ವ್ಯಾಜ್ಯ ವಿಲೇವಾರಿ ಕೇಂದ್ರಗಳ ಸ್ಥಾಪನೆಗೆ 6 ಕೋಟಿ ರೂ. ಅನುದಾನ

0
21
loading...

ಧಾರವಾಡ : ರಾಜ್ಯದ ನ್ಯಾಯಾಲಯಗಳಲ್ಲಿರುವ ವ್ಯಾಜ್ಯಗಳನ್ನು ಅತಿ ಶೀಘ್ರದಲ್ಲಿ ವಿಲೇವಾರಿಗೊಳಿಸಲು ಕೇಂದ್ರ ಸರ್ಕಾರ 13ನೇ ಹಣಕಾಸು ಯೋಜನೆಯಡಿ ರಾಜ್ಯಕ್ಕೆ 3.24 ಕೋಟಿ ರೂ.ಗಳ ಅನುದಾನವನ್ನು ಕಾನೂನು ನೆರವು ಹಾಗೂ ಲೋಕ ಅದಾಲತ್ ನಿರ್ವಹಣೆಗೆ ನಡಿದೆ ಎಂದು ರಾಜ್ಯ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ಮಂಜುಳ ಚೆಲ್ಲೂರ್ ಹೇಳಿದರು.

ನಗರದ ದಿವಾಣಿ ನ್ಯಾಯಾಲಯದ ಆವರಣದಲ್ಲಿಂದು ಲೋಕೋಪಯೋಗಿ ಇಲಾಖೆಯಿಂದ ಸುಮಾರು 265 ಲಕ್ಷ ರೂ.ಗಳ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಪರ್ಯಾಯ ವ್ಯಾಜ್ಯ ವಿಲೇವಾರಿ ಕೇಂದ್ರದ ಕಟ್ಟಡ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡುತ್ತಿದ್ದರು.

ಲೋಕ ಅದಾಲತ್ನಲ್ಲಿ ಈ ಹಿಂದೆ ಉಚಿತ ಕಾನೂನು ನೆರವು ಪಡೆಯಲು ನಗದಿಪಡಿಸಲಾಗಿದ್ದ ವಾರ್ಷಿಕ ಆದಾಯದ ಮಿತಿಯನ್ನು 50 ಸಾವಿರದಿಂದ 1 ಲಕ್ಷಕ್ಕೆ ಹೆಚ್ಚಿಸಲಾಗಿದ್ದು, ಇದರ ಸದುಪಯೋಗವನ್ನು ಸಾರ್ವಜನಿಕರು ಪಡೆಯಬೇಕು ಎಂದು ನ್ಯಾಯಮೂರ್ತಿ ಚೆಲ್ಲೂರು ಹೇಳಿದರು. ಇದಲ್ಲದೆ 13 ನೇ ಹಣಕಾಸು ಯೋಜನೆಯಡಿ ಪ್ರತಿ ರಾಜ್ಯಗಳಿಗೆ 6 ಕೋಟಿ ರೂ. ಅನುದಾನವನ್ನು ಕೇಂದ್ರ ಸರ್ಕಾರ ಪರ್ಯಾಯ ವ್ಯಾಜ್ಯ ವಿಲೇವಾರಿ ಕೇಂದ್ರಗಳ ಸ್ಥಾಪನೆಗೆ ನಡಿದೆ. ಈ ಕೇಂದ್ರದಲ್ಲಿ ಕಂಪ್ಯೂಟರ್ ಕೋಣೆ, ಗ್ರಂಥಾಲಯ, ಕಕ್ಷಿದಾರರ ನೀರೀಕ್ಷಣಾ ಕೊಠಡಿ, ಮಧ್ಯಸ್ಥಿಕೆ ಕೇಂದ್ರ ಹಾಗೂ ಒಂದನೇ ಮಹಡಿಯಲ್ಲಿ ಆರ್ಬಿಟ್ರೇಟರ ಕೇಂದ್ರಗಳು ಒಳಗೊಂಡಿವೆ ಎಂದರು.

ಕಾನೂನು ಅರಿವು ಕಾರ್ಯಕ್ರಮ ಅನುಷ್ಠಾನದಲ್ಲಿ ಧಾರವಾಡ ವಕೀಲರ ಸಂಘವು ರಾಜ್ಯದಲ್ಲಿಯೇ ಮುಂಚೂಣಿಯಲ್ಲಿದೆ. ಕಕ್ಷಿದಾರರಿಗೆ, ವಕೀಲರಿಗೆ, ಸಾರ್ವಜನಿಕರಿಗೆ ಹಾಗೂ ನ್ಯಾಯಾಧೀಶರಿಗೆ ಕಾನೂನು ಅರಿವು ಸರಿಯಾದ ಸಮಯದಲ್ಲಿ ದೊರಕಿಸಿಕೊಡಲಾಗುತ್ತಿದೆ. ಈ ಪರ್ಯಾಯ ವ್ಯಾಜ್ಯ ವಿಲೇವಾರಿ ಕೇಂದ್ರ ರಾಜ್ಯದಲ್ಲಿಯೇ ಪ್ರಥಮವಾಗಿದೆ. ಆಯಾ ಜಿಲ್ಲಾ ನ್ಯಾಯಾಧೀಶರುಗಳಿಗೆ ಇಂತಹ ಕೇಂದ್ರಗಳನ್ನು ಆದಷ್ಟು ಶೀಘ್ರದಲ್ಲಿಯೇ ಸ್ಥಾಪಿಸಲು ನಿರ್ದೇಶನ ನೀಡಲಾಗಿದೆ ಎಂದು ಅವರು ತಿಳಿಸಿದರು.

ಕಡುಬಡವರಿಗೆ ಉಚಿತ ಕಾನೂನು ನೆರವು ಒದಗಿಸುವ ನಿಟ್ಟಿನಲ್ಲಿ ಕಾನೂನು ನೆರವು ಪ್ರಾಧಿಕಾರ ಕಾರ್ಯನಿರ್ವಹಿಸುತ್ತಿದ್ದು, ಅದರ ಪ್ರಯೋಜನೆಯನ್ನುಬಹಳಷ್ಟು ಜನರು ಪಡೆಯಲು ಸಾಧ್ಯವಾಗಿಲ್ಲ. ಈ ನಿಟ್ಟಿನಲ್ಲಿ ಆದಾಯ ಮಿತಿ ಹೆಚ್ಚಿಸಿರುವುದರಿಂದ ಹೆಚ್ಚು ಜನ ಇದರ ಪ್ರಯೋಜನೆ ಪಡೆಯಲು ಸಾಧ್ಯ. ಈ ಕುರಿತು ಜಾಗೃತಿ ಮೂಡಿಸುವುದು ನ್ಯಾಯಾಧೀಶರ, ವಕೀಲರ ಜವಾಬ್ದಾರಿ ಆಗಿದೆ ಎಂದರು. ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ಕೆ. ನಟರಾಜನ್ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ವಕೀಲರ ಸಂಘದ ಅಧ್ಯಕ್ಷ ವಿ.ಡಿ. ಕಾಮರೆಡ್ಡಿ, ಪಿಡಬ್ಲ್ಯೂಡಿ ಕಾರ್ಯನರ್ವಾಹಕ ಅಭಿಯಂತರ ಎಂ.ಬಿ. ಗುಡದಪ್ಪನವರ ಉಪಸ್ಥಿತರಿದ್ದರು.

ಆರಂಭದಲ್ಲಿ ಪ್ರಧಾನ ಹಿರಿಯ ದಿವಾಣಿ ನ್ಯಾಯಾಧೀಶರಾದ ಸಿ. ರಾಜಶೇಖರ ಸ್ವಾಗತಿಸಿದರು. ವಿವಿಧ ನ್ಯಾಯಾಲಯಗಳ ನ್ಯಾಯಾಧೀಶರು, ವಕೀಲರು ಸೇರಿದಂತೆ ಅನೇಕರು ಸಮಾರಂಭದಲ್ಲಿ ಉಪಸ್ಥಿತರಿದ್ದರು.

loading...

LEAVE A REPLY

Please enter your comment!
Please enter your name here