಂದು ತಿಂಗಳಲ್ಲಿ ಪ್ರಗತಿ ತೋರಿಸಲು ಹೇಳಿ ವಷ್ದ ಕೊನೆಯಲ್ಲಿ ಖರ್ಚು ಮಾಡದಂತೆ ತಿಳಿಸಿದರು.

ಉದ್ಯೌಗ ಖಾತ್ರಿ ಯೋಜನೆಯ ಅಂತರಜಲ ಹೆಚ್ಚಳಕ್ಕೆ ಆಧ್ಯತೆ ನೀಡಬೇಕೆಂದು ಹೇಳಿ ನಿರ್ಮಲ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾದ ಪಂಚಾಯತಗಳಲ್ಲಿ ಶೌಚಾಲಯ ನಿರ್ಮಾಣಕ್ಕೆ ಹೆಚ್ಚಿನ ಒತ್ತು ನೀಡಲು ತಿಳಿಸಿ ಈ ನೀಡಿರುವ ಅನುದಾನ ಪೂರ್ತಿಯಾಗಿ ಖರ್ಚು ಮಾಡಿದರೆ ಹೆಚ್ಚುವರಿ ಅನುದಾನ ನೀಡುವದಾಗಿ ಹೇಳಿ ಪ್ರತಿ ತಿಂಗಳು 50 ಶೌಚಾಲಯ ನಿರ್ಮಾಣದ ಗುರಿ ನಿಗಧಿಪಡಿಸಿ ಕೆಲಸ ಮಾಡು ಹೇಳಿದರು.

ಅರಣ್ಯ ಇಲಾಖೆ ರಸ್ತೆ ಬದಿ ಮತ್ತು ಸಾರ್ವಜನಿಕ ಸ್ಥಳದಲ್ಲಿ ನೆಡುವ ಸಸಿಗಳ ಸಂರಕ್ಷಣೆ ಕೂಡಾ ಅಗತ್ಯ ಎಂದು ಹೇಳಿದರು.

ಶಾಲೆಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಲು 62 ಶಾಲೆಗಳನ್ನು ಆಯ್ಕೆ ಮಾಡಲಾಗಿದೆ ಯಾವುದಾದರೆ ಶಾಲೆಗಳು ಉಳಿದಿದ್ದರೆ ಅವುಗಳ ಮಾಹಿತಿ ನೀಡುವಂತೆ ತಿಳಿಸಿದರು.

ಗ್ರಾಮ ಪಂಚಾಯತ ಕರ ಹೆಚ್ಚಳ ಮಾಡಬೇಕು ಅಂದರೆ ಮಾತ್ರ ಪಂಚಾಯತಗಳಲ್ಲಿ ಸೇವೆ ಸಲ್ಲಿಸುವ ಸಿಬ್ಬಂದಿಗೆ ಸರಿಯಾಗಿ ವೇತನ ನೀಡಲು ಸಾಧ್ಯವಾಗುತ್ತದೆ ಸರ್ಕಾರದ ಅನುದಾನವನ್ನು ಪ್ರಗತಿ ಕಾರ್ಯಗಳಿಗೆ ಉಪಯೋಗಿಸಬಹುದು ಅದಕ್ಕಾಗಿ ಬೇಗನೆ ಕರ ಹೆಚ್ಚಿಸಲು ಪಂಚಾಯತಗಳ ಸದಸ್ಯರಿಗೆ ಮನವರಿಕೆ ಮಾಡಿ ಹೆಚ್ಚಿಸಬೇಕೆಂದು ಹೇಳಿದರು.

ಸಭೆಯಲ್ಲಿ ವಿವಿಧ ಯೋಜನೆ ಅಡಿಯಲ್ಲಿ ನಿರ್ಮಿಸುವ ಗೃಹ ನಿರ್ಮಾಣ, ಮತ್ತು ಪಡಿತರ ಚೀಟಿ ಹೊಂದಾಣಿಕೆ ಸೇರಿದಂತೆ ಹಲವಾರು ವಿಷಯಗಳ ಕುರಿತು ಚರ್ಚೆ ಮಾಡಲಾಯಿತು. ಈ ಸಂದರ್ಭದಲ್ಲಿ ಅಧಿಕಾರಿಗಳು ಯಾಓ ರೀತಿ ಕಾರ್ಯವನ್ನು ನಿರ್ವಹಿಸಬೇಕು ಎಂಬ ಬಗ್ಗೆ ಅವರು ಸೂಕ್ತ ಮಾರ್ಗದರ್ಶನ ಮತ್ತು ಸಲಹೆ ಸೂಚನೆಗಳನ್ನು ನೀಡಿದರು. ಅಲ್ಲದೆ ಪ್ರಗತಿ ಮಾಡದಿದ್ದರೆ ಆ ಅಧಿಕಾರಿಗಳ ಮೇಲೆ ಸೂಕ್ತ ಕ್ರಮವನ್ನು ತೆಗೆದುಕೊಳ್ಳುವ ಎಚ್ಚರಿಕೆಯನ್ನು ಅವರು ನೀಡಿದರು.

ಅಲ್ಲದೆ ಕೆಲಸವನ್ನು ಯಾವ ರೀತಿಯಲ್ಲಿ ಮಾಡಬೇಕು ಎಂಬ ಬಗ್ಗೆ ಕೆಳ ಹಂತದ ಅಧಿಕಾರಿಗಳಿಗೆ ಮಾರ್ಗದರ್ಶನವನ್ನು ಅವರು ಮಾಡಿದರು.

ಜೊತೆಗೆ ಅಧಿಕಾರಿಗಳ ಸಂದೇಹಗಳಿಗೆ ಸಮಾಧಾನ ಮತ್ತು ಪರಿಹಾರ ನೀಡುವ ಕಾರ್ಯ ಮಾಡಿದರು.

ಸಭೆಯಲ್ಲಿ ತಾಲೂಕಾ ನೋಡಲ್ ಅಧಿಕಾರಿ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಕೆ.ಎಚ್.ಓಬಳಪ್ಪ, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ಎಂ.ಎಂ.ಗೂಳಪ್ಪನವರ ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here