ವೈಸ್ ಆಫ್ ಬೆಳಗಾವಿಯ ಸಂಗೀತ ಸ್ಪರ್ಧೆ

  0
  18
  loading...

  ಬೆಳಗಾವಿ, ಸೆ. 13: ಬೆಳಗಾವಿಯ ದಕ್ಷಿಣ ಶಾಸಕ ಅಭಯ ಪಾಟೀಲ್ ಪ್ರಯೋಜಿಸಿರುವ ದಿ. ವೈಸ್ ಆಫ್ ಬೆಳಗಾವಿ ಲಿಟಲ್ ಚಾಂಪ್ ಹಾಗೂ ವೈಸ್ ಆಫ್ ಬೆಳಗಾವಿ 2011ರ ಕಾರ್ಯಕ್ರಮದಲ್ಲಿ ಬೆಳಗಾವಿ ನಗರ ಬೆಳಗಾವಿ ತಾಲೂಕಿನ ಜನರು ಮತ್ತು ಶಾಲೆ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ಭಾಗವಹಿಸಬಹು ದಾಗಿದೆ.

  7ನೇ ತರಗತಿಯಿಂದ 10ನೇ ತರಗತಿಯಲ್ಲಿ ವ್ಯಾಸಂಗ ಮಾಡುವ ವಿದ್ಯಾರ್ಥಿಗಳು ಲಿಟಲ್ ಚಾಂಪ್ದಲ್ಲಿ ಭಾಗವಹಿಸಬಹುದಾಗಿದೆ. 16 ರಿಂದ 22 ವಯಸ್ಸಿನ ವಯಸ್ಸಿನವರು ವೈಸ್ ಆಫ್ ಬೆಳಗಾವಿಯಲ್ಲಿ ಭಾಗವಹಿಸಬಹುದು. ಸದರಿ ಸ್ಪರ್ಧೆಗೆ ಭಾಗವಹಿಸುವರು. ನಿಗದಿತ ಅರ್ಜಿ ಫಾರಂಗಳನ್ನು ಭರ್ತಿ ಮಾಡಿ ಈ ತಿಂಗಳ 20ರೊಳಗಾಗಿ ಚಿಂತಾಮಣಿ ರೆಸಿಡೆನ್ಸಿ ಹರಿಮಂದಿರ ಹತ್ತಿರ ಅನಗೋಳ ರಸ್ತೆ ಬೆಳಗಾವಿಯಲ್ಲಿ ಸಲ್ಲಿಸಬೇಕು. ಅರ್ಜಿ ಫಾರಂಗಳನ್ನು ಎಲ್ಲ ಶಾಲೆ ಕಾಲೇಜುಗಳಿಂದ ಆಯಾ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು ಪಡೆಯಬಹುದು. ವೈಸ್ ಆಫ್ ಬೆಳಗಾವಿ ಲಿಟಲ್ ಚಾಂಪ್ ಪ್ರಥಮ ಬಹುಮಾನ 25 ಸಾವಿರ ಆಗಿದೆ. ವೈಸ್ ಆಫ್ ಬೆಳಗಾವಿಯಲ್ಲಿ ವಿಜೇತರಾದ ಮಹಿಳೆ ಮತ್ತು ಪುರುಷರಿಗೆ ಪ್ರತ್ಯೇಕವಾಗಿ 50 ಸಾವಿರ ರೂಪಾಯಿ ಪ್ರಥಮ ಬಹುಮಾನ ಇದೆ. ಸ್ಪರ್ಧೆಯಲ್ಲಿ ಭಾಗವಹಿಸುವವರು ಕಡ್ಡಾಯವಾಗಿ ನೋಂದಣಿ ಮಾಡಬೇಕು ಹೆಚ್ಚಿನ ವಿಚಾರಣೆಗೆ ಅವರು ದೂರವಾಣಿ ಡಬಲ್ 7795446103 ಅಥವಾ ಓಂಕಾರ್ ಭಾವಿವಾಡೇಕರ್ ಅವರನ್ನು ಸಂಪರ್ಕಸಲು ಪ್ರಕಟಣೆಯಲ್ಲಿ ಕೋರಲಾಗಿದೆ.

  loading...

  LEAVE A REPLY

  Please enter your comment!
  Please enter your name here